ರೈಲ್ವೇ ಸಚಿವಾಲಯ

ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತೀಯ ರೈಲ್ವೆ ನೀಡುತ್ತಿರುವ ಅತ್ಯಮೂಲ್ಯ ಕೊಡುಗೆಯನ್ನು ನೆನಪು ಮಾಡಿಕೊಳ್ಳಲಿದೆ ಇತಿಹಾಸ


ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ನಿರ್ವಹಿಸುವ ಜತೆಗೆ, ಪ್ರಗತಿಯ ಬಂಡಿಗಳು ವೇಗವಾಗಿ ಚಲಿಸುವುದನ್ನು ಖಾತ್ರಿಪಡಿಸಿದೆ – ಶ್ರೀ ಪಿಯುಷ್ ಗೋಯಲ್

ದಾಖಲೆಯ ಬಂಡವಾಳ ವೆಚ್ಚ (ಮೂಲಸೌಕರ್ಯ ಅಭಿವೃದ್ಧಿಗೆ ನೀಡುವ ನಿಧಿ) ವನ್ನು ಸಂಪೂರ್ಣ ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ

ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವುದರಿಂದ ವಿಶೇಷವಾಗಿ ಕೋವಿಡ್-19 ಸವಾಲಿನ ಕಾಲದಲ್ಲಿ ಅಪಾರ ಉದ್ಯೋಗಗಳ ಸೃಷ್ಟಿ – ಶ್ರೀ ಗೋಯಲ್

Posted On: 26 MAY 2021 5:39PM by PIB Bengaluru

ರೈಲ್ವೆ, ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಶ್ರೀ ಪಿಯುಷ್ ಗೋಯಲ್ ನೇತೃತ್ವದಲ್ಲಿಂದು ವಲಯ ಮತ್ತು ವಿಭಾಗೀಯ ಮಟ್ಟದ ರೈಲ್ವೆ ಮಂಡಳಿಗಳ ಅಧ್ಯಕ್ಷರು ಮತ್ತು ಸಿಇಒಗಳು, ಪ್ರಧಾನ ವ್ಯವಸ್ಥಾಪಕರು ಮತ್ತು ವಿಭಾಗೀಯ ವ್ಯವಸ್ಥಾಪಕರ ಜತೆ ನಡೆದ ಕಾರ್ಯಾಚರಣೆ ನಿರ್ವಹಣೆಯ ಪರಾಮರ್ಶೆ ಸಭೆ.

ಕೋವಿಡ್-19 ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾರತೀಯ ರೈಲ್ವೆಯು ನೀಡುತ್ತಾ ಬಂದಿರುವ ಅಮೋಘ ಕೊಡುಗೆಯನ್ನು ಇತಿಹಾಸ ನೆನಪು ಮಾಡಿಕೊಳ್ಳಲಿದೆ. ರಾಷ್ಟ್ರೀಯ ಪೂರೈಕೆ ಸರಪಳಿಯನ್ನು ಸಮರ್ಪಕವಾಗಿ ನಿರ್ವಹಿಸುವ ಜತೆಗೆ, ಅದು ಪ್ರಗತಿಯ ಬಂಡಿಗಳು ವೇಗವಾಗಿ ಚಲಿಸುವುದನ್ನು ಖಾತ್ರಿಪಡಿಸುತ್ತಾ ಬಂದಿದೆ”.

ರೈಲ್ವೆ ಸಚಿವ ಶ್ರೀ ಪಿಯುಷ್ ಗೋಯಲ್ ಅವರು ಇಂದು ವಲಯ ಮತ್ತು ವಿಭಾಗೀಯ ಮಟ್ಟದ ರೈಲ್ವೆ ಮಂಡಳಿಗಳ ಅಧ್ಯಕ್ಷರು ಮತ್ತು ಉನ್ನತಾಧಿಕಾರಿಗಳ ಜತೆ ನಡೆಸಿದ ಕಾರ್ಯಾಚರಣೆ ನಿರ್ವಹಣೆಯ ಪರಾಮರ್ಶೆ ಸಭೆಯಲ್ಲಿ ವಿಷಯ ತಿಳಿಸಿದರು.

