ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಪಿಎಂ.ಜಿ.ಕೆ.ಎ.ವೈ. ಅಡಿಯಲ್ಲಿ ಉಚಿತ ಆಹಾರ ಧಾನ್ಯವನ್ನು ಮೇ ತಿಂಗಳಲ್ಲಿ 55 ಕೋಟಿ ಫಲಾನುಭವಿಗಳು ಮತ್ತು ಜೂನ್ ನಲ್ಲಿ 2.6 ಕೋಟಿ  ಫಲಾನುಭವಿಗಳು ಪಡೆದಿದ್ದಾರೆ: ಶ್ರೀ ಪಾಂಡೆ


ಪಿಎಂಜಿಕೆಎವೈ- III ಅಡಿಯಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 63.67 ಎಲ್.ಎಂ.ಟಿ. ಆಹಾರ ಧಾನ್ಯ ಪೂರೈಕೆ

ಈಗಾಗಲೇ ತಗ್ಗುತ್ತಿರುವ ಖಾದ್ಯ ತೈಲದ ದರ, ಪ್ರತಿ ವಾರ ಪರಿಸ್ಥಿತಿ ಪರಿಶೀಲಿಸುತ್ತಿರುವ ಸರ್ಕಾರ: ಶ್ರೀ ಪಾಂಡೆ 

ಕೋವಿಡ್ 19 ಅವಧಿಯಲ್ಲಿ ಅಂದರೆ ಏಪ್ರಿಲ್ 2020ರಿಂದ ಮೇ 2021ರವರೆಗೆ 19.8 ಕೋಟಿ ಪೋರ್ಟಿಬಿಲಿಟಿ ವಹಿವಾಟು

ಪಿಎಂಜಿಕೆಎವೈ- III, ಓ.ಎನ್.ಓ.ಆರ್.ಸಿ. ಮತ್ತು ಆಹಾರ ಧಾನ್ಯಗಳ ಖರೀದಿಯ ಪ್ರಗತಿಯ ಕುರಿತಂತೆ ಮಾಧ್ಯಮಗಳಿಗೆ ವಿವರ ನೀಡಿದ ಡಿಎಫ್.ಪಿ.ಡಿ. ಕಾರ್ಯದರ್ಶಿ

Posted On: 03 JUN 2021 6:22PM by PIB Bengaluru

ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆಯ ಕಾರ್ಯದರ್ಶಿ ಶ್ರೀ ಸುಂಧಾಶು ಪಾಂಡೆ ಇಂದು ಮಾಧ್ಯಮ ಪ್ರತಿನಿಧಿಗಳಿಗೆ ಪಿಎಂ.ಜಿ.ಕೆ..ವೈ – III ಅಡಿಯಲ್ಲಿ ಆಹಾರ ಧಾನ್ಯಗಳ ವಿತರಣೆ ಮತ್ತು ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಯೋಜನೆಗಳ ಪ್ರಗತಿಯ ಬಗ್ಗೆ ವಿವರ ನೀಡಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ” (ಪಿಎಂ-ಜಿಕೆಎವೈ III) ಬಗ್ಗೆ ಮಾತನಾಡಿದ ಕಾರ್ಯದರ್ಶಿಯವರು, 63.67 ಲಕ್ಷ ಎಂ.ಟಿ. ಆಹಾರ ಧಾನ್ಯ (ಅಂದರೆ 2021 ಮೇ ಮತ್ತು ಜೂನ್ ತಿಂಗಳಿಗೆ ಒಟ್ಟು ಪಿಎಂಜಿಕೆಎವೈ ಹಂಚಿಕೆಯ ಶೇ.80ರಷ್ಟು)ವನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಎಫ್.ಸಿ.. ಗೋದಾಮುಗಳಿಂದ ಎತ್ತುವಳಿ ಮಾಡಿವೆ. ಕೋವಿಡ್ ಸೂಕ್ತ ಶಿಷ್ಟಾಚಾರಗಳನ್ನು ಪಾಲಿಸುತ್ತಾ 55 ಕೋಟಿ ಎನ್.ಎಫ್.ಎಸ್.. ಫಲಾನುಭವಿಗಳಿಗೆ ಮೇ 2021ರಲ್ಲಿ ಸುಮಾರು 28 ಲಕ್ಷ ಎಂ.ಟಿ. ಮತ್ತು ಜೂನ್ 2021ರಲ್ಲಿ 2.6 ಕೋಟಿ ಎನ್.ಎಫ್.ಎಸ್.. ಫಲಾನುಭವಿಗಳಿಗೆ ಸುಮಾರು 1.3 ಲಕ್ಷ ಎಂ.ಟಿ ಆಹಾರ ಧಾನ್ಯಗಳನ್ನು 34 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ವಿತರಿಸಿವೆ ಎಂದರು

