ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ರೆಮ್‌ಡೆಸಿವಿರ್ ಔಷಧದ ಕೇಂದ್ರೀಯ ಹಂಚಿಕೆ ನಿಲ್ಲಿಸಲು ನಿರ್ಧರಿಸಿದ ಸರಕಾರ
ರೆಮ್‌ಡೆಸಿವಿರ್ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸಲಾಗಿದೆ
ದೇಶದಕಲ್ಲಿ ಸಾಕಷ್ಟು ರೆಮ್‌ಡೆಸಿವಿರ್ ಲಭ್ಯವಿದ್ದು, ಬೇಡಿಕೆಗಿಂತಲೂ ಪೂರೈಕೆ ಹೆಚ್ಚಾಗಿದೆ
ರೆಮ್‌ಡೆಸಿವಿರ್‌ನ 50 ಲಕ್ಷ ಸೀಸೆಗಳ ಸಂಗ್ರಹದ ನಿರ್ವಹಣೆ ಮುಂದುವರಿಯಲಿದೆ
Posted On:
29 MAY 2021 12:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೆಮ್‌ಡೆಸಿವಿರ್ ಉತ್ಪಾದನೆಯನ್ನು ಹತ್ತು ಪಟ್ಟು ಹೆಚ್ಚಿಸಲಾಗಿದ್ದು, 2021ರ ಏಪ್ರಿಲ್ 11ರಂದು ದಿನಕ್ಕೆ 33,000 ಸೀಸೆಗಳಷ್ಟಿದ್ದ ಈ ಔಷಧದ ಉತ್ಪಾದನೆ ಇಂದು ದಿನಕ್ಕೆ 3,50,000 ಸೀಸೆಗಳಿಗೆ ವೃದ್ಧಿಸಿದೆ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಶ್ರೀ ಮನ್‌ಸುಖ್ ಮಾಂಡವಿಯಾ ಅವರು ಮಾಹಿತಿ ನೀಡಿದರು.
ರಮ್‌ಡೆಸಿವಿರ್ ಉತ್ಪಾದಿಸುವ ಘಟಕಗಳ ಸಂಖ್ಯೆಯನ್ನು ಒಂದು ತಿಂಗಳೊಳಗೆ 20ರಿಂದ 60 ಘಟಕಗಳಿಗೆ ಸರಕಾರ ಹೆಚ್ಚಿಸಿದೆ ಎಂದು ಸಚಿವರು ತಿಳಿಸಿದರು. ಈಗ ದೇಶದಲ್ಲಿ ಸಾಕಷ್ಟು ರೆಮ್‌ಡೆಸಿವಿರ್ ಲಭ್ಯವಿದ್ದು, ಬೇಡಿಕೆಗಿಂತ ಪೂರೈಕೆಯು ಹೆಚ್ಚಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯಗಳಿಗೆ ಕೇಂದ್ರದಿಂದ ರೆಮ್‌ಡೆಸಿವಿರ್ ಹಂಚಿಕೆಯನ್ನು ನಿಲ್ಲಿಸಲು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು. ದೇಶದಲ್ಲಿ ರೆಮ್‌ಡೆಸಿವಿರ್ ಲಭ್ಯತೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಅವರು ರಾಷ್ಟ್ರೀಯ ಔಷಧ ದರ ಸಂಸ್ಥೆ ಮತ್ತು ʻಸಿಡಿಎಸ್‌ಸಿಒʼಗೆ ನಿರ್ದೇಶನ ನೀಡಿದ್ದಾರೆ.
ತುರ್ತು ಅಗತ್ಯಕ್ಕಾಗಿ ವ್ಯೂಹಾತ್ಮಕ ಸಂಗ್ರಹವನ್ನು ನಿರ್ವಹಿಸಲು ಭಾರತ ಸರಕಾರ ರೆಮ್‌ಡೆಸಿವಿರ್‌ನ 50 ಲಕ್ಷ ಸೀಸೆಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ಅವರು ಹೇಳಿದರು.
***
(Release ID: 1722676)
Visitor Counter : 219
Read this release in:
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam