ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಲಸಿಕೆ ಹಂಚಿಕೆ ಕುರಿತು ಹೊಸ ಮಾಹಿತಿ


ಜೂನ್ 2021 ರ ತಿಂಗಳಿಗೆ ಸುಮಾರು 12 ಕೋಟಿ ಡೋಸುಗಳು ರಾಷ್ಟ್ರೀಯ ಕೋವಿಡ್ ಲಸಿಕೆ ನೀಡಿಕೆಗೆ ಲಭ್ಯವಿರುತ್ತವೆ.

ಮೇ 2021 ರಲ್ಲಿ ರಾಷ್ಟ್ರೀಯ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕಾಗಿ 7,94,05,200 ಡೋಸುಗಳು ಲಭ್ಯವಾಗಿತ್ತು.

ಕೇಂದ್ರ ಆರೋಗ್ಯ ಸಚಿವಾಲಯದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜೂನ್ 2021 ರ ಎಲ್ಲ ತಿಂಗಳ ಲಸಿಕೆಗಳ ಬಗ್ಗೆ ಮುಂಚಿತ ಮಾಹಿತಿ

Posted On: 30 MAY 2021 10:50AM by PIB Bengaluru

ಲಸಿಕೆ ಹಾಕುವುದು ಸಾಂಕ್ರಾಮಿಕ ರೋಗದ ನಿಯಂತ್ರಣ ಮತ್ತು ನಿರ್ವಹಣೆಗಾಗಿ, ಜೊತೆಗೆ ಟೆಸ್ಟ್, ಟ್ರ್ಯಾಕ್, ಟ್ರೀಟ್ ಮತ್ತು ಕೋವಿಡ್ ಸೂಕ್ತ ವರ್ತನೆಯು ಭಾರತ ಸರ್ಕಾರದ ಸಮಗ್ರ ಕಾರ್ಯತಂತ್ರದ ಅವಿಭಾಜ್ಯ ಭಾಗವಾಗಿದೆ. ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕಾ ತಂತ್ರ 'ವನ್ನು ಮೇ 1, 2021 ರಿಂದ ಜಾರಿಗೆ ತರಲಾಗಿದೆ, ಇದರಲ್ಲಿ ಲಭ್ಯವಿರುವ 50% ಪ್ರಮಾಣವನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲು ಮೀಸಲಿಡಲಾಗಿದೆ, ಆದರೆ ಭಾರತ ಸರ್ಕಾರದ ವತಿಯಿಂದ ಉಚಿತವಾಗಿ ಸರಬರಾಜು ಮಾಡಲಾಗುವುದು, ಉಳಿದವು ಲಸಿಕೆ ತಯಾರಕರಿಂದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮತ್ತು ಖಾಸಗಿ ಆಸ್ಪತ್ರೆಗಳ ನೇರ ಸಂಗ್ರಹಣೆಗೆ 50% ಲಭ್ಯವಿದೆ.

ಸರ್ಕಾರದ ಹಂಚಿಕೆಯು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಕೆಯ ಮಾದರಿ, ಜನಸಂಖ್ಯೆ ಮತ್ತು ಲಸಿಕೆ ವ್ಯರ್ಥದ ಮೇಲೆ ನಿರ್ಧರಿಸಲಾಗುತ್ತದೆ. ಜೂನ್ ತಿಂಗಳಿಗೆ ಲಸಿಕೆಗಳ ಲಭ್ಯತೆಯ ಮಾಹಿತಿಯನ್ನು ಕೇಂದ್ರ ಸರ್ಕಾರವು ಕೇಂದ್ರ ಆರೋಗ್ಯ ಸಚಿವಾಲಯದ 17 ಮೇ 2021, 27 ಮೇ 2021 ಮತ್ತು 29 ಮೇ 2021 ದಿನಾಂಕದ ಪತ್ರಗಳ ಮೂಲಕ  ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಚಿತವಾಗಿ ತಿಳಿಸಿವೆ.