ಮಿಗಿಲಾಗಿ, 03.06.2021ರವರೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿಯಲ್ಲಿ, ಶೇ.90 ಮತ್ತು ಶೇ.12ರಷ್ಟು ಎನ್.ಎಫ್.ಎಸ್.. ಫಲಾನುಭವಿಗಳಿಗೆ ಆಹಾರ ಧಾನ್ಯವನ್ನು ಅನುಕ್ರಮವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ವಿತರಿಸಲಾಗಿದ್ದು, 2021 ಮೇ ಮತ್ತು ಜೂನ್ ನಲ್ಲಿ 13,000 ಕೋಟಿ ರೂ. ಗೂ ಅಧಿಕ  ಆಹಾರದ ಸಬ್ಸಿಡಿ ಆಗುತ್ತದೆ. 2021 ಮೇ ಮತ್ತು ಜೂನ್ ಗೆ ಪಿಎಂಜಿಕೆಎವೈಗಾಗಿ ಭರಿಸಲಾದ ಆಹಾರ ಸಬ್ಸಿಡಿ 9200 ಕೋಟಿ ರೂ

ಇಲಾಖೆ ಯೋಜನೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ ಮತ್ತು ಮುದ್ರಣ / ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಚಾರ ಮತ್ತು ನ್ಯಾಯಬೆಲೆ ಅಂಗಡಿಯಲ್ಲಿ ಬ್ಯಾನರ್ಗಳನ್ನು ಪ್ರದರ್ಶಿಸುವ ಮೂಲಕ ಪಿಎಂ-ಜಿಕೆಎವೈ III ಬಗ್ಗೆ ವ್ಯಾಪಕ ಪ್ರಚಾರವನ್ನು ನೀಡಲು ಕ್ರಮಗಳನ್ನು ಕೈಗೊಳ್ಳುತ್ತಿರುವ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮುಂದುವರಿಸುತ್ತಿದೆ ಎಂದು ಶ್ರೀ ಪಾಂಡೆ ಹೇಳಿದರು.

'ಒಂದು ದೇಶ ಒಂದು ಪಡಿತರ ಚೀಟಿ' (.ಎನ್‌..ಆರ್‌.ಸಿ) ಮಹತ್ವವನ್ನು ಪ್ರತಿಪಾದಿಸಿದ, ಡಿ.ಎಫ್‌.ಪಿ.ಡಿ. ಕಾರ್ಯದರ್ಶಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013 (ಎನ್‌.ಎಫ್‌.ಎಸ್‌. ) ಅಡಿಯಲ್ಲಿ ರಾಷ್ಟ್ರವ್ಯಾಪಿ ಪಡಿತರ ಚೀಟಿಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆ ಮತ್ತು ಪ್ರಯತ್ನವಾಗಿದೆ ಎಂಬುದನ್ನು ಹಂಚಿಕೊಂಡರು.

ಪ್ರಸ್ತುತ .ಎನ್..ಆರ್.ಸಿ ಯೋಜನೆ ಅಡಿಯಲ್ಲಿ ಮಾಸಿಕ ಸರಾಸರಿ 1.35 ಕೋಟಿ ಪೋರ್ಟಬಿಲಿಟಿ ವಹಿವಾಟು (ಅಂತರ ರಾಜ್ಯ ವಹಿವಾಟೂ ಸೇರಿದಂತೆ) ದಾಖಲಾಗುತ್ತಿದೆ. ಜೊತೆಗೆ .ಎನ್..ಆರ್.ಸಿ. ಯೋಜನೆ ಆರಂಭಿಸಲಾದ 2019 ಆಗಸ್ಟ್ ನಿಂದ ಒಟ್ಟಾರೆ ಸುಮಾರು 27.8 ಕೋಟಿ ಪೋರ್ಟಬಿಲಿಟಿ ವಹಿವಾಟುಗಳು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ನಡೆದಿದ್ದು, ಪೈಕಿ 19.8 ಕೋಟಿ ಪೋರ್ಟಬಿಲಿಟಿ ವಹಿವಾಟುಗಳು ಕೋವಿಡ್ -19 ಅವಧಿಯಲ್ಲಿ ಅಂದರೆ ಏಪ್ರಿಲ್ 2020ರಿಂದ ಮೇ 2021ರಲ್ಲಿ ನಡೆದಿದೆ ಎಂದರು.

