ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರವು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಲಸಿಕಾಅಭಿಯಾನದ ಪ್ರಗತಿಯನ್ನು ವಿಮರ್ಶೆಮಾಡಿತು


ಜೂನ್ 2021 ರಲ್ಲಿ ಲಸಿಕೆ ಲಭ್ಯತೆಯಲ್ಲಿ ಗಣನೀಯ ಹೆಚ್ಚಳವನ್ನು ಗಮನದಲ್ಲಿಟ್ಟುಕೊಂಡು ಲಸಿಕಾಅಭಿಯಾನದ ವೇಗವನ್ನು ಹೆಚ್ಚಿಸುವ ಮಾರ್ಗಗಳನ್ನು ಸೂಚಿಸಿತು

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮನೆಗಳಿಗೆ ಹತ್ತಿರವಿರುವಂತಹ ಕೋವಿಡ್ ಲಸಿಕಾ ಕೇಂದ್ರಗಳ ಬಳಕೆಯನ್ನು ಗರಿಷ್ಠಗೊಳಿಸುವುದು

ಹೆಚ್ಚಿನ ಲಸಿಕಾಕರಣಕ್ಕಾಗಿ ಖಾಸಗಿ ಆಸ್ಪತ್ರೆಗಳ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದು

Posted On: 31 MAY 2021 6:27PM by PIB Bengaluru

ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸಹಯೋಗದೊಂದಿಗೆ ಕೋವಿಡ್ -19 ಲಸಿಕಾ ಅಭಿಯಾನವನ್ನು  ಸಕ್ರಿಯವಾಗಿ ಮಾರ್ಗದರ್ಶನ ಮಾಡುವ, ಪರಿಶೀಲಿಸುವ ಮತ್ತು ಮೇಲ್ವಿಚಾರಣೆ ಮಾಡುವ ಬದ್ಧತೆಯ ಭಾಗವಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಮ್ ಹೆಚ್ಎಫ್ ಡಬ್ಲ್ಯೂ) ಇಂದು ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿರ್ವಾಹಕರೊಂದಿಗೆ ರಾಜ್ಯಗಳಲ್ಲಿ ಲಸಿಕಾಅಭಿಯಾನದ ಪ್ರಗತಿಯ ಬಗ್ಗೆ ವೀಡಿಯೊ ಸಂವಾದದ ಮೂಲಕ ವಿಮರ್ಶಾ ಸಭೆ ನಡೆಸಿತು. ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸಲು ರಾಜ್ಯಗಳಿಗೆ ಹೆಚ್ಚಿನ  ಅನುಕೂಲಗಳನ್ನು ಒದಗಿಸಿದ ಮತ್ತು ಮುಂಗಡ ಲಸಿಕೆಯ ಅವಶ್ಯಕತೆಯ ವೇಳಾಪಟ್ಟಿ  ಮೂಲಕ ಜೂನ್ 2021 ಕ್ಕೆ ಹೆಚ್ಚಿದ ಲಸಿಕೆ ಸರಬರಾಜುಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾದ ಹಿನ್ನೆಲೆಯಲ್ಲಿ ಈ ಸಭೆಯನ್ನು ನಡೆಸಲಾಯಿತು.  ಈ ಸಭೆಯ ಅಧ್ಯಕ್ಷತೆಯನ್ನು ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್ ವಹಿಸಿದ್ದರು.

