ಇಂಧನ ಸಚಿವಾಲಯ

ಕೊರೊನ ವೈrರಾಣುವಿನ  ಹರಡುವಿಕೆಯಿಂದ  ಸಮಾಜವನ್ನು ರಕ್ಷಿಸಲು ಎನ್ಟಿಪಿಸಿ ಸಹಾಯವನ್ನು ಒದಗಿಸುತ್ತದೆ

Posted On: 27 MAY 2021 12:05PM by PIB Bengaluru

ಇಂಧನ ಸಚಿವಾಲಯದ  ದೇಶದ ಅತಿದೊಡ್ಡ ಇಂಧನ ಉದ್ದಿಮೆಯಾದ ಎನ್ ಟಿ ಪಿ ಸಿ, ಕೋವಿಡ್ -19 ಎರಡನೇ ಅಲೆಯಲ್ಲಿ ದೇಶಕ್ಕೆ ನಿರಂತರ ವಿದ್ಯುತ್ ಸರಬರಾಜನ್ನು ಖಾತ್ರಿಪಡಿಸಿದೆ ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಮೂಲಕ ಕೋವಿಡ್  ಹರಡುವಿಕೆಯನ್ನು ಎದುರಿಸಲು ಮಹತ್ವದ ಪ್ರಯತ್ನಗಳನ್ನು ಮಾಡಿ ಸಮಾಜಕ್ಕೆ ಕೊಡುಗೆ ನೀಡಿದೆ.

ಎನ್ ಟಿಪಿಸಿ ಯು 600 ಕ್ಕೂ ಹೆಚ್ಚು ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳು ಮತ್ತು 1200 ಪ್ರತ್ಯೇಕತೆಯ  ಹಾಸಿಗೆಗಳನ್ನು ಒಂದು ವಾರದ ಅವಧಿಯಲ್ಲಿ ಯುದ್ದೋಪಾದಿಯಲ್ಲಿ  ವಿವಿಧ ಯೋಜನೆಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಿತು, ಇದು ಸಾಮಾನ್ಯ ಜನರು ಸೇರಿದಂತೆ ಅನೇಕರಿಗೆ ಜೀವ ರಕ್ಷಕ ಎಂದು ಸಾಬೀತಾಯಿತು. ಎನ್ ಟಿಪಿಸಿ ರಾಜ್ಯ ಮತ್ತು ಜಿಲ್ಲಾಡಳಿತದೊಂದಿಗೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ದೂರದ ಸ್ಥಳಗಳಲ್ಲಿಯೂ ಸಹ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸಿದೆವಿಶೇಷವಾಗಿ ದೆಹಲಿ ಮತ್ತು ಎನ್ ಸಿಆರ್ (ರಾಷ್ಟ್ರೀಯ ರಾಜಧಾನಿ ಪ್ರದೇಶ) ನಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದ ಮಧ್ಯೆ, ಎನ್ಟಿಪಿಸಿ ತನ್ನ ಪ್ರಯತ್ನಗಳನ್ನು ಚುರುಕುಗೊಳಿಸಿತು ಮತ್ತು ಎನ್ ಸಿಆರ್ನಲ್ಲಿಯೇ 200 ಆಮ್ಲಜನಕ ಸೌಲಭ್ಯದ ಹಾಸಿಗೆಗಳು ಮತ್ತು 140 ಪ್ರತ್ಯೇಕತೆಯ ಹಾಸಿಗೆಗಳನ್ನು ಒದಗಿಸಿತು, ಇದು ಕೋವಿಡ್ ರೋಗಿಗಳಿಗೆ ದೊಡ್ಡ ಪರಿಹಾರವಾಗಿದೆದಾದ್ರಿ, ನೋಯ್ಡಾ ಮತ್ತು ಬಾದೂರುಗಳಲ್ಲಿ ಸ್ಥಾಪಿಸಲಾದ ಎನ್ ಸಿಆರ್ನಲ್ಲಿನ ಮೂಲಸೌಕರ್ಯವು ಇಪ್ಪತ್ತನಾಲ್ಕು ಗಂಟೆಯೂ ನರ್ಸಿಂಗ್ ಮತ್ತು ವೈದ್ಯಕೀಯ ಆರೈಕೆಯ ಜೊತೆಗೆ ಆಮ್ಲಜನಕ ಬೆಂಬಲ, ಕೋವಿಡ್  ಪರೀಕ್ಷೆ, ಟ್ಯೂಬ್  ಒಳ ಸೇರಿಸುವ ಮತ್ತು ಟ್ಯೂಬ್ ಒಳಸೇರಿಸದೆಯೂ  ಉಪಯೋಗಿಸುವ  ವೆಂಟಿಲೇಟರ್ಗಳ ಸೌಲಭ್ಯವನ್ನು ಹೊಂದಿದೆ. 30 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ಸೌಲಭ್ಯವನ್ನು ನಿರ್ವಹಿಸಲು ಎನ್ ಟಿಪಿಸಿ 40ಕ್ಕೂ ಹೆಚ್ಚು ವೈದ್ಯರು, ನೂರಾರು ಅರೆವೈದ್ಯಕೀಯ ಮತ್ತು ಪೋಷಕ ಸಿಬ್ಬಂದಿಯನ್ನು ಮತ್ತು  ದಿನದ ಇಪ್ಪತ್ತನಾಲ್ಕು ಗಂಟೆಯು  ಇರುವ ಆಕ್ಸಿಜನ್ ಆಂಬ್ಯುಲೆನ್ಸ್ಗಳನ್ನು ನೀಡಿದೆ.

ಒಡಿಶಾದ ಸುಂದರಗಢದಲ್ಲಿ 400 ಕೋಟಿ ರೂ.ಗಳ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯದೊಂದಿಗೆ  ಎನ್ ಟಿಪಿಸಿ ನಿರ್ಮಿಸಿದ 500 ಹಾಸಿಗೆಗಳ ಆಸ್ಪತ್ರೆಯನ್ನು ಸಾಂಕ್ರಾಮಿಕ ಸಮಯದಲ್ಲಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ, ಇದು ಪ್ರದೇಶದ ಲಕ್ಷಾಂತರ ಜನರಿಗೆ ಸೇವೆ ಸಲ್ಲಿಸುತ್ತಿದೆವಿವಿಧ ವೈದ್ಯಕೀಯ ಉಪಕರಣಗಳನ್ನು ಒದಗಿಸುವುದರ ಜೊತೆಗೆ, ಎನ್ ಟಿಪಿಸಿ 20 ವೆಂಟಿಲೇಟರ್ಗಳನ್ನು ಒದಗಿಸುವ ಮೂಲಕ ಸೌಲಭ್ಯವನ್ನು ಹೆಚ್ಚಿಸಿದೆ, ಇದು ಹಲವಾರು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡಿತು. ಇದಲ್ಲದೆತುರ್ತು ಆರೈಕೆಯ ಬೇಡಿಕೆಯನ್ನು ಪರಿಗಣಿಸಿ, ಎನ್ ಟಿಪಿಸಿ ಆಸ್ಪತ್ರೆಗೆ ಹೆಚ್ಚುವರಿ 40 ವೆಂಟಿಲೇಟರ್ಗಳನ್ನು ಒದಗಿಸುತ್ತಿದೆ. ಜಾರ್ಸುಗುಡದಲ್ಲಿ 30 ಐಸಿಯು ಹಾಸಿಗೆಗಳನ್ನು ಸ್ಥಾಪಿಸಲು ಎನ್ ಟಿಪಿಸಿ ಡಾರ್ಲಿಪಾಲಿ  ಶಾಖೆಯು ಸಹ ನೆರವು ನೀಡುತ್ತಿದೆ.

ಎನ್ ಟಿಪಿಸಿ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲಾ ಆಸ್ಪತ್ರೆಯಲ್ಲಿ 2.24 ಕೋಟಿ ರೂ.ಗಳ ವೆಚ್ಚದಲ್ಲಿ 250 ಆಕ್ಸಿಜನ್ ಸೌಲಭ್ಯ್ದ  ಹಾಸಿಗೆಗಳು, 20 ಎಚ್ ಡಿಯುಗಳು ಮತ್ತು 10 ಐಸಿಯುಗಳನ್ನು ನಿರ್ಮಿಸಿದೆದೂರದ ಸ್ಥಳಗಳಲ್ಲಿನ ಸೌಲಭ್ಯವು ಸ್ಥಳೀ ಸಾರ್ವಜನಿಕರಿಗೆ ವರದಾನವಾಗಿದ್ದುಕೋವಿಡ್ ಸಂಕಷ್ಟದ ಸಮಯದಲ್ಲಿ ಅನೇಕರ ಜೀವಗಳನ್ನು ಉಳಿಸಿದೆ. ಜಾರ್ಖಂಡ್, ಎನ್ ಟಿಪಿಸಿ, ಎನ್ ಟಿಪಿಸಿ, ಜಾರ್ಖಂಡ್ನ ಸಮುದಾಯ ಆರೋಗ್ಯ ಕೇಂದ್ರ, ತಾಂಡ್ವಾ, ಡಿಸ್ಟಾಚತ್ರದಲ್ಲಿ  15 ಐಸಿಯು ಹಾಸಿಗೆಗಳ ಜೊತೆಗೆ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ಸ್ಥಾಪಿಸಲು 53 ಲಕ್ಷ ಆರ್ಥಿಕ ನೆರವು ನೀಡಿದೆ. ಇದಲ್ಲದೆ, ಜಾರ್ಖಂಡ್ನ ಹಜಾರಿಬಾಗ್ ನಲ್ಲಿರುವ ಎನ್ ಟಿಪಿಸಿಯ ಗಣಿಗಾರಿಕೆ ಯೋಜನೆಯಾದ ಪಕ್ರಿಬಾರ್ವಾಡಿ, ರಿಮ್ಸ್, ರಾಂಚಿ ಮತ್ತು ಐಟಿಕೆಟಿಐ, ರಾಂಚಿ ಮತ್ತು ಹಜಾರಿಬಾಗ್ ವೈದ್ಯಕೀಯ ಕಾಲೇಜಿನಲ್ಲಿ ಕೇಂದ್ರೀಕೃತ ವೈದ್ಯಕೀಯ ಅನಿಲ ಪೈಪ್ಲೈನ್ ವ್ಯವಸ್ಥೆಯನ್ನು 1 ಕೋಟಿ  ರೂಪಾಯಿಗಳ ವೆಚ್ಚದಲ್ಲಿ 1000 ಹಾಸಿಗೆಗಳಿಗೆ ಆಮ್ಲಜನಕವನ್ನು ಪೂರೈಸುತ್ತಿದೆ. . ಎನ್ ಟಿಪಿಸಿಯ ಅನೇಕ ಯೋಜನೆಗಳು ದೇಶದ ದೂರದ ಭಾಗಗಳಲ್ಲಿವೆ ಮತ್ತು ಅವುಗಳು ತಮ್ಮ ಸುತ್ತಮುತ್ತಲಿನ ವೈದ್ಯಕೀಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಮತ್ತು ವೃದ್ಧಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಡುಗೆ ನೀಡಿವೆ.

ಈಗಿನ ಬಿಕ್ಕಟ್ಟಿನ ಸಂದರ್ಭದಲ್ಲಿ, ವಿವಿಧ ಎನ್ ಟಿಪಿಸಿ ಯೋಜನೆಗಳು ಜಿಲ್ಲಾ ಆಡಳಿತಗಳಿಗೆ 2000 ಕ್ಕೂ ಹೆಚ್ಚು ಕೈಗಾರಿಕಾ ಸಿಲಿಂಡರ್ಗಳನ್ನು ಒದಗಿಸಿವೆ, ಇವುಗಳನ್ನು ವೈದ್ಯಕೀಯ ಆಮ್ಲಜನಕ ಸಿಲಿಂಡರ್ಗಳಾಗಿ ಪರಿವರ್ತಿಸಲಾಗುತ್ತಿದೆ. ಕೋವಿಡ್  ರೋಗಿಗಳಿಗೆ ಜೀವ ಉಳಿಸುವ ಏಕೈಕ ಅನಿಲವಾಗಿರುವ ಆಮ್ಲಜನಕದ ಬೇಡಿಕೆಯ ಹೆಚ್ಚಳವನ್ನು ಗಮನಿಸಿದ ಎನ್ ಟಿಪಿಸಿ ದೇಶಾದ್ಯಂತ  24ಕ್ಕಿಂತಲೂ ಹೆಚ್ಚು ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಮೂಲಕ ದೇಶಾದ್ಯಂತ ಆಮ್ಲಜನಕ ಉತ್ಪಾದನೆಯ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇವುಗಳಲ್ಲಿ ಕೆಲವು ಆಮ್ಲಜನಕ ಸಿಲಿಂಡರ್ಗಳನ್ನು ಬಾಟ್ಲಿಂಗ್ ಮತ್ತು ಮರುಪೂರಣಗೊಳಿಸುವ ಸೌಲಭ್ಯ ಹೊಂದಿವೆ ಪೈಕಿ 9 ಪಿಎಸ್ಎ ಮಾದರಿಯ ಘಟಕಗಳು ಮತ್ತು  2 ಬಾಟ್ಲಿಂಗ್ ಸ್ಥಾವರಗಳನ್ನು ಎನ್ ಸಿಆರ್ನಲ್ಲಿಯೇ ಸ್ಥಾಪಿಸಲಾಗುತ್ತಿದ್ದು, ತಿಂಗಳಿನಿಂದಲೇ ಹಂತ ಹಂತವಾಗಿ ಕಾರ್ಯನಿರ್ವಹಿಸಲು ಪ್ರಾರಂಭವಾಗುತ್ತದೆ. 600 ಎಲ್ ಪಿ ಎಂ, ಪಿಎಸ್ಎ ಮಾದರಿಯ ಆಮ್ಲಜನಕ ಘಟಕವನ್ನು  ರಾಜಸ್ಥಾನದ ಸಿಎಚ್ ಸಿ, ಛಾಬ್ರಾ, ಬರನ್  ಜಿಲ್ಲೆನಲ್ಲಿ ಸುಮಾರು ಒಂದು ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿದ್ದು, ಇದಕ್ಕಾಗಿ ಈಗಾಗಲೇ ಖರೀದಿ ಆದೇಶವನ್ನು ನೀಡಲಾಗಿದೆ. ಆಯಾ ಜಿಲ್ಲೆ ಅಥವಾ ಪ್ರದೇಶದಲ್ಲಿ ಆಮ್ಲಜನಕ ಘಟಕವಗಳನ್ನು ಸ್ಥಾಪಿಸುತ್ತಿರುವ ಎನ್ ಟಿಪಿಸಿಯ ಇತರ ಯೋಜನೆಗಳು, ಉತ್ತರ ಪ್ರದೇಶದಲ್ಲಿ ರಿಹಂದ್ ಮತ್ತು ಉಂಚಹಾರ್, ಮಧ್ಯಪ್ರದೇಶದಲ್ಲಿ ವಿಂಧ್ಯಾಚಲ್, ಗದರ್ವಾರಾಖಾರ್ಗೋನ್ ಮತ್ತು ಒಡಿಶಾದ ಡಾರ್ಲಿಪಾಲಿಯಲ್ಲಿ ಇವೆ. ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಎನ್ ಟಿಪಿಸಿ ಒಟ್ಟು 12 ಕೋಟಿ ರೂಪಾಯಿಗಳನ್ನು ಭರಿಸಿದೆ.

ಎನ್ ಟಿಪಿಸಿ ತನ್ನ ಸುತ್ತಮುತ್ತಲಿನ ಜನರಿಗೆ ಕೋವಿಡ್ನ ಅಗತ್ಯ ಔಷಧಿಗಳನ್ನು ಒದಗಿಸುತ್ತಿರುವುದು ಮಾತ್ರವಲ್ಲದೆ ಅವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಎನ್ ಟಿಪಿಸಿ ವಿಂಧ್ಯಾಚಲ್ ನಲ್ಲಿಯೇ ಸುತ್ತಮುತ್ತಲಿನ 250 ಕ್ಕೂ ಹೆಚ್ಚು ಕೋವಿಡ್ ಸೋಂಕಿತ ರಿಗೆ ಚಿಕಿತ್ಸೆ ನೀಡಿದ್ದು ಜೊತೆಗೆ ತನ್ನದೇ ಆದ ಕೆಲಸದವರಿಗೆ ಚಿಕಿತ್ಸೆ ನೀಡಿದೆ. ತನ್ನ ಕಾರ್ಯಾಚರಣೆಗಳಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಹೆಚ್ಚಿಸುವುದು ಮತ್ತು ಬಲಪಡಿಸುವುದರ ಜೊತೆಗೆ, ಎನ್ ಟಿಪಿಸಿ ಕೋವಿಡ್ -19 ಎರಡನೇ ಅಲೆಯಲ್ಲಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸಲು ಬೃಹತ್ ಜಾಗೃತಿ  ಅಭಿಯಾನಕ್ಕೆ ಚಾಲನೆ ನೀಡಿದೆ. ಎಸ್ಪಿ, ಸಿಂಗ್ರೌಲಿಯೊಂದಿಗೆ ಸಹಯೋಗದಲ್ಲಿ ಕೋವಿಡ್ ಬಗ್ಗೆ ಸಾಮೂಹಿಕ ಅಭಿಯಾನದ ಉಪಕ್ರಮವನ್ನು ಎರಡು ಮೀಸಲಾದ ಆಂಬ್ಯುಲೆನ್ಸ್ಗಳೊಂದಿಗೆ ಎನ್ ಟಿಪಿಸಿ ವಿಂಧ್ಯಾಚಲ್  ಶ್ರವಣ ಮತ್ತು ದೃಶ್ಯ ಮಾಧ್ಯೀಮದ ಸೌಲಭ್ಯದೊಂದಿಗೆ ಕೈಗೊಂಡಿದ್ದು, ಇದು 300 ಹಳ್ಳಿಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ತಲುಪಿದೆ.   ಇದಲ್ಲದೆ ಎಲ್ಲಾ ಎನ್ಟಿಪಿಸಿ ಕೇಂದ್ರಗಳು ಪಿಪಿಇ ಕಿಟ್ಗಳು, ಮುಖಗವಸುಗಳು, ಸ್ಯಾನಿಟೈಸರ್ಗಳು, ಪಡಿತರ ಮತ್ತು ಸಮುದಾಯದ ಕಲ್ಯಾಣಕ್ಕೆ ಅಗತ್ಯವಾದ ಇತರ ವಸ್ತುಗಳ ಸಾಮೂಹಿಕ ವಿತರಣೆಯಲ್ಲಿ ಸಹಾಯ ಮಾಡಿವೆ. ಅಲ್ಲದೆ, ಅದರ ಸಿಐಎಸ್ಎಫ್ ಅಗ್ನಿಶಾಮಕ ವಿಭಾಗದ ಸಹಯೋಗದೊಂದಿಗೆ ಎನ್ ಟಿಪಿಸಿ ಯೋಜನೆಗಳು ನೂರಾರು ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಸಾಮೂಹಿಕ ನೈರ್ಮಲ್ಯೀಕರಣ ಕಾರ್ಯಕ್ರಮವನ್ನು ಕೈಗೊಳ್ಳುತ್ತಿವೆ. ಎನ್ ಟಿಪಿಸಿ ಮತ್ತು ಎನ್ ಟಿಪಿಸಿ ನೌಕರರ ಎನ್ ಜಿಒಗಳ ಮಹಿಳಾ ಕ್ಲಬ್ಗಳು ಸಹ ಮುಂದೆ ಬಂದು ಬಿಕ್ಕಟ್ಟಿನ ಸಂದರ್ಭದಲ್ಲಿ ಸಮಾಜಕ್ಕೆ ಸಹಾಯ ಹಸ್ತ ಚಾಚಿದೆ.

ಎಲ್ಲಾ ಎನ್ ಟಿಪಿಸಿ ಘಟಕಗಳಲ್ಲಿ ತನ್ನ ಉದ್ಯೋಗಿಗಳು, ಅವರ ಅವಲಂಬಿತರು ಮತ್ತು ಇತರ ಪಾಲುದಾರರಿಗೆ ಲಸಿಕೆಯನ್ನು ನೀಡಲು ಎನ್ ಟಿಪಿಸಿ ಅತ್ಯುತ್ತಮ ಪ್ರಯತ್ನ ಮಾಡಿದೆ. ಇಲ್ಲಿಯವರೆಗೆ, ಎನ್ ಟಿಪಿಸಿ ತನ್ನ ಕಾರ್ಯಾಚರಣೆಗಳಲ್ಲಿ 70,000ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿದೆ, ಇದರಲ್ಲಿ ನೌಕರರು, ಅವರ ಅವಲಂಬಿತರು ಮತ್ತು ಸಮುದಾಯದ ಜನರು ಸೇರಿದ್ದಾರೆ. ವಿವಿಧ ಸ್ಥಳಗಳಲ್ಲಿ ಸಾಮೂಹಿಕ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗಿದೆ. ಇದಲ್ಲದೆ, ಎನ್ ಟಿಪಿಸಿ ತನ್ನ 100%ರಷ್ಟು  ಉದ್ಯೋಗಿಗಳು, ಕುಟುಂಬ ಸದಸ್ಯರು ಮತ್ತು ಸಹವರ್ತಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದೆಯಲ್ಲದೆ ಜೊತೆಗೆ ಸುತ್ತಮುತ್ತಲಿನ ಜನರಿಗೆ ಲಸಿಕೆ ಹಾಕುವ ಯೋಜನೆಯನ್ನು ಹೊಂದಿದೆ. ಎನ್ ಟಿ ಪಿಸಿ ಡಾರ್ಲಿಪಾಲಿ ಅದರ ಸುತ್ತಮುತ್ತಲಿನ ಜನರಿಗೆ 10,000 ಲಸಿಕೆಗಳನ್ನು ಸಂಗ್ರಹಿಸುತ್ತಿದೆ.

ಎನ್ ಟಿಪಿಸಿಯು ಲಾಭಕ್ಕೂ ಮೀರಿ ಜನರ ಒಳಿತಿನ  ತತ್ತ್ವವನ್ನು ನಂಬುತ್ತದೆ ಮತ್ತು ಮತ್ತೆ ಸಮಾಜಕ್ಕೆ ಹಿಂತಿರುಗಿಸುವ ಆಳವಾದ ಪ್ರಜ್ಞೆಯನ್ನು ಹೊಂದಿದೆಎನ್ ಟಿಪಿಸಿ ಮಾಡುತ್ತಿರುವ ಅತ್ಯುತ್ತಮ ಪ್ರಯತ್ನಗಳು ಕೋವಿಡ್ 19 ವಿರುದ್ಧ ಹೋರಾಡುವಲ್ಲಿ ಮತ್ತು ಬಿಕ್ಕಟ್ಟಿನಿಂದ ಹೊರಬರಲು ಸಮಾಜಕ್ಕೆ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡುವಲ್ಲಿ ಆಶಾಕಿರಣವನ್ನು ತಂದಿದೆ. ಎನ್ ಟಿಪಿಸಿ ನಿರ್ಮಿಸುತ್ತಿರುವ ವೈದ್ಯಕೀಯ ಮತ್ತು ಆಮ್ಲಜನಕದ ಮೂಲಸೌಕರ್ಯವು ಸಾಂಕ್ರಾಮಿಕ ಬಿಕ್ಕಟ್ಟಿನ ಸಮಯದಲ್ಲಿ  ನೆರವಾಗುವುದು ಮಾತ್ರವಲ್ಲದೆ ಭವಿಷ್ಯದಲ್ಲಿಯೂ ಸಹ ಇಂತಹ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಪ್ರಮುಖವಾಗಿರುತ್ತದೆ.

***



(Release ID: 1722415) Visitor Counter : 206