ಪ್ರಧಾನ ಮಂತ್ರಿಯವರ ಕಛೇರಿ

12ನೇ ತರಗತಿ ವಿದ್ಯಾರ್ಥಿಗಳು ಮತ್ತು ಪಾಲಕರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ


ಹಿಂದಿಯೇತರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಮಾತನಾಡುವಾಗ ವಿದ್ಯಾರ್ಥಿಗಳ ಸ್ವಂತ ಭಾಷೆಯ ಪದಗಳನ್ನೇ ಬಳಸಿದ ಪ್ರಧಾನಮಂತ್ರಿ

ಲಸಿಕೆ ನೋಂದಣಿಗೆ ತಮ್ಮ ಕುಟುಂಬದ ಸದಸ್ಯರು ಮತ್ತು ನೆರೆಹೊರೆಯವರಿಗೆ ನೆರವಾಗುವಂತೆ ವಿದ್ಯಾರ್ಥಿಗಳಿಗೆ ಆಗ್ರಹಿಸಿದ ಪ್ರಧಾನಮಂತ್ರಿ

Posted On: 03 JUN 2021 10:48PM by PIB Bengaluru

ಅಚ್ಚರಿಯೆಂಬಂತೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಾಲಿ ನಡೆಯುತ್ತಿರುವ ಸಿಬಿಎಸ್.. 12ನೇ ತರಗತಿ ವಿದ್ಯಾರ್ಥಿಗಳ ಸಂವಾದದಲ್ಲಿ ಭಾಗಿಯಾದರು. ಸಂವಾದವನ್ನು ಶಿಕ್ಷಣ ಸಚಿವಾಲಯ ಆಯೋಜಿಸಿದ್ದು, ಇದರಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗಿಯಾಗಿದ್ದರು.

ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು  ವರ್ಚುವಲ್ ಸಂವಾದದಲ್ಲಿ  ಭಾಗಿಯಾಗಿದ್ದರು. ವಿದ್ಯಾರ್ಥಿಗಳೊಂದಿಗೆ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ಹಿಂದಿಯೇತರ ಪ್ರದೇಶಗಳ ವಿದ್ಯಾರ್ಥಿಗಳೊಂದಿಗೆ ಅವರದೇ ಭಾಷೆಯ ಪದ ಬಳಸಿ ಮಾತನಾಡಿದರು

ಪ್ರಧಾನಮಂತ್ರಿಯವರು ವಿದ್ಯಾರ್ಥಿಗಳ ಧನಾತ್ಮಕತೆ ಮತ್ತು ಪ್ರಾಯೋಗಿಕತೆಯನ್ನು ಶ್ಲಾಘಿಸಿ, ನಮ್ಮ ವಿದ್ಯಾರ್ಥಿಗಳು ಎಲ್ಲ ಸಂಕಷ್ಟ ಮತ್ತು ಸವಾಲುಗಳನ್ನು ಶಕ್ತಿಯಾಗಿ ಪರಿವರ್ತಿಸುತ್ತಾರೆ ಮತ್ತು ಅದುವೇ ದೇಶದ ಶಕ್ತಿಯಾಗಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಿಳಿಸಿದರು. ಸಂವಾದದ ವೇಳೆ ವಿದ್ಯಾರ್ಥಿಗಳ ವಿಶ್ವಾಸಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಿಮ್ಮ ಅನುಭವಗಳು ಅತ್ಯಂತ ಮಹತ್ವದ್ದಾಗಿವೆ ಮತ್ತು ಅವು ನಿಮ್ಮ ಬದುಕಿನ ಪ್ರತಿಯೊಂದು ಹಂತದಲ್ಲೂ ಉಪಯುಕ್ತವಾಗಿರುತ್ತವೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ತಂಡ ಸ್ಫೂರ್ತಿಯ ಬಗ್ಗೆ ಶಾಲೆಗಳು ಮತ್ತು ಕಾಲೇಜಿನಲ್ಲಿ ಕಲಿತ ಉದಾಹರಣೆಗಳನ್ನು ಪ್ರಧಾನಮಂತ್ರಿಯವರು ನೀಡಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ನಾವು ಪಾಠಗಳನ್ನು ಹೊರ ರೀತಿಯಲ್ಲಿ ಕಲಿತೆವು ಮತ್ತು ಕಠಿಣ ಸಂದರ್ಭದಲ್ಲಿ ದೇಶದ ತಂಡ ಸ್ಫೂರ್ತಿಯ ಶಕ್ತಿಯನ್ನು ನೋಡಿದೆವು ಎಂದು ತಿಳಿಸಿದರು.

ಜೂನ್ 5 ಪರಿಸರ ದಿನವಾಗಿದ್ದು, ಪರಿಸರಕ್ಕೆ ಏನಾದರೂ ನೀಡುವಂತೆ ಅವರು ವಿದ್ಯಾರ್ಥಿಗಳಿಗೆ ಆಗ್ರಹಿಸಿದರು ಅದೇ ರೀತಿ ಜೂನ್ 21 ಅಂತಾರಾಷ್ಟ್ರೀಯ ಯೋಗ ದಿನವಾಗಿದ್ದು, ನಿಮ್ಮ ಕುಟುಂಬದವರೊಂದಿಗೆ ಯೋಗ ಮಾಡಿ ಎಂದರು. ಲಸಿಕೆಗೆ ನೋಂದಣಿ ಮಾಡಿಸುವುದಕ್ಕೆ ಕುಟುಂಬದ ಸದಸ್ಯರಿಗೆ ಮತ್ತು ನೆರೆಹೊರೆಯವರಿಗೆ ನೆರವಾಗುವಂತೆ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.  

***



(Release ID: 1725466) Visitor Counter : 173