ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 23 ರಿಂದ 30 ರವರೆಗಿನ ಅವಧಿಗೆ ಹೆಚ್ಚುವರಿ ರೆಮಿಡಿಸಿವಿರ್ ಮಂಜೂರು: ಶ್ರೀ ಡಿ. ವಿ. ಸದಾನಂದ ಗೌಡ
प्रविष्टि तिथि:
23 MAY 2021 7:32PM by PIB Bengaluru
ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೇ 23 ರಿಂದ ಮೇ 30 ರವರೆಗಿನ ಅವಧಿಗೆ ಹೆಚ್ಚುವರಿಯಾಗಿ 22.17 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಘೋಷಿಸಿದ್ದಾರೆ.
ಈ ಮೊದಲು 76.70 ಲಕ್ಷ ಔಷಧಿಯ ಬಾಟಲಿಗಳನ್ನು ಮೇ 23 ರವರೆಗೆ ಎಲ್ಲಾ ರಾಜ್ಯಗಳಿಗೆ ಲಭ್ಯವಾಗುವಂತೆ ಮಾಡಲಾಗಿತ್ತು. ಇದರಿಂದ ಇದುವರೆಗೆ ದೇಶಾದ್ಯಂತ ಒಟ್ಟು 98.87 ಲಕ್ಷ ರೆಮಿಡಿಸಿವಿರ್ ಬಾಟಲಿಗಳನ್ನು ಮಂಜೂರು ಮಾಡಿದಂತಾಗಿದೆ ಎಂದವರು ಹೇಳಿದ್ದಾರೆ.


***
(रिलीज़ आईडी: 1721221)
आगंतुक पटल : 232