ಮೊದಲಿಗೆ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು   ತಿಂಗಳ ಹೆಚ್ಚಿನ ಲಸಿಕೆ ಪೂರೈಕೆಯು ರಾಜ್ಯಗಳನ್ನು ಕೊನೆಯ ಹಂತದಲ್ಲಿ ತಲುಪಿದ್ದು  2021 ರ ಮೇ ಕೊನೆಯ ವಾರದಲ್ಲಿ  ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನಡೆಸಿದ ಸಾಮೂಹಿಕ ಪ್ರಯತ್ನವನ್ನು ಶ್ಲಾಘಿಸಿದರು. ಲಸಿಕಾ ಅಭಿಯಾನದ ವೇಗವನ್ನು ಇನ್ನಷ್ಟು ವೇಗಗೊಳಿಸಲು ಸಾಕಷ್ಟು ಅವಕಾಶವಿದೆ ಎಂದು ಅವರು ಗಮನಸೆಳೆದರು. ಲಸಿಕೆಗಳ ಒಟ್ಟು ಲಭ್ಯತೆಯು ಜೂನ್ 2021 ರಲ್ಲಿ ಮತ್ತಷ್ಟು ಹೆಚ್ಚಾಗಲಿದೆ (ಲಸಿಕೆ ಸಿಗುವ ವೇಳಾಪಟ್ಟಿಯ ಮೂಲಕ ಈಗಾಗಲೇ ಅವರೊಂದಿಗೆ ಹಂಚಿಕೊಳ್ಳಲಾಗಿದೆ). 2021 ರ ಜೂನ್ ನಲ್ಲಿ ಸುಮಾರು 12 ಕೋಟಿ (11,95,70,000) ಡೋಸುಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಾಗಲಿದ್ದು, ಲಸಿಕೆ ನೀಡುವ ಸಂಖ್ಯೆಯನ್ನು ಹೆಚ್ಚಿಸಲು ಅನುಕೂಲ ಮಾಡಿಕೊಡುತ್ತದೆ.

 

ಲಸಿಕಾ ಅಭಿಯಾನವು ಸ್ಥಿರವಾಗಿ ಸಾಗುವಂತೆ ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಭ್ಯವಿರುವ ಬಫರ್ ಸ್ಟಾಕ್ ಅನ್ನು ತುರ್ತಾಗಿ ಒದಗಿಸುತ್ತದೆ ಎಂದು ಆರೋಗ್ಯ ಕಾರ್ಯದರ್ಶಿ ಭರವಸೆ ನೀಡಿದರು.

ಕೋವಿಡ್ -19 ರಿಂದ ದೇಶದ ಅತ್ಯಂತ ದುರ್ಬಲವರ್ಗದವರನ್ನು ರಕ್ಷಿಸುವ ಸಾಧನವಾಗಿ ಲಸಿಕಾಕರಣದ ಕಾರ್ಯವನ್ನು  ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಲಸಿಕಾಕರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೆಚ್ಚಿನ ಅನುಕೂಲತೆಗೆ  ಕಾರಣವಾದ ಎಲ್ಲಾ ಮಧ್ಯಸ್ಥಗಾರರೊಂದಿಗೆ ವ್ಯಾಪಕವಾದ ಸಮಾಲೋಚನೆಯಲ್ಲಿ ಪ್ರಸ್ತುತ ಪರಿಸ್ಥಿತಿಗಳಿಗೆ ತಕ್ಕಂತೆ ಕಾರ್ಯಶೈಲಿಯನ್ನು ಮಾರ್ಪಡಿಸಲು ಶ್ರೇಣೀಕೃತ, ಪೂರ್ವಭಾವಿ ಮತ್ತು ಸಕ್ರಿಯ ವಿಧಾನವು ಅವಕಾಶ ಮಾಡಿಕೊಟ್ಟಿದೆ ಎಂದು ಕಾರ್ಯದರ್ಶಿಯವರು ಗಮನಿಸಿದರು.

