ಇಂಧನ ಸಚಿವಾಲಯ

ಪವರ್‌ಗ್ರಿಡ್‌ನಿಂದ ಲಸಿಕೆ ಅಭಿಯಾನ

Posted On: 20 MAY 2021 10:32AM by PIB Bengaluru

ಕೇಂದ್ರ ಇಂಧನ ಸಚಿವಾಲಯದ ಅಡಿಯ, ಮಹಾರತ್ನ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಒಂದಾದ ʻಭಾರತೀಯ ಪವರ್ಗ್ರಿಡ್ ಕಾರ್ಪೊರೇಷನ್ʼ ತನ್ನ ಕೋಟಾಭಿವಾಡಿ, ಮಿಸಾ, ನಮ್ಸಾಯಿ, ರೂರ್ಕೆಲಾ, ಅರಾ, ಬಿಹಾರ್ ಶರೀಫ್, ಸಹರ್ಸಾ ಮತ್ತು ಮುಜಾಫರ್ಪುರ್ ಮುಂತಾದ ದೇಶದ ಅನೇಕ ಸ್ಥಗಳಲ್ಲಿರುವ ತನ್ನ ಘಟಕಗಳಲ್ಲಿ ಸಂಸ್ಥೆಯ ಉದ್ಯೋಗಿಗಳಿಗೆ ಲಸಿಕಾ ಶಿಬಿರಗಳನ್ನು ಆಯೋಜಿಸಿದೆ. ಎಲ್ಲಾ ಲಸಿಕಾ ಶಿಬಿರಗಳ ವೆಚ್ಚವನ್ನು ಪವರ್ಗ್ರಿಡ್ ಸಂಸ್ಥೆಯೇ ಭರಿಸಿದೆ.

ವಿವಿಧ ಸ್ಥಳಗಳಲ್ಲಿ ಆಯೋಜಿಸಲಾದ ಶಿಬಿರಗಳ ಭಾಗವಾಗಿ, ಗುರುಗ್ರಾಮದ ಸೆಕ್ಟರ್ 43ರಲ್ಲಿರುವ ಸಂಸ್ಥೆಯ ವಿವಿಧೋದ್ದೇಶ ಸಭಾಂಗಣದಲ್ಲಿ(ಎಂಪಿ ಹಾಲ್) ಮ್ಯಾಕ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ ಮೇ 10ರಿಂದ ಮೇ  17, 2021ರವರೆಗೆ ನಡೆಸಲಾದ ಶಿಬಿರದಲ್ಲಿ 1600 ಜನರು ಲಸಿಕೆ ಪಡೆದರು. ಇವರಲ್ಲಿ ಸಂಸ್ಥೆಯ ಉದ್ಯೋಗಿಗಳು, ಗುತ್ತಿಗೆ ನೌಕರರು ಮತ್ತು ನಿವೃತ್ತ ನೌಕರರು ಹಾಗೂ ಅವರ ಕುಟುಂಬ ಸದಸ್ಯರೂ ಸೇರಿದ್ದಾರೆ.    ಮಾರ್ಚ್ 31ರಿಂದ ಮೇ 6, 2021ರವರೆಗೆ ಗುರುಗ್ರಾಮದ ತನ್ನ ಎಂಪಿ ಹಾಲ್ನಲ್ಲಿ ಮ್ಯಾಕ್ಸ್ ಆಸ್ಪತ್ರೆಗಳು, ಫೋರ್ಟಿಸ್ ಮತ್ತು ಆರ್ಟೆಮಿಸ್ ಸಹಯೋಗದೊಂದಿಗೆ ಮತ್ತೊಂದು ಲಸಿಕಾ ಶಿಬಿರವನ್ನೂ ಪವರ್ಗ್ರಿಡ್ ಆಯೋಜಿಸಿತ್ತು.

ಅಪೊಲೊ ಆಸ್ಪತ್ರೆಗಳ ಸಹಯೋಗದೊಂದಿಗೆ ದೆಹಲಿಯ ಕತ್ವಾರಿಯಾ ಸರಾಯ್ ಕಚೇರಿಯಲ್ಲೂ  ಪವರ್ಗ್ರಿಡ್ ಲಸಿಕಾ ಶಿಬಿರವನ್ನು ಆಯೋಜಿಸಿತ್ತು, ಅಲ್ಲಿ 290ಕ್ಕೂ ಹೆಚ್ಚು ಜನರು ಲಸಿಕೆಯನ್ನು ಪಡೆದುಕೊಂಡರು. ಇದರಲ್ಲಿ ಇಂಧನ ಸಚಿವಾಲಯದ ಮತ್ತು ಇಂಧನ ಪಿಎಸ್ಯುಗಳ 80ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಅವರ ಕುಟುಂಬಗಳು ಸೇರಿವೆ.

ಎನ್ಸಿಆರ್ ಪ್ರದೇಶದಲ್ಲಿ ಪವರ್ಗ್ರಿಡ್ ಆಯೋಜಿಸಿದ್ದ ಮೂರು ಶಿಬಿರಗಳಲ್ಲಿ ಒಟ್ಟು 2600ಕ್ಕೂ ಹೆಚ್ಚು ಜನರಿಗೆ ಲಸಿಕೆ ಹಾಕಲಾಗಿದೆ.

18-44 ವರ್ಷ ವಯಸ್ಸಿನವರಿಗೆ ಮತ್ತು 45 ವರ್ಷ ಮೀರಿದ ವಯೋಮಾನದವರಿಗೆ ಶಿಬಿರಗಳನ್ನು ಆಯೋಜಿಸಲಾಗಿತ್ತು.

ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವನ್ನು ಪೂರ್ಣಗೊಳಿಸುವ ಭಾರತ ಸರಕಾರದ ಮಹತ್ವಾಕಾಂಕ್ಷೆಗೆ ಪವರ್ಗ್ರಿಡ್ ಬೆಂಬಲವಾಗಿ ಕೈಜೋಡಿಸಿದೆ.

***


(Release ID: 1720199) Visitor Counter : 173