ರೈಲ್ವೇ ಸಚಿವಾಲಯ

ಕಳೆದ ೭ ವರ್ಷಗಳಲ್ಲಿ ಜೈವಿಕ ಶೌಚಾಲಯ, ರೈಲ್ವೆ ವಿದ್ಯುದೀಕರಣ, ಮೂಲ ಸೌಕರ್ಯ ಅಭಿವೃದ್ದಿ ಮತ್ತಿತರ ಉಪಕ್ರಮಗಳ ಕುರಿತು ಎನ್.ಆರ್.ಟಿ.ಐ ಸಂಶೋಧನೆ ಕೈಗೊಳ್ಳಬೇಕು : ಶ್ರೀ ಪಿಯೂಶ್ ಗೋಯಲ್


ರೈಲ್ವೆಯ ಎಲ್ಲಾ ತರಬೇತಿ ಸಂಸ್ಥೆಗಳು ಎನ್.ಆರ್.ಟಿ.ಐ ಆಡಳಿತ ವ್ಯವಸ್ಥೆಯ ಒಂದೇ ಸೂರಿನಡಿ ಬರಬೇಕು : ಶ್ರೀ ಗೋಯಲ್

ಮುಂದಿನ ಮೂರು ವರ್ಷಗಳಲ್ಲಿ ಎನ್.ಆರ್.ಟಿ.ಐ ಪ್ರವರ್ತಕ ಸಂಸ್ಥೆಯಾಗಿ ಹೊರ ಹೊಮ್ಮಿದೆ: ಇದರ ಶೈಕ್ಷಣಿಕ ಮೂಲ ಸೌಕರ್ಯ ಉತ್ಕೃಷ್ಟಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು : ಶ್ರೀ ಪಿಯೂಶ್ ಗೋಯಲ್

ರಾಷ್ಟ್ರೀಯ ರೈಲು ಮತ್ತು ಸಾಗಾಣಿಕೆ ಸಂಸ್ಥೆಯ ಪ್ರಗತಿ ಪರಿಶೀಲನೆ ಮಾಡಿದ ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ರೀ ಪಿಯೂಶ್ ಗೋಯಲ್

Posted On: 31 MAY 2021 6:01PM by PIB Bengaluru

ಕಳೆದ ೭ ವರ್ಷಗಳಲ್ಲಿ ಜೈವಿಕ ಶೌಚಾಲಯ, ರೈಲ್ವೆ ವಿದ್ಯುದೀಕರಣ, ಮೂಲ ಸೌಕರ್ಯ ಅಭಿವೃದ್ದಿ ಮತ್ತಿತರ ಉಪಕ್ರಮಗಳ ಕುರಿತು ರಾಷ್ಟ್ರೀಯ ರೈಲು ಮತ್ತು ಸಾಗಾಣಿಕೆ ಸಂಸ್ಥೆ -  ಎನ್.ಆರ್.ಟಿ.ಐ ಸಂಶೋಧನೆ ಕೈಗೊಳ್ಳಬೇಕು ಎಂದು ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ. ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಶ್ರೀ ಪಿಯೂಶ್ ಗೋಯಲ್ ಹೇಳಿದ್ದಾರೆ.