ಕೋವಿಡ್ -19 ಸಂಕಷ್ಟದ ಸಂದರ್ಭದಲ್ಲಿ ವಲಸೆ ಬಂದ ಎನ್.ಎಫ್.ಎಸ್.. ಫಲಾನುಭವಿಗಳು ಎನ್.ಎಫ್.ಎಸ್.. ಆಹಾರ ಧಾನ್ಯಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಒಂದು ರಾಷ್ಟ್ರ ಒಂದು ಪಡಿತರ ಚೀಟಿ (.ಎನ್..ಆರ್.ಸಿ.) ಯೋಜನೆಯ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಇಲಾಖೆಯು ವಲಸೆ ಫಲಾನುಭವಿಗಳಿಗೆ ಪೂರ್ಣ ಸಾಮರ್ಥ್ಯದೊಂದಿಗೆ ಆಹಾರ ಧಾನ್ಯ ತಲುಪುವ ಮೂಲಕ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಸಕ್ರಿಯವಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆಗಳು/ಸಲಹೆಗಳು/ಪತ್ರಗಳು ಇತ್ಯಾದಿಗಳ ಮೂಲಕ ನಿರಂತರವಾಗಿ ಕಾರ್ಯೋನ್ಮುಖವಾಗಿತ್ತು ಎಂದು ತಿಳಿಸಿದರು.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ .ಎನ್..ಆರ್.ಸಿ. ಯೋಜನೆಯ ಬಗ್ಗೆ  ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮೂಡಿಸಲು ಮನವಿ ಮಾಡಲಾಗಿತ್ತು,  14445 ಉಚಿತ ದೂರವಾಣಿ ಸಂಖ್ಯೆ ಮತ್ತು ಎನ್.ಎಫ್.ಎಸ್.. ಫಲಾನುಭವಿಗಳ, ಅದರಲ್ಲೂ ವಿಶೇಷವಾಗಿ ವಲಸೆ ಫಲಾನುಭವಿಗಳ ಅನುಕೂಲಕ್ಕಾಗಿ 10 ವಿವಿಧ ಭಾಷೆಗಳಲ್ಲಿ ಅಂದರೆ ಇಂಗ್ಲಿಷ್, ಹಿಂದಿ, ಒರಿಯಾ, ಪಂಜಾಬಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಗುಜರಾತಿ, ಮತ್ತು ಮರಾಠಿ ಭಾಷೆಗಳಲ್ಲಿ ಮೇರಾ ರೇಷನ್ (ನನ್ನ ಪಡಿತರ) ಮೊಬೈಲ್ ಆಪ್ ಅನ್ನು ಇಲಾಖೆಯು ಎನ್..ಸಿ. ಸಹಯೋಗದಲ್ಲಿ ಇತ್ತೀಚೆಗೆ ಅಭಿವೃದ್ಧಿ ಪಡಿಸಿದೆ. ಇನ್ನೂ ಹೆಚ್ಚಿನ ಪ್ರಾದೇಶಿಕ ಭಾಷೆಗಳನ್ನು ‘MeraRation’ ಆಪ್ ನಲ್ಲಿ ಸೇರಿಸುವ ಪ್ರಯತ್ನ ಸಮರೋಪಾದಿಯಲ್ಲಿ ನಡೆದಿದೆ ಎಂದರು