ಮನೆಗೆ ಹತ್ತಿರದ ಸ್ಥಳಗಳಲ್ಲಿ  (ಉದಾ. ಸಮುದಾಯ ಕೇಂದ್ರ, ಆರ್ಡಬ್ಲ್ಯೂಎ ಕೇಂದ್ರ / ಕಚೇರಿ, ಪಂಚಾಯತ್ ಘರ್, ಶಾಲಾ ಕಟ್ಟಡಗಳು, ವೃದ್ಧಾಶ್ರಮಗಳು ಇತ್ಯಾದಿ) ವೃದ್ಧರು ಮತ್ತು ವಿಕಲಾಂಗಚೇತನರಿಗಾಗಿ ನಿಯರ್ ಟು ಹೋಮ್ ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್ (ಎನ್ಎಚ್ಸಿವಿಸಿ) ಗಳಲ್ಲಿ ಸಮುದಾಯ-ಆಧಾರಿತ ಜನ ಸಂಪರ್ಕ ಸಭೆ ವಿಧಾನದ ಮೇಲೆ ಕೇಂದ್ರೀಕರಿಸಿ, ಅಲ್ಲಿ ಆರೋಗ್ಯೇತರ ಸೌಲಭ್ಯ ಆಧಾರಿತ ವ್ಯವಸ್ಥೆಗಳಲ್ಲಿ ಸೆಷನ್ ಗಳನ್ನು ನಡೆಸಬಹುದು. ಅದರ ಬಗ್ಗೆ ಮಾರ್ಗಸೂಚಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಹಂಚಿಕೊಳ್ಳಲಾಗಿದೆ [ಮಾರ್ಗಸೂಚಿಗಳು MoHFW ವೆಬ್ ಸೈಟ್ ನಲ್ಲಿ ಲಭ್ಯವಿದೆ:

https://www.mohfw.gov.in/pdf/GuidanceNeartoHomeCovidVaccinationCentresforElderlyandDifferentlyAbledCitizen.pdf

 

ಮನೆಗಳಿಗೆ ಹತ್ತಿರವಿರುವಂತಹ  ಕೋವಿಡ್ ಲಸಿಕಾ ಕೇಂದ್ರಗಳ ಬಳಕೆಯನ್ನು ಗರಿಷ್ಠಗೊಳಿಸುವುದು  ಲಸಿಕೆ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಈ ಸಿವಿಸಿಗಳ ಬಳಕೆಗಾಗಿ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಂತೆ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಒತ್ತಾಯಿಸಲಾಯಿತು.

ಎನ್ ಎಚ್ ಸಿವಿಸಿ ಸೈಟ್ ನ ಗುರುತಿಸುವಿಕೆ ಮತ್ತು ಅಸ್ತಿತ್ವದಲ್ಲಿರುವ ಸಿವಿಸಿಯೊಂದಿಗೆ ಸಂಪರ್ಕ ಸಾಧಿಸುವ ಪ್ರಕ್ರಿಯೆಯನ್ನು ಪುನರುಚ್ಚರಿಸಲಾಯಿತು. ಎನ್ ಎಚ್ ಸಿವಿಸಿಯಲ್ಲಿ ಲಸಿಕಾಕರಣವನ್ನು  ಕೈಗೊಳ್ಳಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವದಲ್ಲಿರುವ ಕೋವಿಡ್ ಲಸಿಕಾ ಕೇಂದ್ರವನ್ನು (ಸಿವಿಸಿ) ಯನ್ನು ಗುರುತಿಸುವುದು. ಗೊತ್ತುಪಡಿಸಿದ ಸಿವಿಸಿಯ ನೋಡಲ್ ಅಧಿಕಾರಿ ಅಗತ್ಯ ಮಾನದಂಡಗಳಿಗಾಗಿ ಉದ್ದೇಶಿತ ಎನ್ ಎಚ್ ಸಿವಿಸಿಗಳನ್ನು ಪರಿಶೀಲಿಸುತ್ತಾರೆ. ಲಸಿಕಾಕರಣಕ್ಕಾಗಿ 3 ಕೊಠಡಿಗಳು / ಲಸಿಕೆ ನೀಡುವುದಕ್ಕೆ ಸ್ಥಳಾವಕಾಶ, ಹಿರಿಯ ನಾಗರಿಕರಿಗೆ/ ವಿಕಲಚೇತನರಿಗೆ ಅನುಕೂಲಕರ ಪ್ರವೇಶ, ಎಇಎಫ್ ಐಗಳನ್ನು ನಿರ್ವಹಿಸುವ ಕಾರ್ಯಸಾಧ್ಯತೆ ಮತ್ತು ಅಂತರ್ಜಾಲದ ಲಭ್ಯತೆ ಇತ್ಯಾದಿ,  ಲಸಿಕೆ ದಿನದಂದು ಲಸಿಕೆ, ಸರಬರಾಜು ಮತ್ತು ಲಸಿಕಾ ಅಬಿಯಾನದ ತಂಡದ ನಿಯೋಜನೆಯನ್ನು ಖಚಿತಪಡಿಸಿಕೊಳ್ಳಲು ಗೊತ್ತುಪಡಿಸಿದ ಸಿವಿಸಿಯ ನೋಡಲ್ ಅಧಿಕಾರಿಯವರ ಉಸ್ತುವಾರಿ ಅಗತ್ಯವಿರುತ್ತದೆ.

