ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕನಿಷ್ಟ ವೇತನ ಮತ್ತು ರಾಷ್ಟ್ರೀಯ ತಳಹದಿ ವೇತನಗಳ ನಿಗದಿಗೆ ತಜ್ಞರ ಗುಂಪು ರಚಿಸಿದ ಸರಕಾರ
Posted On:
03 JUN 2021 1:18PM by PIB Bengaluru
ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಆದೇಶವೊಂದನ್ನು ಹೊರಡಿಸಿ ಕನಿಷ್ಠ ವೇತನ ಮತ್ತು ರಾಷ್ಟ್ರೀಯ ತಳಹದಿ ಕನಿಷ್ಠ ವೇತನಗಳ ನಿಗದಿಗೆ ಸಂಬಂಧಿಸಿ ತಾಂತ್ರಿಕ ಮಾಹಿತಿ ಮತ್ತು ಸಲಹೆಗಳನ್ನು ನೀಡಲು ತಜ್ಞರ ಗುಂಪನ್ನು ರಚಿಸಿದೆ. ಈ ಗುಂಪು ಅಧಿಸೂಚನೆಯಾದ ದಿನಾಂಕದಿಂದ ಮುಂದಿನ ಮೂರು ವರ್ಷಗಳ ಕಾಲ ಅಸ್ತಿತ್ವದಲ್ಲಿ ಇರುತ್ತದೆ.
ಈ ತಜ್ಞರ ಗುಂಪಿಗೆ ಆರ್ಥಿಕ ಬೆಳವಣಿಗೆ ಸಂಸ್ಥೆಯ ನಿರ್ದೇಶಕ ಪ್ರೊ. ಅಜಿತ್ ಮಿಶ್ರಾ ಅಧ್ಯಕ್ಷರಾಗಿರುತ್ತಾರೆ. ಕಲ್ಕತ್ತಾ ಐ.ಐ.ಎಂ. ನ ಪ್ರೊ. ತಾರಿಕಾ ಚಕ್ರವರ್ತಿ, ಎನ್.ಸಿ.ಎ.ಇ.ಆರ್. ನ ಹಿರಿಯ ಫೆಲೋ ಡಾ. ಅನುಶ್ರೀ ಸಿನ್ಹಾ, ಜಂಟಿ ಕಾರ್ಯದರ್ಶಿ ಶ್ರೀಮತಿ ವಿಭಾ ಭಲ್ಲಾ, ವಿ.ವಿ.ಜಿ.ಎನ್.ಎಲ್.ಐ. ಯ ಮಹಾ ನಿರ್ದೇಶಕ ಡಾ. ಎಚ್. ಶ್ರೀನಿವಾಸ ಅವರು ಈ ತಜ್ಞರ ಗುಂಪಿನ ಸದಸ್ಯರು. ಮತ್ತು ಕಾರ್ಮಿಕ ಹಾಗು ಉದ್ಯೋಗ ಸಚಿವಾಲಯದ ಹಿರಿಯ ಕಾರ್ಮಿಕ ಮತ್ತು ಉದ್ಯೋಗ ಸಲಹೆಗಾರರಾದ ಶ್ರೀ ಡಿ.ಪಿ.ಎಸ್. ನೇಗಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ತಜ್ಞರ ಗುಂಪು ಕನಿಷ್ಠ ವೇತನಗಳು ಮತ್ತು ರಾಷ್ಟ್ರೀಯ ಸಮತಳ ವೇತನಕ್ಕೆ ಸಂಬಂಧಿಸಿದಂತೆ ಸರಕಾರಕ್ಕೆ ಶಿಫಾರಸುಗಳನ್ನು ಮಾಡಲಿದೆ. ವೇತನ ದರಗಳ ಬಗ್ಗೆ ತೀರ್ಮಾನಕ್ಕೆ ಬರಲು ಗುಂಪು, ವೇತನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳ ಬಗ್ಗೆ ಗಮನ ಹರಿಸಲಿದೆ ಮತ್ತು ವೇತನ ನಿಗದಿಗಾಗಿ ವೈಧಾನಿಕತೆ ಹಾಗು ವೈಜ್ಞಾನಿಕ ಮಾನದಂಡಗಳನ್ನು ರೂಪಿಸಲಿದೆ.
***
(Release ID: 1724105)
Visitor Counter : 304