ರೈಲ್ವೆಯ ಎಲ್ಲಾ ತರಬೇತಿ ಸಂಸ್ಥೆಗಳು ಎನ್.ಆರ್.ಟಿ.ಐ ಆಡಳಿತ ವ್ಯವಸ್ಥೆಯ ಒಂದೇ ಸೂರಿನಡಿ ಬರಬೇಕು. ಇದರಿಂದ ಗುಣಮಟ್ಟ ಸುಧಾರಣೆ ಜತೆಗೆ ತರಬೇತಿ ಮಾನದಂಡಗಳಲ್ಲಿ ಏಕರೂಪತೆ ಬರಲಿದ್ದು, ವೆಚ್ಚ ಕಡಿಮೆಯಾಗಲಿದೆ ಮತ್ತು ಸಂಪನ್ಮೂಲ ಬಳಕೆಯನ್ನು ಅತ್ಯುತ್ತಮವಾಗಿಸಲು ಸಹಕಾರಿಯಾಗಲಿದೆ. ಎನ್.ಆರ್.ಟಿ.ಐ ಮೂರು ವರ್ಷಗಳ ಕಡಿಮೆ ಅವಧಿಯಲ್ಲಿ ಪ್ರವರ್ತಕ ಸಂಸ್ಥೆಯಾಗಿ ಹೊರ ಹೊಮ್ಮಿದ್ದು, ಇದರ ಶೈಕ್ಷಣಿಕ ಮೂಲ ಸೌಕರ್ಯ ಉತ್ಕೃಷ್ಟಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

ಉನ್ನತ ಶಿಕ್ಷಣದ ಮೇಲೆ ಕೇಂದ್ರೀಕೃತಗೊಂಡಿರುವ ಎನ್.ಆರ್.ಟಿ.ಐ ಹೊಸ ಪ್ರತಿಭೆಗಳನ್ನು ಬೆಳೆಸುವ ಮತ್ತು ವಿಶ್ವಮಟ್ಟದ ಸುಧಾರಿತ ಅಧ್ಯಯನ ಸಂಸ್ಥೆಯಾಗುವ ಹಾದಿಯಲ್ಲಿದೆ ಎಂಬುದನ್ನು ಗಮನಿಸಬಹುದಾಗಿದೆ. ರೈಲು ಮತ್ತು ಸಾರಿಗೆ ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ಅತ್ಯಾಧುನಿಕ ಸಂಶೋಧನೆ, ಸಾರಿಗೆ ಕ್ಷೇತ್ರದ ಸಂಶೋಧನೆ ಮತ್ತು ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರದ ರಚನೆಗಳಾಗಿರುವ ಅಂತರಶಿಕ್ಷಣ ಕೇಂದ್ರಗಳ ಶ್ರೇಷ್ಠತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಎನ್.ಆರ್.ಟಿ.ಐ ಹೊಂದಿದೆ.

ಪಠ್ಯ ಕ್ರಮ, ಸಂಶೋಧನಾ ಯೋಜನೆಗಳು ಮತ್ತು ಕಾರ್ಯನಿರ್ವಾಹಕ ಶಿಕ್ಷಣ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಾಂಸ್ಥಿಕ ಸಹಭಾಗಿತ್ವದ ಮೂಲಕ ಪ್ರಮುಖ ಜಾಗತಿಕ ಸಂಸ್ಥೆಗಳಿಂದ ವಿಶ್ವದಾದ್ಯಂತ ಅತ್ಯುತ್ತಮ ಪರಿಣತಿ ಪಡೆಯುವುದರ ಮೇಲೆ ಎನ್.ಆರ್.ಟಿ.ಐ ತನ್ನ ಕಾರ್ಯತಂತ್ರವನ್ನು ಕೇಂದ್ರೀಕರಿಸಿದೆ. ಸಾಗಣೆ, ಸಾರಿಗೆ ಮತ್ತು ನಿರ್ವಹಣೆಯ ಎಲ್ಲಾ ವಿಷಯಗಳಲ್ಲಿ ಎನ್.ಆರ್.ಟಿ.ಐ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ರೈಲ್ವೆ ಮತ್ತು ಸಾರಿಗೆ ಕ್ಷೇತ್ರದಲ್ಲಿ ಹಾಲಿ ಅಸ್ಥಿತ್ವದಲ್ಲಿರುವ ಪ್ರತಿಭೆಗಳಿಗೆ ವೃತ್ತಿಪರ ಪ್ರಗತಿಗಾಗಿ ಎನ್.ಆರ್.ಟಿ.ಐ ಸಹಕಾರ ನೀಡುತ್ತಿದೆ.

****



(Release ID: 1723282) Visitor Counter : 145