ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಪರಿಹಾರ ನೆರವಿನ ಬಗ್ಗೆ ಪರಿಷ್ಕೃತ ಮಾಹಿತಿ
ಇದುವರೆಗೂ 16,630 ಆಕ್ಸಿಜನ್ ಕಾನ್ಸಂಟ್ರೇಟರ್ಗಳು; 15,961 ಆಮ್ಲಜನಕ ಸಿಲಿಂಡರ್ಗಳು; 19 ಆಮ್ಲಜನಕ ಉತ್ಪಾದನಾ ಘಟಕಗಳು; 11,516 ವೆಂಟಿಲೇಟರ್ಗಳು/ ಬೈಐಪಿಎಪಿಗಳು (BiPAP); ~6.9 ಲಕ್ಷ ರೆಮ್ಡೆಸಿವಿರ್ ಸೀಸೆಗಳನ್ನು ತ್ವರಿತಗತಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಲುಪಿಸಲಾಗಿದೆ/ ರವಾನಿಸಲಾಗಿದೆ
Posted On:
23 MAY 2021 1:49PM by PIB Bengaluru
ಭಾರತ ಸರಕಾರವು 2021ರ ಏಪ್ರಿಲ್ 27ರಿಂದ ವಿವಿಧ ದೇಶಗಳು/ಸಂಸ್ಥೆಗಳಿಂದ ಕೋವಿಡ್-19 ಪರಿಹಾರ ವೈದ್ಯಕೀಯ ಪೂರೈಕೆಗಳು ಮತ್ತು ಸಲಕರಣೆಗಳ ರೂಪದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಪಡೆಯುತ್ತಿದೆ. ಕೋವಿಡ್-19 ನಿರ್ವಹಣೆಯ ಪ್ರಯತ್ನಗಳನ್ನು ಬೆಂಬಲಿಸುವ ಸಲುವಾಗಿ ಇವುಗಳನ್ನು ತ್ವರಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸಲಾಗುತ್ತಿದೆ/ತಲುಪಿಸಲಾಗುತ್ತಿದೆ.
27 ಏಪ್ರಿಲ್ 2021ರಿಂದ 22 ಮೇ 2021ರವರೆಗೆ ಒಟ್ಟಾರೆಯಾಗಿ 16,630 ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು; 15,961 ಆಕ್ಸಿಜನ್ ಸಿಲಿಂಡರ್‌ಗಳು; 19 ಆಮ್ಲಜನಕ ಉತ್ಪಾದನಾ ಘಟಕಗಳು; 11,516 ವೆಂಟಿಲೇಟರ್‌ಗಳು/ ʻಬೈಪಿಎಪಿʼಗಳು; 6.9 ಲಕ್ಷ ರೆಮ್ಡೆಸಿವಿರ್ ಸೀಸೆಗಳನ್ನು ರಸ್ತೆ ಮತ್ತು ವಾಯು ಮಾರ್ಗದ ಮೂಲಕ ಮೂಲಕ ತಲುಪಿಸಲಾಗಿದೆ/ ರವಾನಿಸಲಾಗಿದೆ.
ಸ್ಕಾಟ್ಲೆಂಡ್ (ಯುಕೆ), ಗಿಲ್ಯಾಡ್, ಯುಎಸ್ಐಎಸ್ಪಿಎಫ್, ಕೆಒಐಸಿಎ (ದಕ್ಷಿಣ ಕೊರಿಯಾ), ಬೌದ್ಧ ಸಂಘ (ವಿಯೆಟ್ನಾಂ) ನಿಂದ 2021ರ ಮೇ 21/22 ರಂದು ಸ್ವೀಕರಿಸಿದ ಪ್ರಮುಖ ಸರಕುಗಳು
ಸರಕುಗಳು
|
ಪ್ರಮಾಣ
|
ಆಕ್ಸಿಜನ್ ಕಾನ್ಸಂಟ್ರೇಟರ್‌ಗಳು
|
100
|
ವೆಂಟಿಲೇಟರ್‌ಗಳು/ಬೈ-ಪಿಎಪಿ/ಸಿಪಿಎಪಿ
|
100
|
ರೆಮ್‌ಡೆಸಿವಿರ್
|
29,296
|
*ಹೆಚ್ಚುವರಿಯಾಗಿ, ನೆಗೆಟಿವ್ ಪ್ರೆಷರ್ ಕ್ಯಾರಿಯರ್‌ಗಳು ಮತ್ತು ವೈರಲ್ ಟ್ಯೂಬ್ ಮೀಡಿಯಾ ಸ್ವೀಕರಿಸಲಾಗಿದೆ.
ಸಂಬಂಧಪಟ್ಟ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಿಗೆ ಪರಿಣಾಮಕಾರಿ, ತ್ವರುತ ಹಂಚಿಕೆ ಹಾಗೂ ಸುವ್ಯವಸ್ಥಿತ ವಿತರಣೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ನಿಯಮಿತವಾಗಿ ಇದರ ಸಮಗ್ರ ಮೇಲ್ವಿಚಾರಣೆ ಮಾಡುತ್ತಿದೆ. ಅಂತಾರಾಷ್ಟ್ರೀಯ ಸಹಕಾರದ ಭಾಗವಾಗಿ ಅನುದಾನ, ನೆರವು ಮತ್ತು ದೇಣಿಗೆಗಳ ರೂಪದಲ್ಲಿ ಬರುವ ವಿದೇಶಿ ಕೋವಿಡ್ ಪರಿಹಾರ ಸಾಮಗ್ರಿಯನ್ನು ಸ್ವೀಕರಿಸಲು ಮತ್ತು ಹಂಚಿಕೆ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ವಿಶೇಷ ಸಮನ್ವಯ ಘಟಕವನ್ನು ರಚಿಸಲಾಗಿದೆ. ಈ ಘಟಕವು 26 ಏಪ್ರಿಲ್ 2021ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಆರೋಗ್ಯ ಸಚಿವಾಲಯವು 2 ಮೇ 2021ರಿಂದ ಪ್ರಮಾಣಿತ ಕಾರ್ಯವಿಧಾನವನ್ನು (ಎಸ್‌ಒಪಿ) ರೂಪಿಸಿ, ಜಾರಿಗೆ ತಂದಿದೆ.
*****
(Release ID: 1721131)
Visitor Counter : 216