ಕೋವಿಡ್-19 ಸಂಕಷ್ಟ ಎದುರಾದ ಕಳೆದ 14 ತಿಂಗಳಿಂದ ಭಾರತೀಯ ರೈಲ್ವೆಯು ದೇಶದ ಜನತೆಗೆ ಅತ್ಯುನ್ನತ ಮಟ್ಟದ ನೈತಿಕ ಬಲ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ ಬಂದಿದೆ.

ದಾಖಲೆಯ ಪ್ರಮಾಣದಲ್ಲಿ ಒದಗಿಸಲಾಗಿರುವ ಬಂಡವಾಳ ವೆಚ್ಚ(ಕ್ಯಾಪಿಟಲ್ ಎಕ್ಸ್|ಪೆಂಡಿಚರ್)ವನ್ನು ಮೂಲಸೌಕರ್ಯ ಅಭಿವೃದ್ಧಿಗಾಗಿ ಸಂಪೂರ್ಣ ಬಳಸಿಕೊಳ್ಳುವಂತೆ ಸಚಿವ ಪಿಯುಷ್ ಗೋಯಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮೂಲಸೌಕರ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರಿಂದ ವಿಶೇಷವಾಗಿ ಕೋವಿಡ್ ಸವಾಲಿನ ಕಾಲದಲ್ಲಿ ವಿಪುಲ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.

ದೇಶಕ್ಕಾಗಿ ಸೇವೆ ಸಲ್ಲಿಸುವಾಗ ಜೀವ ಕಳೆದುಕೊಂಡ ರೈಲ್ವೆ ಉದ್ಯೋಗಿಗಳಿಗೆ ಇಡೀ ದೇಶವೇ ಕೃತಜ್ಞತೆ ಮತ್ತು ಸಂತಾಪಗಳನ್ನು ಸೂಚಿಸುತ್ತಿದೆ ಎಂದು ಸಚಿವರು ತಿಳಿಸಿದರು.

ಭಾರತೀಯ ರೈಲ್ವೆ ಕೇವಲ ಪ್ರಯಾಣಿಕ ಮತ್ತು ಸರಕು ಸಾಗಿಸುವ ಸಾರಿಗೆ ಸಂಸ್ಥೆ ಆಗಿರದೆ, ಪ್ರಗತಿಯ ಚಾಲನಾ ಶಕ್ತಿಯಾಗಿ ಪರಿವರ್ತನೆಯಾಗುತ್ತಿದೆ. ಭಾರತೀಯ ರೈಲ್ವೆಯ ಯಶಸ್ಸಿಗೆ ದೇಶದ ಪ್ರತಿಯೊಬ್ಬರೂ ಬದ್ಧರಾಗಿ, ಅದನ್ನು ಸ್ವಯಂ ಸುಸ್ಥಿರ ಸಂಸ್ಥೆಯಾಗಿ ಬೆಳೆಸುತ್ತಿದ್ದಾರೆ ಎಂದು ಶ್ರೀ ಗೋಯಲ್ ತಿಳಿಸಿದರು.

ಆಕ್ಸಿಜನ್ ಎಕ್ಸ್|ಪ್ರೆಸ್ ರೈಲುಗಳು ಅಸಾಮಾನ್ಯ ಸ್ವರೂಪದಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿವೆ. ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತೀಯ ರೈಲ್ವೆಯು ಪರಿಸ್ಥಿತಿಯನ್ನೇ ಬದಲಿಸುವ (ಗೇಮ್ ಚೇಂಜರ್) ಪಾತ್ರ ನಿರ್ವಹಿಸಿದೆ. ರೈಲ್ವೆಯ ವೇಗದ ಸ್ಪಂದನೆ ಮತ್ತು ಗುಣಮಟ್ಟದ ಸೇವೆಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರು ಸಲ್ಲಿಸುತ್ತಿರುವ ಸೇವೆ ಸ್ಮರಣೀಯ ಎಂದು ಅವರು ನೆನಪು ಮಾಡಿಕೊಂಡರು.

ರೈಲ್ವೆಯು ತನ್ನ ಕಾರ್ಯಾಚರಣೆಯಲ್ಲಿ ಮಾನವ ಸಂಪನ್ಮೂಲ ದಕ್ಷತೆಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ನಿಟ್ಟಿನಲ್ಲಿ ಕಾರ್ಯಾಗಾರಗಳಲ್ಲಿ ಸುಧಾರಣೆ ತರಲು ಸಾಕಷ್ಟು ಅವಕಾಶಗಳಿವೆ ಎಂದರು.

