ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಲಸಿಕಾರರಣದ ಬಗ್ಗೆ ಇರುವ ಸುಳ್ಳುಸುದ್ದಿಗಳ ತಳ್ಳಿಹಾಕುವಿಕೆ


ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್ -19 ಲಸಿಕೆ ನೀಡುವಿಕೆಯ ತಂತ್ರವು ಲಸಿಕೆಯ ಸರಿಸಮಾನವಾದ ವಿತರಣೆಯನ್ನು ಖಾತ್ರಿಗೊಳಿಸುತ್ತದೆ

ಖಾಸಗಿ ಆಸ್ಪತ್ರೆಗಳು ಮೇ 2021 ರಲ್ಲಿ 1.20 ಕೋಟಿ ಡೋಸ್ ಕೋವಿಡ್ ಲಸಿಕೆಗಳನ್ನು ಪಡೆದಿವೆ

Posted On: 05 JUN 2021 7:42PM by PIB Bengaluru

ಭಾರತ ಸರ್ಕಾರವು ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟ ಸಹಭಾಗಿತ್ವದಲ್ಲಿ 2021 ಜನವರಿ 16 ರಿಂದ ವಿಶ್ವದ ಅತಿದೊಡ್ಡ ಕೋವಿಡ್ -19 ಲಸಿಕಾ ಅಭಿಯಾನಗಳಲ್ಲಿ ಒಂದನ್ನು ನಡೆಸುತ್ತಿದೆ.

ಭಾರತದ ಲಸಿಕಾ ಅಭಿಯಾನದಲ್ಲಿ ಲಸಿಕೆ ವಿತರಣೆಯಲ್ಲಿ ಅಸಮಾನತೆ ಇದೆ ಎಂದು ಕೆಲವು ಮಾಧ್ಯಮದ ವರದಿಗಳು ಬಂದಿವೆ. ಈ ವರದಿಗಳು ನಿಖರವಾಗಿಲ್ಲ ಮತ್ತು ಕಾಲ್ಪನಿಕ ಸ್ವರೂಪದಲ್ಲಿವೆ.

‘ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕಾ ತಂತ್ರ 'ವನ್ನು ಮೇ 1, 2021 ರಿಂದ ಅಳವಡಿಸಲಾಯಿತು, ಇದು ಕೋವಿಡ್ -19 ಲಸಿಕಾಕರಣ ಅಭಿಯಾನದ ಹಂತ -3 ಕ್ಕೆ ಮಾರ್ಗದರ್ಶನ ನೀಡುತ್ತಿದೆ. ಖಾಸಗಿ ವಲಯಕ್ಕೆ ದೊಡ್ಡ ಪಾತ್ರವನ್ನು ಕಲ್ಪಿಸುವ ಮತ್ತು ಕೇಂದ್ರವು 25% ಲಸಿಕೆಗಳನ್ನು ಖಾಸಗಿ ವಲಯಕ್ಕೆ ಮೀಸಲಿಡುತ್ತಿರುವ ಉದಾರೀಕೃತ ಲಸಿಕೆ ನೀತಿಯನ್ನು ಪುನರುಚ್ಚರಿಸಲಾಗಿದೆ. ಈ ಕಾರ್ಯವಿಧಾನವು  ಪಾವತಿಸಲು ಶಕ್ತರಾದ ಮತ್ತು ಖಾಸಗಿ ಆಸ್ಪತ್ರೆಗೆ ಹೋಗಲು ಬಯಸುವವರಿಗೆ ಲಸಿಕೆ ಪಡೆಯುವುದನ್ನು   ಸುಗಮಗೊಳಿಸುತ್ತದೆ ಮತ್ತು ಸರ್ಕಾರಿ ಲಸಿಕೆ ನೀಡಿಕೆಯ ಸೌಲಭ್ಯಗಳ ಮೇಲಿನ ಕಾರ್ಯಾಚರಣೆಯ ಒತ್ತಡವನ್ನು ಕಡಿಮೆ ಮಾಡುತ್ತದೆ.

2021ರ ಜೂನ್ 1ರ ಹೊತ್ತಿಗೆ, ಖಾಸಗಿ ಆಸ್ಪತ್ರೆಗಳು ಮೇ 2021 ರಲ್ಲಿ 1.20 ಕೋಟಿ ಡೋಸ್ ಕೋವಿಡ್  ಲಸಿಕೆಗಳನ್ನು ಪಡೆದಿವೆ. 2021 ರ ಮೇ 4ರ ಹೊತ್ತಿಗೆ, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ನೊಂದಿಗೆ ಒಪ್ಪಂದ ಮಾಡಿಕೊಂಡಿರುವ ಹೆಚ್ಚಿನ ಸಂಖ್ಯೆಯ ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಡೋಸುಗಳನ್ನು ಸರಬರಾಜು ಮಾಡಲಾಗಿದೆ. ಈ ಖಾಸಗಿ ಆಸ್ಪತ್ರೆಗಳು ಕೇವಲ ದೊಡ್ಡ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಅವು  ರಾಜ್ಯಗಳಾದ್ಯಂತ ಶ್ರೇಣಿ II ಮತ್ತು III ನಗರಗಳಿಂದ ಕೂಡ ಸೇರಿವೆ.

