ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳನ್ನು ಪ್ರಚುರಪಡಿಸಲು ಸಾಮಾನ್ಯ ಮನೋರಂಜನಾ ವಾಹಿನಿಗಳಿಗೆ ಸಲಹಾಸೂಚಿ
ಪ್ರಕಟಣಾ ದಿನಾಂಕ:
03 JUN 2021 4:38PM by PIB Bengaluru
ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಇಂದು ಎಲ್ಲಾ ಖಾಸಗಿ ಸಾಮಾನ್ಯ ಮನೋರಂಜನಾ ಟೆಲಿವಿಶನ್ ವಾಹಿನಿಗಳಿಗೆ (ಸುದ್ದಿಯೇತರ) ಈ ಕೆಳಗಿನ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳನ್ನು ಟಿಕ್ಕರ್ ಮೂಲಕ ಅಥವಾ ಅವರಿಗೆ ಸೂಕ್ತ ಎಂದು ಕಂಡುಬರುವ ರೀತಿಯಲ್ಲಿ ವಿಶೇಷವಾಗಿ ಪ್ರೈಮ್ ಟೈಮ್ ನಲ್ಲಿ ಮಧ್ಯಂತರಗಳಲ್ಲಿ ಪ್ರಸಾರ ಮಾಡಿ ಜಾಗೃತಿ ಮೂಡಿಸಬೇಕು ಎಂದು ಸಲಹಾಸೂಚಿ ಮೂಲಕ ತಿಳಿಸಿದೆ.
|
1075
|
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ
|
|
1098
|
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಕ್ಕಳ ಸಹಾಯವಾಣಿ ಸಂಖ್ಯೆ.
|
|
14567
|
ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯದ ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆ.
(ಎನ್.ಸಿ.ಟಿ. ದಿಲ್ಲಿ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಮತ್ತು ಉತ್ತರಾಖಂಡ )
|
|
08046110007
|
ಮಾನಸಿಕ ಬೆಂಬಲಕ್ಕಾಗಿ ನಿಮ್ಹಾನ್ಸ್ ಸಹಾಯವಾಣಿ
|
|
14443
|
ಆಯುಷ್ ಕೋವಿಡ್ -19 ಆಪ್ತ ಸಮಾಲೋಚನಾ ಸಹಾಯವಾಣಿ
|
|
9013151515
|
MyGovWhatsApp ಸಹಾಯವಾಣಿ
|
ನಾಗರಿಕರ ಉಪಯೋಗಕ್ಕಾಗಿ ಸರಕಾರವು ಈ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳನ್ನು ರೂಪಿಸಿ ಪ್ರಚಾರಪಡಿಸುತ್ತಿದೆ.
ಕಳೆದ ಕೆಲವು ತಿಂಗಳಿನಿಂದ ಸರಕಾರವು ವಿವಿಧ ಸಲಕರಣೆಗಳು ಮತ್ತು ಮಾಧ್ಯಮ ವೇದಿಕೆಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ. ಮುದ್ರಣ, ಟಿ.ವಿ., ರೇಡಿಯೋ ಸಾಮಾಜಿಕ ಮಾಧ್ಯಮಗಳು ಇತ್ಯಾದಿಗಳ ಮೂಲಕ ಮೂರು ಸಂಕೀರ್ಣ ವಿಷಯಗಳಾದ –ಕೋವಿಡ್ ಚಿಕಿತ್ಸಾ ಶಿಷ್ಟಾಚಾರ, ಕೋವಿಡ್ ಸಮುಚಿತ ವರ್ತನೆ ಮತ್ತು ಲಸಿಕಾಕರಣಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ ಎಂಬುದನ್ನು ಸಲಹಾಸೂಚಿಯು ಪ್ರಮುಖವಾಗಿ ಪ್ರಸ್ತಾಪಿಸಿದೆ.
ಸಲಹಾಸೂಚಿಯು ಸಾಂಕ್ರಾಮಿಕದ ವಿರುದ್ಧದ ಸರಕಾರದ ಹೋರಾಟದ ಪ್ರಯತ್ನಗಳಿಗೆ ಪೂರಕವಾಗಿ ಖಾಸಗಿ ಟಿ.ವಿ. ವಾಹಿನಿಗಳು ಪ್ರಮುಖವಾದ ಪಾತ್ರವನ್ನು ವಹಿಸಿರುವುದನ್ನು ಶ್ಲಾಘಿಸಿದೆ. ಜನತೆಯಲ್ಲಿ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲದೆ ಮೇಲ್ಕಾಣಿಸಿದ ಮೂರು ವಿಷಯಗಳ ಬಗ್ಗೆಯೂ ಜನತೆಗೆ ತಿಳಿಯಪಡಿಸಿವೆ ಎಂದಿರುವ ಸಲಹಾ ಸೂಚಿಯು ಈ ನಿಟ್ಟಿನಲ್ಲಿ ಖಾಸಗಿ ಟಿ.ವಿ. ಸಾಮಾನ್ಯ ಮನೋರಂಜನಾ ವಾಹಿನಿಗಳು (ಸುದ್ದಿಯೇತರ) ರಾಷ್ಟ್ರೀಯ ಮಟ್ಟದ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವಂತೆ ಮನವಿ ಮಾಡಿದೆ.
***
(ಪ್ರಕಟಣೆ ಐ.ಡಿ.: 1724138)
ವಿಸಿಟರ್ ಕೌಂಟರ್ : 350
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Punjabi
,
Gujarati
,
Odia
,
Tamil
,
Telugu
,
Malayalam