ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶಿಕ್ಷಕರ ಅರ್ಹತಾ ಪರೀಕ್ಷೆಯ ಅರ್ಹತಾ ಪ್ರಮಾಣ ಪತ್ರದ ಮಾನ್ಯತಾ ಅವಧಿ ೭ ವರ್ಷಗಳಿಂದ  ಜೀವಿತಾವಧಿಯವರೆಗೆ ವಿಸ್ತರಣೆ. –ಶ್ರೀ ರಮೇಶ್ ಪೋಖ್ರಿಯಾಲ್ ’ನಿಶಾಂಕ್’

Posted On: 03 JUN 2021 1:41PM by PIB Bengaluru

ಶಿಕ್ಷಕರ ಅರ್ಹತಾ ಪರೀಕ್ಷೆಯ ಅರ್ಹತಾ ಪ್ರಮಾಣ ಪತ್ರದ ಮಾನ್ಯತಾ ಅವಧಿಯನ್ನು  7 ವರ್ಷಗಳಿಂದ  ಜೀವಿತಾವಧಿಯವರೆಗೆ ವಿಸ್ತರಣೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ಘೋಷಿಸಿದ್ದಾರೆ. ಇದು 2011 ರಿಂದ ಪೂರ್ವಾನ್ವಯಗೊಂಡಂತೆ ಜಾರಿಯಾಗುತ್ತದೆ. ಆಯಾ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 7 ವರ್ಷದ ಅವಧಿ ಪೂರೈಸಿರುವ ಟಿ..ಟಿ. ಪ್ರಮಾಣ ಪತ್ರಗಳಿಗೆ  ಮರುಮಾನ್ಯತಾವಧಿ ದಾಖಲಿಸಿ  ಅಭ್ಯರ್ಥಿಗಳಿಗೆ ವಿತರಿಸಲು ಅವಶ್ಯ ಕ್ರಮ ಕೈಗೊಳ್ಳಲಿವೆ ಎಂದವರು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳನ್ನು ಆಶಿಸುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಇದು ಧನಾತ್ಮಕ ಕ್ರಮವಾಗಲಿದೆ ಎಂದೂ ಶ್ರೀ ಪೋಖ್ರಿಯಾಲ್ ಹೇಳಿದರು.

 

ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಳ್ಳಲು ಶಿಕ್ಷಕರ ಅರ್ಹತಾ ಪರೀಕ್ಷೆಯು ಒಂದು ಅವಶ್ಯ ಅರ್ಹತೆಯಾಗಿರುತ್ತದೆ. ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿ (ಎನ್.ಸಿ.ಟಿ..)ಯು  2011 ಫೆಬ್ರವರಿ 11 ರಂದು ನೀಡಿರುವ  ಮಾರ್ಗದರ್ಶಿಗಳನ್ವಯ ಟಿ..ಟಿ.ಯನ್ನು ರಾಜ್ಯ ಸರಕಾರಗಳು ನಡೆಸುತ್ತವೆ ಮತ್ತು ಟಿ..ಟಿ. ಪ್ರಮಾಣ ಪತ್ರದ ಮಾನ್ಯತಾ ಅವಧಿ ಟಿ..ಟಿ. ಉತ್ತೀರ್ಣರಾದ ದಿನಾಂಕದಿಂದ 7 ವರ್ಷಗಳವರೆಗೆ ಚಾಲ್ತಿಯಲ್ಲಿರುತ್ತದೆ.

***



(Release ID: 1724107) Visitor Counter : 273