ಸೇರಿರುವ ಕೆಲವು ನಗರಗಳು:

ಆಂಧ್ರಪ್ರದೇಶದ ಗುಂಟೂರು, ನೆಲ್ಲೂರು, ಶ್ರೀಕಾಳಹಸ್ತಿ, ವಿಜಯವಾಡ; ಅರುಣಾಚಲ ಪ್ರದೇಶದ ಇಟಾನಗರ; ಅಸ್ಸಾಂನಲ್ಲಿ ದಿಬ್ರುಗಢ; ಒಡಿಶಾದ ಸಂಭಲ್ಪುರ; ಗುಜರಾತ್ನಲ್ಲಿ ಅಂಕಲೇಶ್ವರ, ಕಚ್, ಮೊರ್ಬಿ, ವಾಪಿ ಮತ್ತು ಸೂರತ್; ಜಾರ್ಖಂಡ್ ನ ಬೊಕಾರೊ, ಜಮ್ ಶೆಡ್ ಪುರ, ಪಾಲ್ಘರ್; ಜಮ್ಮು& ಕಾಶ್ಮೀರದಲ್ಲಿ ಜಮ್ಮು, ಶ್ರೀನಗರ, ಕರ್ನಾಟಕದ ಬಳ್ಳಾರಿ, ದಾವಣಗೆರೆ, ಮಂಗಳೂರು, ಮೈಸೂರು ಮತ್ತು ಶಿವಮೊಗ್ಗ ; ಕೇರಳದ ಕ್ಯಾಲಿಕಟ್, ಎರ್ನಾಕುಲಂ, ಕೊಚ್ಚಿ, ಕೋಝಿಕೋಡ್, ಪಥನಮ್ ತ್ತಿಟ್ಟ, ಮತ್ತು ತ್ರಿಶೂರ್; ಅಹಮದ್ನಗರ, ಅಕೋಲಾ, ಔರಂಗಾಬಾದ್, ಬಾರಾಮತಿ, ಕಲ್ಹೆರ್, ಕೊಲ್ಹಾಪುರ, ನಾಗ್ಪುರ, ಮಹಾರಾಷ್ಟ್ರದ ಜಲ್ಗಾಂವ್ ನಾಸಿಕ್; ಹಿಮಾಚಲ ಪ್ರದೇಶದ ಕಾಂಗ್ರಾ; ಪಂಜಾಬ್‌ನ ಜಲಂದರ್, ಮೊಹಾಲಿ, ಭಿವಾಂಡಿ, ಲುಧಿಯಾನ; ಕೊಯಮತ್ತೂರು, ತಮಿಳುನಾಡಿನ ವೆಲ್ಲೂರು; ತೆಲಂಗಾಣದಲ್ಲಿ ಖಮ್ಮಮ್, ವಾರಂಗಲ್ ಮತ್ತು ಸಂಗರೆಡ್ಡಿ; ಉತ್ತರ ಪ್ರದೇಶದ ಗೋರಖ್ಪುರ, ಕಾನ್ಪುರ್ ಮತ್ತು ವಾರಾಣಸಿ; ಮತ್ತು ಪಶ್ಚಿಮ ಬಂಗಾಳದ ದುರ್ಗಾಪುರ.

ಕೋವಿಡ್-19 ಲಸಿಕಾ ಅಭಿಯಾನದ ಚಾಲನೆಯನ್ನು ಯಶಸ್ವಿಗೊಳಿಸಲು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ. ಕಡಿಮೆ ಸಂಖ್ಯೆಯ ಖಾಸಗಿ ಆಸ್ಪತ್ರೆಗಳನ್ನು ಹೊಂದಿರುವ ರಾಜ್ಯಗಳು ರಾಜ್ಯಗಳಲ್ಲಿನ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಎಬಿ-ಪಿಎಂಜೆಎ ಮತ್ತು ರಾಜ್ಯ ನಿರ್ದಿಷ್ಟ ವಿಮಾ ಯೋಜನೆಗಳ ಅಡಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳನ್ನು ಪಟ್ಟಿ ಮಾಡಲು, ಹರಡಿರುವ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಲಸಿಕೆ ತಯಾರಕರೊಡನೆ ಒಪ್ಪಂದಕ್ಕೆ ಬರಲು ಪ್ರೋತ್ಸಾಹಿಸುವಂತೆ ಕೋರಲಾಗಿದೆ. 

ಗುತ್ತಿಗೆ ಪ್ರಮಾಣಕ್ಕೆ ಅನುಗುಣವಾಗಿ ಖಾಸಗಿ ಆಸ್ಪತ್ರೆಗಳು ಪಡೆದ ಲಸಿಕೆಗಳ ಬಗ್ಗೆ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸುವ ಮೂಲಕ ನಿಯಮಿತ ಸಂವಹನ ನಡೆಸಲಾಗುತ್ತಿದೆ, ಇದರಿಂದಾಗಿ  ಅವುಗಳ ಕಾರ್ಯಕ್ಷಮತೆಯನ್ನು ರಾಜ್ಯ / ಜಿಲ್ಲೆಗಳು ಸೂಕ್ಷ್ಮವಾಗಿ ಗಮನಿಸುವಂತಾಗುತ್ತದೆ. ಅಲ್ಲದೆ, ರಾಜ್ಯಗಳು / ಖಾಸಗಿ ಸಂಸ್ಥೆಗಳಿಗೆ ಮಾಡಬೇಕಾದ ಪ್ರತಿ ವಿತರಣೆಯ ಸ್ಥಿತಿಯನ್ನು ಅನುಸರಿಸಲು ತಯಾರಕರೊಂದಿಗೆ ನಿಯಮಿತ ಪುನರಾವಲೋಕನವನ್ನು  ಮಾಡಲಾಗುತ್ತಿದೆ.
 
                                                                     ***


(Release ID: 1724860) Visitor Counter : 250