ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಪರಿಹಾರ ನೆರವು ಕುರಿತಂತೆ ಅಪ್ಡೇಟ್
ಇದುವರೆಗೆ 18,265 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 19,085 ಆಮ್ಲಜನಕ ಸಿಲಿಂಡರ್ ಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು; 15,256 ವೆಂಟಿಲೇಟರುಗಳು/ಬಿ.ಐ.ಪಿ.ಎ.ಪಿ; ~7.7 ಲಕ್ಷ ರೆಮಿಡಿಸಿವಿರ್ ಬಾಟಲಿಗಳು, ~ 12 ಲಕ್ಷ ಫೆವಿಪಿರವಿರ್ ಮಾತ್ರೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ/ತ್ವರಿತವಾಗಿ ಕಳುಹಿಸಿಕೊಡಲಾಗಿದೆ
Posted On:
30 MAY 2021 4:45PM by PIB Bengaluru
ಭಾರತ ಸರಕಾರವು 2021 ರ ಏಪ್ರಿಲ್ 27 ರಿಂದ ಅಂತಾರಾಷ್ಟ್ರೀಯ ಸಹಕಾರದಲ್ಲಿ ಕೋವಿಡ್ -19 ಪರಿಹಾರಾರ್ಥವಾಗಿ ವಿವಿಧ ದೇಶಗಳಿಂದ/ ಸಂಘಟನೆಗಳಿಂದ ವೈದ್ಯಕೀಯ ಪೂರೈಕೆ ಮತ್ತು ಸಲಕರಣೆಗಳನ್ನು ಪಡೆಯುತ್ತಿದೆ. ಇವುಗಳನ್ನು ತ್ವರಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಕೋವಿಡ್ -19 ನಿರ್ವಹಣೆಗೆ ಪೂರಕವಾಗಿ ಕಳುಹಿಸಿಕೊಡಲಾಗುತ್ತಿದೆ/ಪೂರೈಸಲಾಗುತ್ತಿದೆ.
ಒಟ್ಟು, 18,265 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 19,085 ಆಮ್ಲಜನಕ ಸಿಲಿಂಡರುಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು, 15,256 ವೆಂಟಿಲೇಟರುಗಳು/ಬಿಐ.ಪಿ.ಎ.ಪಿ; ~7.7 ಲಕ್ಷ ರೆಮಿಡಿಸಿವಿರ್ ಬಾಟಲಿಗಳು, ~12 ಲಕ್ಷ ಫೆವಿಪಿರವಿರ್ ಮಾತ್ರೆಗಳನ್ನು 2021 ರ ಏಪ್ರಿಲ್ 27 ರಿಂದ 2021 ರ ಮೇ 29 ರವರೆಗೆ ರಸ್ತೆ ಮತ್ತು ವಾಯು ಸಾರಿಗೆ ಮೂಲಕ ಪೂರೈಸಲಾಗಿದೆ/ಕಳುಹಿಸಿಕೊಡಲಾಗಿದೆ
ದಕ್ಷಿಣ ಕೊರಿಯಾ, ಭಾರತೀಯ ಮತ್ತು ಬೆಹರಿನ್ ನ್ ಸಂಘಟನೆಗಳು, ಶಾಂಘೈಯಲ್ಲಿರುವ ಭಾರತೀಯ ಸಮುದಾಯ, ಭಾರತೀಯ ವ್ಯಾಪಾರೋದ್ಯಮ ಮತ್ತು ವೃತ್ತಿಪರರ ಗುಂಪು ಯು.ಎ.ಇ, ಸಿಟ್ರಿಪ್ ಮತ್ತು ಎಲಿ ಲಿಲ್ಲಿ-ಇವುಗಳಿಂದ 2021ರ ಮೇ 27/29ರಂದು ಬಂದಿರುವ ಪ್ರಮುಖ ಸರಕುಗಳಲ್ಲಿ ಈ ಕೆಳಗಿನವು ಸೇರಿವೆ
ಸರಕುಗಳು
|
ಒಟ್ಟು ಸಂಖ್ಯೆ
|
ಆಮ್ಲಜನಕ ಕಾನ್ಸಂಟ್ರೇಟರ್ ಗಳು
|
225
|
ಬಾರಿಸಿಟಿನಿಬ್
|
5.6ಲಕ್ಷ ಮಾತ್ರೆಗಳು
|
- ರಾಪಿಡ್ ಡಯಾಗ್ನಾಸ್ಟಿಕ್ ಕಿಟ್ ಗಳು ಕೂಡಾ ಬಂದಿವೆ.
ತಕ್ಷಣವೇ ಅವುಗಳ ಸಮರ್ಪಕ ಮಂಜೂರಾತಿ ಮತ್ತು ಪಡೆದುಕೊಳ್ಳುವ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಸಂಸ್ಥೆಗಳಿಗೆ ರವಾನೆ ಮಾಡುವುದು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಈ ಕಾರ್ಯಚಟುವಟಿಕೆಯನ್ನು ನಿಯಮಿತವಾಗಿ ಸಮಗ್ರವಾಗಿ ಉಸ್ತುವಾರಿ ಮಾಡುತ್ತಿದೆ. ದಾನ, ಸಹಾಯ ಮತ್ತು ದೇಣಿಗೆಗಳ ರೂಪದಲ್ಲಿ ಅಂತಾರಾಷ್ಟ್ರೀಯ ಸಹಕಾರದಡಿ ಬರುತ್ತಿರುವ ವಿದೇಶೀ ಕೋವಿಡ್ ಪರಿಹಾರ ಸಾಮಗ್ರಿಗಳನ್ನು ಪಡೆದು ವಿತರಿಸುವುದಕ್ಕಾಗಿಯೇ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತ್ಯೇಕ ಸಮನ್ವಯ ಘಟಕವನ್ನು ರೂಪಿಸಿದೆ. ಈ ಘಟಕ /ಕೋಶವು 2021 ರ ಏಪ್ರಿಲ್ 26 ರಿಂದ ಕಾರ್ಯಾರಂಭ ಮಾಡಿದೆ. 2021 ರ ಮೇ 2 ರಿಂದ ಆರೋಗ್ಯ ಸಚಿವಾಲಯವು ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಯನ್ನು ರೂಪಿಸಿ ಜಾರಿಗೆ ತಂದಿದೆ.
***
(Release ID: 1723059)
Visitor Counter : 237