ಕೋವಿಡ್ ಲಸಿಕಾ ಅಭಿಯಾನದಲ್ಲಿ  ಖಾಸಗಿ ಆಸ್ಪತ್ರೆಗಳೊಂದಿಗೆ ಸಕ್ರಿಯ ಭಾಗವಹಿಸುವಿಕೆಯನ್ನು  ಹೆಚ್ಚಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳನ್ನು ಸಹ ಪ್ರೋತ್ಸಾಹಿಸಲಾಯಿತು.  ಲಸಿಕೆ ತಯಾರಕರು ಮತ್ತು ಖಾಸಗಿ ಆಸ್ಪತ್ರೆಗಳೊಂದಿಗೆ ನಿಯಮಿತವಾಗಿ ಲಸಿಕೆ ಸರಬರಾಜು ಮಾಡಲು ನಿಯಮಿತವಾಗಿ ಸಮನ್ವಯಗೊಳಿಸಲು 2/3 ಸದಸ್ಯರ ವಿಶೇಷ ತಂಡವನ್ನು ರಚಿಸಲು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ  ಸೂಚಿಸಲಾಯಿತು.

ಸೂಕ್ತವಾದ ಲಸಿಕೆಯ ಬಳಕೆಯ ಮೂಲಕ ಸಾರ್ವಜನಿಕ ಆರೋಗ್ಯದ ಆಸ್ತಿಯಾಗಿರುವ ಕೋವಿಡ್ ಲಸಿಕೆಯ ವ್ಯರ್ಥವನ್ನು ತೀವ್ರವಾಗಿ ಕಡಿಮೆ ಮಾಡಲು ಸಂಪೂರ್ಣ ಪ್ರಯತ್ನಗಳನ್ನು ಮಾಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತೆ ಸೂಚಿಸಲಾಯಿತು. ಒಟ್ಟಾರೆ ವ್ಯರ್ಥವಾಗುವ ಮಟ್ಟವು ಗಣನೀಯವಾಗಿ ಕಡಿಮೆಯಾಗಿದ್ದರೂ, ಇನ್ನೂ ಅನೇಕ ರಾಜ್ಯಗಳು ವ್ಯರ್ಥವನ್ನು ಗಣನೀಯವಾಗಿ ಕಡಿಮೆ ಮಾಡ ಬೇಕಾಗಿವೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಸೂಚಿಸಿದರು. ಲಸಿಕೆಗಳ ನ್ಯಾಯಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ವ್ಯಾಕ್ಸಿನೇಟರ್ ಗಳಿಗೆ ಮರುಶಿಕ್ಷಣವನ್ನು, ಮರು ತರಬೇತಿಯನ್ನು ನೀಡಲು ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಯಿತು.

****



(Release ID: 1723339) Visitor Counter : 138