ಖಾದ್ಯ ತೈಲದ ಮೇಲಿನ ಸುಂಕವನ್ನು ತಗ್ಗಿಸುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಶ್ರೀ ಪಾಂಡೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ದರ ಇಳಿಮುಖವಾಗಲು ಆರಂಭಿಸಿದೆ, ಮತ್ತು ಜೊತೆಗೆ ಬೇಡಿಕೆಯಲ್ಲೂ ಶೇ.15ರಿಂದ 20ರಷ್ಟು ತಗ್ಗಿದೆ ಎಂದರು. ದರ ಇನ್ನೂ ಇಳಿಕೆಯಾಗುತ್ತದೆ ಮತ್ತು ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಗೋಚರಿಸುತ್ತಿದೆ ಎಂದರು. ಖಾದ್ಯ ತೈಲ ದರ ತಗ್ಗುತ್ತಿರುವುದರಿಂದ, ಮತ್ತು ಅದೇ ಪ್ರವೃತ್ತಿ ಮುಂದುವರಿಯುವ ಲಕ್ಷಣ ಕಾಣಿಸುತ್ತಿದ್ದು, ಸುಂಕ ಇಳಿಸುವ ಅಗತ್ಯ ಇಲ್ಲ ಎಂದು ತಿಳಿಸಿದರು. ಸರ್ಕಾರ ಪ್ರತಿ ವಾರ ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದೆ ಎಂದೂ ತಿಳಿಸಿದರು.  

ಮತ್ತೊಂದು ಪ್ರಶ್ನೆಗೆ ಉತ್ತರ ನೀಡಿದ ಡಿಎಫ್.ಪಿ.ಡಿ. ಕಾರ್ಯದರ್ಶಿಯವರು, ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಮಾಜದ ತೀರಾ ದುರ್ಬಲ ಮತ್ತು ಆರ್ಥಿಕವಾಗಿ ದುರ್ಬಲವಾದ ಎಲ್ಲ  ಅರ್ಹ ವ್ಯಕ್ತಿಗಳನ್ನೂ (ಅಂದರೆ ಬೀದಿ ಬದಿ ವ್ಯಾಪಾರಿಗಳು, ಚಿಂದಿ ಆಯುವವರುರಿಕ್ಷಾ ಎಳೆಯುವವರು, ವಲಸೆ ಕಾರ್ಮಿಕರು ಮೊದಲಾದವರು) ರಾಷ್ಟ್ರೀಯ ಆಹಾರ ಭದ್ರತೆ ಕಾಯಿದೆ ಅಡಿ ತರುವುದು ಇಲಾಖೆಯ ಪರಮೋಚ್ಚ ಆದ್ಯತೆಯಾಗಿದೆ ಎಂದು ತಿಳಿಸಿದರು. ಎನ್.ಎಫ್.ಎಸ್.. ಅಡಿಯಲ್ಲಿ ಅರ್ಹ ವ್ಯಕ್ತಿಗಳು/ಕುಟುಂಬಗಳನ್ನು ಗುರುತಿಸುವುದು ಮತ್ತು ಸತತ ಪರಾಮರ್ಶೆಯ ಮೂಲಕ ಅವರಿಗೆ ಪಡಿತರ ಚೀಟಿಗಳನ್ನು ನೀಡುವುದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಕಾರ್ಯಾಚರಣೆ ಜವಾಬ್ದಾರಿಯಾಗಿದೆ ಎಂದರು. ಇಲಾಖೆಯು 2021 ಜೂನ್ 2ರಂದು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದು, ಎಲ್ಲ ಎನ್.ಎಫ್.ಎಸ್.. ವ್ಯಾಪ್ತಿಯ ಮಿತಿಯ ಲಭ್ಯತೆಯನ್ನು ಬಳಸಿಕೊಂಡು ಪಡಿತರ ಚೀಟಿ ಇಲ್ಲದ ಅಂತಹ ಪ್ರವರ್ಗದವರನ್ನು ಗುರುತಿಸಿ ಅವರಿಗೆ, ಎನ್.ಎಫ್.ಎಸ್.. ಪಡಿತರ ಚೀಟಿ ನೀಡಲು ವಿಶೇಷ ಅಭಿಯಾನ ಆರಂಭಿಸುವಂತೆ ತಿಳಿಸಿದೆ. ಒಟ್ಟು 81.35 ಕೋಟಿ ಎನ್.ಎಫ್.ಎಸ್.. ವ್ಯಾಪ್ತಿಯ ಮಿತಿಯ ಪೈಕಿ 1.97 ಕೋಟಿ ಅಂತರವನ್ನೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಉದ್ದೇಶಕ್ಕಾಗಿ ಬಳಸಿಕೊಳ್ಳಬಹುದು.

***



(Release ID: 1724245) Visitor Counter : 215