ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಹಾರ ನೆರವು ಕುರಿತಂತೆ ಅಪ್ಡೇಟ್


ಇದುವರೆಗೆ 18,006 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 19,085 ಆಮ್ಲಜನಕ ಸಿಲಿಂಡರ್ ಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು; 14,514 ವೆಂಟಿಲೇಟರುಗಳು/ಬಿ.ಐ.ಪಿ.ಎ.ಪಿ; ~7 ಲಕ್ಷ ರೆಮಿಡಿಸಿವಿರ್ ಬಾಟಲಿಗಳು, ~ 12 ಲಕ್ಷ ಫೆವಿಪಿರವಿರ್ ಮಾತ್ರೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿದೆ/ತ್ವರಿತವಾಗಿ ಕಳುಹಿಸಿಕೊಡಲಾಗಿದೆ

Posted On: 27 MAY 2021 2:32PM by PIB Bengaluru

ಭಾರತ ಸರಕಾರವು 2021 ಏಪ್ರಿಲ್ 27 ರಿಂದ ಅಂತಾರಾಷ್ಟ್ರೀಯ ಸಹಕಾರದಲ್ಲಿ ಕೋವಿಡ್ -19 ಪರಿಹಾರಾರ್ಥವಾಗಿ ವಿವಿಧ ದೇಶಗಳಿಂದ/ ಸಂಘಟನೆಗಳಿಂದ ವೈದ್ಯಕೀಯ ಪೂರೈಕೆ ಮತ್ತು ಸಲಕರಣೆಗಳನ್ನು ಪಡೆಯುತ್ತಿದೆ. ಇವುಗಳನ್ನು ತ್ವರಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವುಗಳ ಕೋವಿಡ್ -19 ನಿರ್ವಹಣೆಗೆ ಪೂರಕವಾಗಿ ಕಳುಹಿಸಿಕೊಡಲಾಗುತ್ತಿದೆ/ಪೂರೈಸಲಾಗುತ್ತಿದೆ.

ಒಟ್ಟು, 18,006 ಆಮ್ಲಜನಕ ಕಾನ್ಸಂಟ್ರೇಟರ್ ಗಳು; 19,085 ಆಮ್ಲಜನಕ ಸಿಲಿಂಡರುಗಳು; 19 ಆಮ್ಲಜನಕ ಉತ್ಪಾದನಾ ಸ್ಥಾವರಗಳು, 14,514 ವೆಂಟಿಲೇಟರುಗಳು/ಬಿಐ.ಪಿ..ಪಿ; ~7 ಲಕ್ಷ ರೆಮಿಡಿಸಿವಿರ್ ಬಾಟಲಿಗಳು, ~12 ಲಕ್ಷ ಫೆವಿಪಿರವಿರ್ ಮಾತ್ರೆಗಳನ್ನು 2021 ಏಪ್ರಿಲ್ 27 ರಿಂದ 2021 ಮೇ 26 ರವರೆಗೆ ರಸ್ತೆ ಮತ್ತು ವಾಯು ಸಾರಿಗೆ ಮೂಲಕ ಪೂರೈಸಲಾಗಿದೆ/ಕಳುಹಿಸಿಕೊಡಲಾಗಿದೆ

ಸಿಂಗಾಪುರ, ಬ್ರೂನೈ, ಒಮಾನ್, ಒಂಟಾರಿಯೋ (ಕೆನಡಾ) , ಈಜಿಪ್ಟ್, ಸಿಂಗಾಪುರ ರೆಡ್ ಕ್ರಾಸ್ ಸೊಸೈಟಿ, ಸೇವಾ ಇಂಟರ್ನಾಶನಲ್ (ಆಸ್ಟ್ರೇಲಿಯಾ), ಸ್ವಿಸ್ ಇಂಡಿಯಾ ಚೇಂಬರ್ ಆಫ್ ಕಾಮರ್ಸ್ , ಫಾರಂ ಆಫ್ ಇಂಡಿಯನ್ ಪ್ರೊಫೆಷನಲ್ (ಹಾಂಕಾಂಗ್) ಮತ್ತು ಫೋಕ್ಸ್ ವ್ಯಾಗನ್ (ಜರ್ಮನಿ) ಗಳಿಂದ 2021 ಮೇ 25/26ರಂದು ಬಂದಿರುವ ಪ್ರಮುಖ ಸರಕುಗಳಲ್ಲಿ ಕೆಳಗಿನವು ಸೇರಿವೆ.

ಸರಕುಗಳು

ಒಟ್ಟು ಸಂಖ್ಯೆ

ಆಮ್ಲಜನಕ ಕಾನ್ಸಂಟ್ರೇಟರ್ ಗಳು

155

ಆಮ್ಲಜನಕ ಸಿಲಿಂಡರ್ ಗಳು

900

ವೆಂಟಿಲೇಟರ್/ಬಿ..-ಪಿ..ಪಿ/ಸಿ.ಪಿ..ಪಿ.

1,045

ತಕ್ಷಣವೇ ಅವುಗಳ ಸಮರ್ಪಕ ಮಂಜೂರಾತಿ ಮತ್ತು ಪಡೆದುಕೊಳ್ಳುವ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಮತ್ತು ಸಂಸ್ಥೆಗಳಿಗೆ ರವಾನೆ ಮಾಡುವುದು ಚಾಲ್ತಿಯಲ್ಲಿರುವ ಪ್ರಕ್ರಿಯೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯವು ಕಾರ್ಯಚಟುವಟಿಕೆಯನ್ನು ನಿಯಮಿತವಾಗಿ ಸಮಗ್ರವಾಗಿ ಉಸ್ತುವಾರಿ ಮಾಡುತ್ತಿದೆ. ದಾನ, ಸಹಾಯ ಮತ್ತು ದೇಣಿಗೆಗಳ ರೂಪದಲ್ಲಿ ಅಂತಾರಾಷ್ಟ್ರೀಯ ಸಹಕಾರದಡಿ ಬರುತ್ತಿರುವ ವಿದೇಶೀ ಕೋವಿಡ್ ಪರಿಹಾರ ಸಾಮಗ್ರಿಗಳನ್ನು ಪಡೆದು ವಿತರಿಸುವುದಕ್ಕಾಗಿಯೇ ಕೇಂದ್ರ ಆರೋಗ್ಯ ಸಚಿವಾಲಯವು ಪ್ರತ್ಯೇಕ ಸಮನ್ವಯ ಘಟಕವನ್ನು ರೂಪಿಸಿದೆ. ಘಟಕ /ಕೋಶವು 2021 ಏಪ್ರಿಲ್ 26 ರಿಂದ ಕಾರ್ಯಾರಂಭ ಮಾಡಿದೆ. 2021 ಮೇ 2 ರಿಂದ ಆರೋಗ್ಯ ಸಚಿವಾಲಯವು ಗುಣಮಟ್ಟ ಕಾರ್ಯಾಚರಣಾ ಪ್ರಕ್ರಿಯೆಯನ್ನು ರೂಪಿಸಿ ಜಾರಿಗೆ ತಂದಿದೆ.

***



(Release ID: 1722151) Visitor Counter : 213