ಜೂನ್ ತಿಂಗಳಿಗೆ, 6.09 ಕೋಟಿ (6,09,60,000) ಡೋಸ್ ಕೋವಿಡ್ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದ್ಯತೆಯ ಗುಂಪಿನ ಆರೋಗ್ಯ ಕಾರ್ಯಕರ್ತರು (ಎಚ್ಸಿಡಬ್ಲ್ಯುಗಳು)ಮುಂಚೂಣಿ ಕಾರ್ಯಕರ್ತರು (ಎಫ್ಎಲ್ಡಬ್ಲ್ಯೂ) ಮತ್ತು 45 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ಹಾಕುವದಕ್ಕಾಗಿ ಉಚಿತವಾಗಿ ಭಾರತ ಸರ್ಕಾರದಿಂದ ಸರಬರಾಜು ಮಾಡಲಾಗುವುದು. ಇದಲ್ಲದೆ, ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳ ನೇರ ಸಂಗ್ರಹಣೆಗಾಗಿ 5.86 ಕೋಟಿ (5,86,10,000) ಡೋಸ್ (ಪ್ರಮಾಣಗಳು) ಗಳು ಲಭ್ಯವಿರುತ್ತವೆ. ಆದ್ದರಿಂದ, ರಾಷ್ಟ್ರೀಯ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕಾಗಿ ಜೂನ್ 2021 ರಲ್ಲಿ 12 ಕೋಟಿ (11,95,70,000) ಡೋಸುಗಳು ಲಭ್ಯವಿರುತ್ತವೆ.

ಹಂಚಿಕೆಯ ವಿತರಣಾ ವೇಳಾಪಟ್ಟಿಯನ್ನು ಮುಂಚಿತವಾಗಿ ಹಂಚಿಕೊಳ್ಳಲಾಗುತ್ತದೆ. ನಿಗದಿಪಡಿಸಿದ ಡೋಸುಗಳ ತರ್ಕಬದ್ಧ ಮತ್ತು ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಲಸಿಕೆ ವ್ಯರ್ಥವನ್ನು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯಗಳಿಗೆ ಕೋರಲಾಗಿದೆ.

ರಾಜ್ಯಗಳು ಮತ್ತು  ಕೇಂದ್ರಾಡಳಿತ ಪ್ರದೇಶಗಳಿಂದ ಲಸಿಕೆ ನೀಡಿಕೆಯ ಉತ್ತಮ ಯೋಜನೆ ಮತ್ತು ವಿತರಣೆಗೆ ಸಹಾಯವಾಗಲು 15/30 ದಿನಗಳವರೆಗೆ ಭಾರತ ಸರ್ಕಾರದಿಂದ ಲಭ್ಯವಾಗಲಿರುವ ಉಚಿತ ಲಸಿಕೆ ಪ್ರಮಾಣಗಳ ಪ್ರಮಾಣ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನೇರ ಸಂಗ್ರಹಣೆಗೆ ಲಭ್ಯವಿರುವ ಒಟ್ಟು ಲಸಿಕೆ ಪ್ರಮಾಣಗಳನ್ನು ಖಚಿತಪಡಿಸಿಕೊಳ್ಳುವುದು ಕೇಂದ್ರ ಸರ್ಕಾರದಿಂದ ಮುಂಚಿತವಾಗಿ ಮಾಹಿತಿಯನ್ನು ನೀಡುವ ಹಿಂದಿನ ಉದ್ದೇಶವಾಗಿದೆ.

2021 ಮೇ ತಿಂಗಳಿಗೆ, ಒಟ್ಟು 4.03 ಕೋಟಿ (4,03,49,830) ಲಸಿಕೆ ಡೋಸುಗಳನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಉಚಿತವಾಗಿ ಸರಬರಾಜು ಮಾಡಿದೆ. ಹೆಚ್ಚುವರಿಯಾಗಿ, ಇದಲ್ಲದೆ, 2021 ಮೇ ತಿಂಗಳಲ್ಲಿ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳ ನೇರ ಸಂಗ್ರಹಕ್ಕಾಗಿ ಒಟ್ಟು 3.90 ಕೋಟಿಗಿಂತಲೂ (3,90,55,370)  ಹೆಚ್ಚು  ಪ್ರಮಾಣಗಳು ಲಭ್ಯವಿವೆ. ಆದ್ದರಿಂದ, ಮೇ 2021 ರಲ್ಲಿ ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕಾಗಿ ಒಟ್ಟು 7,94,05,200 ಪ್ರಮಾಣಗಳು ಲಭ್ಯವಿವೆ 

***



(Release ID: 1722992) Visitor Counter : 225