ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

2021ನೇ ಸಾಲಿನ ಕ್ರೀಡಾ ಪ್ರಶಸ್ತಿಗಳಿಗೆ ನಾಮನಿರ್ದೇಶನ/ಅರ್ಜಿಗಳನ್ನು ಆಹ್ವಾನಿಸಿದ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ

Posted On: 20 MAY 2021 5:38PM by PIB Bengaluru

ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮತ್ತು ಶ್ರೇಷ್ಠತೆಯನ್ನು ಗುರುತಿಸಲು ಪ್ರತಿ ವರ್ಷ ಕ್ರೀಡಾ ಪ್ರಶಸ್ತಿಗಳನ್ನು ನೀಡಲಾಗುವುದು. ನಾಲ್ಕು ವರ್ಷದ ಅವಧಿಯಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಅದ್ಭುತ ಮತ್ತು ಅತ್ಯತ್ತಮ ಸಾಧನೆಯನ್ನು ಮಾಡಿದ ಕ್ರೀಡಾಪಟುವಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗುವುದು; ನಾಲ್ಕು ವರ್ಷಗಳ ಕಾಲ ಸತತವಾಗಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಲಾಗುವುದು; ಪ್ರತಿಷ್ಠಿತ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಪದಕ ವಿಜೇತರನ್ನು ರೂಪಿಸುವ ತರಬೇತುದಾರರಿಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗುವುದು ಹಾಗೂ ಧ್ಯಾನ್ ಚಂದ್ ಪ್ರಶಸ್ತಿಯನ್ನು ಕ್ರೀಡಾ ಅಭಿವೃದ್ಧಿಗೆ, ಜೀವನಮಾನದ ಕೊಡುಗೆ ನೀಡಿದ ಕ್ರೀಡಾಪಟುವಿಗೆ ನೀಡಲಾಗುವುದು. ಕ್ರೀಡಾ ಉತ್ತೇಜನ ಮತ್ತು ಅಭಿವೃದ್ಧಿ ವಲಯದಲ್ಲಿ ಗಮನಾರ್ಹ ಪಾತ್ರ ನಿರ್ವಹಿಸಿದ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ರಾಷ್ಟ್ರೀಯ ಖೇಲ್ ಪ್ರೊ ಪ್ರೊತ್ಸಾಹನ್ ಪುರಸ್ಕಾರವನ್ನು ನೀಡಲಾಗುವುದು. ಅಂತರ ವಿಶ್ವವಿದ್ಯಾಲಯ ಟೂರ್ನಿಗಳಲ್ಲಿ ಒಟ್ಟಾರೆ ಅಗ್ರ ಸಾಧನೆ ಮಾಡಿದ ವಿಶ್ವವಿದ್ಯಾಲಯಕ್ಕೆ ಮೌಲಾನಾ ಅಬ್ದುಲ್ ಕಲಾಂ ಆಜಾದ್(ಎಂಎಕೆಎ) ಟ್ರೋಫಿಯನ್ನು ನೀಡಲಾಗುವುದು.

ಸಚಿವಾಲಯ ಕ್ರೀಡಾ ಪ್ರಶಸ್ತಿಗಳಿಗಾಗಿ ಪ್ರತಿ ವರ್ಷ ನಾಮನಿರ್ದೇಶನ/ಅರ್ಜಿಗಳನ್ನು ಆಹ್ವಾನಿಸಲಿದೆ. 2021ನೇ ಸಾಲಿನ ಕ್ರೀಡಾ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುವ ಅಧಿಸೂಚನೆಯನ್ನು ಸಚಿವಾಲಯ ತನ್ನ ವೆಬ್ ಸೈಟ್(www.yas.nic.in) ನಲ್ಲಿ ಅಪ್ ಲೋಡ್ ಮಾಡಿದೆ. ಅಲ್ಲದೆ, ಕುರಿತ ಮಾಹಿತಿಯನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್/ಭಾರತೀಯ ಕ್ರೀಡಾ ಪ್ರಾಧಿಕಾರ/ಮಾನ್ಯತೆ ಪಡೆದ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು/ಕ್ರೀಡಾ ಉತ್ತೇಜನಾ ಮಂಡಳಿಗಳು/ರಾಜ್ಯ ಮತ್ತು ಕೇಂದ್ರಾಡಳಿತ ಸರ್ಕಾರಗಳೊಂದಿಗೆ ಹಂಚಿಕೊಂಡಿದೆ.

ಅರ್ಹ ಕ್ರೀಡಾ ವ್ಯಕ್ತಿಗಳು/ ತರಬೇತುದಾರರು/ ಸಂಸ್ಥೆಗಳು/ ವಿಶ್ವವಿದ್ಯಾಲಯಗಳಿಂದ ನಾಮನಿರ್ದೇಶನ/ಅರ್ಜಿಗಳನ್ನು ಆಹ್ವಾನಿಸಲಾಗಿದೆ ಮತ್ತು ಅವುಗಳನ್ನು -ಮೇಲ್ ವಿಳಾಸಗಳಿಗೆ ಮೇಲ್ surendra.yadav[at]nic[dot]in ಅಥವಾ girnish.kumar[at]nic[dot]in ಮಾಡಬಹುದಾಗಿದೆ. ಅರ್ಜಿಗಳನ್ನು ಸ್ವೀಕರಿಸಲು 2021 ಜೂನ್ 21(ಸೋಮವಾರ) ಸಂಜೆ 5 ಗಂಟೆಯ ವರೆಗೆ ಕೊನೆಯ ಅವಕಾಶವಿದೆ. ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

***



(Release ID: 1720449) Visitor Counter : 206