ವಾರ್ತಾ ಮತ್ತು ಪ್ರಸಾರ ಸಚಿವಾಲಯ
ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳನ್ನು ಉತ್ತೇಜಿಸಲು ಸಲಹಾಸೂಚಿ
Posted On:
30 MAY 2021 5:21PM by PIB Bengaluru
ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಂದು ಎಲ್ಲಾ ಖಾಸಗಿ ಟೆಲಿವಿಶನ್ ವಾಹಿನಿಗಳಿಗೆ ಸಲಹಾ ಸೂಚಿಯನ್ನು ನೀಡಿದ್ದು ಅದರಲ್ಲಿ ಈ ಕೆಳಗಿನ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಲು ವಿಶೇಷವಾಗಿ ಪ್ರೈಮ್ ಟೈಮ್ ನಲ್ಲಿ ಕಾಲಬದ್ಧ ಮಧ್ಯಂತರಗಳಲ್ಲಿ ಆಗಾಗ ಟಿಕ್ಕರ್ (ಸೂಕ್ತ ಲಯಬದ್ಧ ಸದ್ದು) ಅಥವಾ ಸೂಕ್ತ ಕಂಡ ರೀತಿಯಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಪ್ರದರ್ಶಿಸಬೇಕು ಎಂದು ಹೇಳಿದೆ.
1075
|
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ
|
1098
|
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಮಕ್ಕಳ ಸಹಾಯವಾಣಿ ಸಂಖ್ಯೆ.
|
14567
|
ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯದ ಹಿರಿಯ ನಾಗರಿಕರ ಸಹಾಯವಾಣಿ ಸಂಖ್ಯೆ.
(ಎನ್.ಸಿ.ಟಿ. ದಿಲ್ಲಿ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ)
|
08046110007
|
ಮಾನಸಿಕ ಬೆಂಬಲಕ್ಕಾಗಿ ನಿಮ್ಹಾನ್ಸ್ ಸಹಾಯವಾಣಿ ಸಂಖ್ಯೆ.
|
ನಾಗರಿಕರ ಉಪಯೋಗಕ್ಕಾಗಿ ಸರಕಾರವು ಈ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆಗಳನ್ನು ರೂಪಿಸಿ ಪ್ರಚಾರಪಡಿಸುತ್ತಿದೆ.
ಕಳೆದ ಕೆಲವು ತಿಂಗಳಿನಿಂದ ಸರಕಾರವು ವಿವಿಧ ಸಲಕರಣೆಗಳು ಮತ್ತು ಮಾಧ್ಯಮ ವೇದಿಕೆಗಳ ಮೂಲಕ ಜಾಗೃತಿಯನ್ನು ಮೂಡಿಸುತ್ತಿದೆ. ಮುದ್ರಣ, ಟಿ.ವಿ., ರೇಡಿಯೋ ಸಾಮಾಜಿಕ ಮಾಧ್ಯಮಗಳು ಇತ್ಯಾದಿಗಳ ಮೂಲಕ ಮೂರು ಸಂಕೀರ್ಣ ವಿಷಯಗಳಾದ –ಕೋವಿಡ್ ಚಿಕಿತ್ಸಾ ಶಿಷ್ಟಾಚಾರ, ಕೋವಿಡ್ ಸಮುಚಿತ ವರ್ತನೆ ಮತ್ತು ಲಸಿಕಾಕರಣಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ ಎಂಬುದನ್ನು ಸಲಹಾಸೂಚಿಯು ಪ್ರಮುಖವಾಗಿ ಪ್ರಸ್ತಾಪಿಸಿದೆ.
ಸಲಹಾಸೂಚಿಯು ಸಾಂಕ್ರಾಮಿಕದ ವಿರುದ್ಧದ ಸರಕಾರದ ಹೋರಾಟದ ಪ್ರಯತ್ನಗಳಿಗೆ ಪೂರಕವಾಗಿ ಖಾಸಗಿ ಟಿ.ವಿ. ವಾಹಿನಿಗಳು ಪ್ರಮುಖವಾದ ಪಾತ್ರವನ್ನು ವಹಿಸಿರುವುದನ್ನು ಶ್ಲಾಘಿಸಿದೆ. ಜನತೆಯಲ್ಲಿ ಸಾಂಕ್ರಾಮಿಕದ ಬಗ್ಗೆ ಜಾಗೃತಿ ಮೂಡಿಸಿದ್ದಲ್ಲದೆ ಮೇಲ್ಕಾಣಿಸಿದ ಮೂರು ವಿಷಯಗಳ ಬಗ್ಗೆಯೂ ಜನತೆಗೆ ತಿಳಿಯಪಡಿಸಿವೆ ಎಂದಿರುವ ಸಲಹಾ ಸೂಚಿಯು ಈ ನಿಟ್ಟಿನಲ್ಲಿ ಖಾಸಗಿ ಟಿ.ವಿ. ವಾಹಿನಿಗಳು ನಾಲ್ಕು ರಾಷ್ಟ್ರೀಯ ಮಟ್ಟದ ಸಹಾಯವಾಣಿ ಸಂಖ್ಯೆಗಳ ಬಗ್ಗೆ ಜಾಗೃತಿಯನ್ನು ಮೂಡಿಸುವಂತೆ ಮನವಿ ಮಾಡಿದೆ.
***
(Release ID: 1723018)
Visitor Counter : 328