ಭಾರತೀಯ ರೈಲ್ವೆಯು ಪ್ರಬಲವಾಗಿ ಹೋರಾಡಿ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮುವ ಸಂಕಲ್ಪವನ್ನು ಕೋವಿಡ್ ಸವಾಲುಗಳೇ ಸೃಷ್ಟಿಸಿವೆ. ಇದರಿಂದ ರೈಲ್ವೆ ಮನಸ್ಥಿತಿ ಸಂಪೂರ್ಣ ಪರಿವರ್ತನೆಯಾಗಿದೆ. ಹಾಗಾಗಿ, ರೈಲ್ವೆ ಪಾಲಿಗೆ ಎಂದಿನ ವ್ಯವಹಾರವಾಗಿ ಉಳಿದಿಲ್ಲ. ಅದರ ವ್ಯವಹಾರ ಮತ್ತು ಸೇವಾ ವ್ಯಾಪ್ತಿ ಸಂಪೂರ್ಣ ಪರಿವರ್ತನೆಯಾಗಿದೆ ಎಂದು ಸಚಿವರು ತಿಳಿಸಿದರು.

ರೈಲ್ವೆಯು ಅಸಾಧಾರಣ ತ್ವರಿತ ಚೇತರಿಕೆ ಸಾಮರ್ಥ್ಯ ತೋರಲು ಕಾರಣರಾದ ಅಧಿಕಾರಿ ವರ್ಗವನ್ನು ಅಭಿನಂದಿಸಿದ ಸಚಿವರು, ಭಾರತೀಯ ರೈಲ್ವೆ ಸರಕು ಸಾಗಣೆಯಲ್ಲಿ ಎರಡಂಕಿ ಬೆಳವಣಿಗೆ ಸಾಧಿಸಲು ಅವರ ಶ್ರಮವೇ ಕಾರಣ ಎಂದು ಶ್ಲಾಘಿಸಿದರು.

2019-20 ಸಾಮಾನ್ಯ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ರೈಲ್ವೆಯು ಸರಕು ಸಾಗಣೆಯಲ್ಲಿ 10%ಗಿಂತ ಹೆಚ್ಚಿನ ಆದಾಯ ದಾಖಲಿಸಿದೆ. 2021-22 ಪ್ರಸಕ್ತ ಸಾಲಿನಲ್ಲಿ ಭಾರತೀಯ ರೈಲ್ವೆ 203.88 ದಶಲಕ್ಷ ಟನ್ ಸರಕು ಸಾಗಿಸಿ, ಶೇಕಡ 10ರಷ್ಟು ಹೆಚ್ಚಿನ ಸರಕು ಸಾಗಿಸಿದೆ. ಕಳದ ವರ್ಷ 184.88 ದಶಲಕ್ಷ ಟನ್ ಸರಕು ಸಾಗಿಸಿತ್ತು.

ಸರಕು ಸಂಚಾರ ಹೆಚ್ಚಾಗಲು ಭಾರತೀಯ ರೈಲ್ವೆಯ ವ್ಯವಹಾರ ಅಭಿವೃದ್ಧಿ ಘಟಕಗಳ ಅಧಿಕಾರಿಗಳ ಶ್ರಮ ಕಾರಣ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಸರಕು ಶೆಡ್|ಗಳ ನಿರ್ಮಾಣ, ಅವುಗಳಿಗೆ ವಿದ್ಯುತ್ ಸೌಲಭ್ಯಟರ್ಮಿನಲ್|ಗಳು, ಸರಕುಗಳನ್ನು ತುಂಬಲು ಮತ್ತು ಇಳಿಸಲು ಬೇಕಾದ ಯಾಂತ್ರಿಕ ವ್ಯವಸ್ಥೆ ಇತ್ಯಾದಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಕಾರ್ಯಾಚರಣೆ ದಕ್ಷತೆ ಹೆಚ್ಚಿಸುವಂತೆ ಹಾಗೂ ಆಪರೇಟರ್|ಗಳಿಗೆ ಸುಲಭ ಕಾರ್ಯಾಚರಣೆಗೆ ವ್ಯವಸ್ಥೆ ಕಲ್ಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

***



(Release ID: 1721972) Visitor Counter : 173