ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಆಮ್ಲಜನಕ ಸಾಂದ್ರಕಗಳ ಆವಿಷ್ಕಾರ ಮತ್ತು ನಿರ್ಣಾಯಕ ಬಿಡಿ ಭಾಗಗಳ ಕುರಿತ ಸಂಶೋಧನಾ ಮತ್ತು ಅಭಿವೃದ್ಧಿ ಪ್ರಸ್ತಾವಗಳನ್ನು ಆಹ್ವಾನಿಸಿದ ಕೇಂದ್ರ ಸರ್ಕಾರ

Posted On: 22 MAY 2021 4:19PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಆರೋಗ್ಯ ರಕ್ಷಣಾ ಅಗತ್ಯತೆಗಳನ್ನು ಪೂರೈಸುವ ಸಲುವಾಗಿ ಮೇಕ್ ಇನ್ ಇಂಡಿಯಾ ಆಮ್ಲಜನಕ ಸಾಂದ್ರಕಗಳ ಉತ್ಪಾದನೆಗೆ ಸಂಬಂಧಿಸಿದಂತೆ ಆವಿಷ್ಕಾರ ಮತ್ತು ನಿರ್ಣಾಯಕ ಬಿಡಿ ಭಾಗಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಹೊಸ ಉಪಕ್ರಮದಿಂದಾಗಿ ಶೀಘ್ರವೇ ಸಂಶೋಧನೆ ಮತ್ತು ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ.  

          ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಅತ್ಯವಶ್ಯಕ ಔಷಧಿಗಳ ಪಟ್ಟಿಯಲ್ಲಿದ್ದರೂ ಸಹ ವಿಶೇಷವಾಗಿ ವೈದ್ಯಕೀಯ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಆಮ್ಲಜನಕ ಅತ್ಯಮೂಲ್ಯ ವಸ್ತುವಾಗಿಯೇ ಉಳಿದಿದೆ.  

          ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು/ಪ್ರಯೋಗಾಲಯಗಳು, ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಸಂಸ್ಥೆಗಳು, ನವೋದ್ಯಮಗಳು ಮತ್ತು ಕೈಗಾರಿಕೆಗಳ ವಿಜ್ಞಾನಿಗಳಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಾಂವಿಧಾನಿಕ ಸಂಸ್ಥೆ ವಿಜ್ಞಾನ ಹಾಗೂ ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್ಇಆರ್ ಬಿ)ಯು  ಆಕ್ಸಿಜನ್ ಸಾಂದ್ರಕಗಳ ಅಭಿವೃದ್ಧಿ (ವೈಯಕ್ತಿಕ/ಪೋರ್ಟಬಲ್)ಯ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತಂತೆ ಪ್ರಸ್ತಾವಗಳನ್ನು ಆಹ್ವಾನಿಸಿದೆ. ಇದರಲ್ಲಿ ಆಮ್ಲಜನಕ ಪ್ರತ್ಯೇಕಿಸುವ ಕಾರ್ಯತಂತ್ರ ಮತ್ತು ಪರ್ಯಾಯ ವಸ್ತುಗಳ ವಿಭಾಗಗಳು ಸಹ ಇರಲಿವೆ, ನಿರ್ಣಾಯಕ ಉತ್ಪನ್ನಗಳ ಉತ್ಪಾದನೆ ಅಭಿವೃದ್ಧಿ ಸೇರಿದ್ದು, ಅಂದರೆ ವಾಲ್ವ್ ಗಳು ಮತ್ತು ಆಯಿಲ್ ಲೆಸ್ ಕಂಪ್ರಸ್ಸರ್ ಗಳು, ನಿರ್ಣಾಯಕ ಘಟಕಗಳ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನೆ, ಹೆಚ್ಚಿನ ಕಾರ್ಯಕ್ಷಮತೆಗಾಗಿ ವಿನ್ಯಾಸ ಸುಧಾರಣೆಗಳು,  ಎಐ(ಕೃತಕ ಬುದ್ಧಿಮತ್ತೆ) ಹೊಂದಿದ ಆಮ್ಲಜನಕ ಹರಿವಿನ ಸಾಧನಗಳು ಮತ್ತು ಆಕ್ಸಿಜನ್ ಮಟ್ಟದ ಐಒಟಿ ಸೆನ್ಸಾರ್ ಗಳು ಮತ್ತು ಇತರ ಉತ್ಪನ್ನಗಳು ವಿಭಾಗಗಳೂ ಸಹ ಸೇರಿವೆ.

          ಕೈಗಾರಿಕೆಗಳ ವಿಜ್ಞಾನಿಗಳು ಶೈಕ್ಷಣಿಕ/ಸಂಶೋಧನಾ ಸಂಸ್ಥೆಗಳ ಸಂಶೋಧಕರ ಜೊತೆ ಸೇರಿ ಅವರನ್ನು ಸಹ ಸಂಶೋಧಕರನ್ನಾಗಿ ಪರಿಗಣಿಸಬೇಕಿದೆ. ಸಂಶೋಧನೆ ಮತ್ತು ಅಭಿವೃದ್ಧಿಯ ವಾಣಿಜ್ಯೀಕರಣಕ್ಕೆ ಸಂಬಂಧಿಸಿದಂತೆ ಕೈಗಾರಿಕೆಗಳ ಪಾಲುದಾರರಿಗೆ ಡಿಎಸ್ ಟಿಯ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಪರಿಗಣಿಸಲು ಶಿಫಾರಸ್ಸು ಮಾಡಲಿದೆ. ಈ ಯೋಜನೆಯ ಅವಧಿ ಒಂದು ವರ್ಷವಾಗಿದೆ.  

          ಇದರಿಂದಾಗಿ ದೇಶೀಯ ಸಾಂದ್ರಕಗಳ ಅಗತ್ಯತೆ ಈಡೇರುವುದಲ್ಲದೆ, ಆಸ್ಪತ್ರೆ ವಾರ್ಡ್ ಗಳಿಗೆ ಮತ್ತು ಐಸಿಯುಗಳಿಗೆ ಪೂರಕ ಆಕ್ಸಿಜನ್ ಒದಗಿಸಲು ಹೊಸ ವಿಧಾನ ಸಿದ್ಧವಾಗುತ್ತದೆ ಹಾಗೂ ಹೋಮ್ ಐಸೋಲೇಷನ್ ನಲ್ಲಿರುವ ರೋಗಿಗಳ ಚಿಕಿತ್ಸೆಗೆ ಅಗ್ಗದ ದರದಲ್ಲಿ ಆಕ್ಸಿಜನ್ ಲಭ್ಯವಾಗುತ್ತದೆ.

ಎಸ್ಇಆರ್ ಬಿ ಆನ್ ಲೈನ್ ಪೋರ್ಟಲ್ http://www.serbonline.in/ ಮೂಲಕ ನಿಗದಿತ ನಮೂನೆಯಲ್ಲಿ ಪ್ರಸ್ತಾವಗಳನ್ನು 2021ರ ಜೂನ್ 15ರಂದು ಅಥವಾ ಅದಕ್ಕೂ ಮುನ್ನ  ಸಲ್ಲಿಸಬಹುದಾಗಿದೆ.

****

 (Release ID: 1720984) Visitor Counter : 179