ನೀತಿ ಆಯೋಗ
ಉತ್ತಮ ಯಶಸ್ಸಿನೊಂದಿಗೆ ಮುಕ್ತಾಯಗೊಂಡ ಎಐಎಂ-ಐಸಿಡಿಕೆ ಜಲ ನಾವೀನ್ಯತೆ ಸವಾಲು
Posted On:
19 MAY 2021 12:05PM by PIB Bengaluru
ನವದೆಹಲಿ: ಇಂಡೋ-ಡ್ಯಾನಿಶ್ ದ್ವಿಪಕ್ಷೀಯ ಹಸಿರು ಕಾರ್ಯತಂತ್ರ ಸಹಭಾಗಿತ್ವದ ಭಾಗವಾಗಿ, ಅಟಲ್ ನಾವಿನ್ಯತೆ ಅಭಿಯಾನ (ಎಐಎಂ), ನೀತಿ ಆಯೋಗ, ಡೆನ್ಮಾರ್ಕ್ ನಾವಿನ್ಯತೆ ಕೇಂದ್ರ, (ಐಸಿಡಿಕೆ) ಸಹಭಾಗಿತ್ವದಲ್ಲಿ - ಡೆನ್ಮಾರ್ಕ್ ರಾಯಭಾರ ಕಚೇರಿ ಮತ್ತು ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯ (ಡಿಟಿಯು)ದ ಘಟಕದ ಸಹಯೋಗದಲ್ಲಿ ಮುಂದಿನ ಪೀಳಿಗೆಯ ಜಲ ಕ್ರಮ (ಎನ್.ಜಿ.ಡಬ್ಲ್ಯೂ.ಎ) ಜಲ ನಾವಿನ್ಯತೆ ಸವಾಲಿನ ಜಾಗತಿಕ ಅಂತಿಮ ಹಣಾಹಣಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಅಂತಾರಾಷ್ಟ್ರೀಯ ಜಲ ಸಂಸ್ಥೆ ಮತ್ತು ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯ ಆಯೋಜಿಸಿರುವ ಮುಂದಿನ ಪೀಳಿಗೆಯ ಜಾಗತಿಕ ಜಲ ಕ್ರಮ ಕಾರ್ಯಕ್ರಮದಲ್ಲಿ ಭಾರತದ ಪ್ರತಿನಿಧಿತ್ವ ರೂಪಿಸುವ ಮತ್ತು ಭಾರತವನ್ನು ಪ್ರತಿನಿಧಿಸುವಂತಹ ಭಾರತದ ಭರವಸೆಯ ನಾವಿನ್ಯದಾರರನ್ನು ಗುರುತಿಸಲು ಎಐ-ಎಂಐಸಿಡಿಕೆ ಜಲ ನಾವಿನ್ಯತೆ ಸವಾಲನ್ನು ಏರ್ಪಡಿಸಲಾಗಿತ್ತು. ಈ ಸವಾಲು 400+ ಅರ್ಜಿದಾರರಿಂದ ನಾವೀನ್ಯತೆಯ ಸಲ್ಲಿಕೆಗೆ ಸಾಕ್ಷಿಯಾಗಿತ್ತು ಮತ್ತು ಅಂತಿಮವಾಗಿ ದೇಶಾದ್ಯಂತ 6 ವಿದ್ಯಾರ್ಥಿ ತಂಡಗಳು ಮತ್ತು 4 ನವೋದ್ಯಮ ತಂಡಗಳು ಸೇರಿದಂತೆ ಒಟ್ಟು 10 ಭಾರತೀಯ ತಂಡಗಳನ್ನು ಗುರುತಿಸಲಾಯಿತು.
ಆಯ್ಕೆಯಾದ ತಂಡಗಳು, ಪ್ರಮುಖ ವಿಶ್ವವಿದ್ಯಾಲಯಗಳ ಯುವ ಪ್ರತಿಭೆಗಳು ಮತ್ತು 5 ದೇಶಗಳ (ಭಾರತ, ಡೆನ್ಮಾರ್ಕ್, ಕೀನ್ಯಾ, ಘಾನಾ ಮತ್ತು ದಕ್ಷಿಣ ಕೊರಿಯಾ) ಯುವ ಪ್ರತಿಭೆಗಳನ್ನು ಸ್ಮಾರ್ಟ್ ವಾಸಯೋಗ್ಯ ನಗರಗಳಿಗೆ ಜಲ ಪರಿಹಾರ ಒದಗಿಸುವ ಮತ್ತು ವೇಗವರ್ಧಿಸುವ ನಿಟ್ಟಿನಲ್ಲಿ ಅವರ ಕೌಶಲವರ್ಧನೆಗಾಗಿ ಮತ್ತು ಅವರ ತಾಂತ್ರಿಕ ಶಿಸ್ತು, ನಾವಿನ್ಯತೆಯ ಸಾಮರ್ಥ್ಯ ಮತ್ತು ಪರಿಹಾರಕ್ಕಾಗಿ ತೊಡಗಿಸಿಕೊಳ್ಳಲು ಡಿಟಿಯು ರೂಪಿಸಿರುವ ಉಪಕ್ರಮ- 'ಮುಂದಿನ ಪೀಳಿಗೆಯ ಜಲ ಕ್ರಮ' ದಲ್ಲಿ ಭಾರತದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಲಿವೆ.
ಭಾರತದ ಸವಾಲಿನ ಭಾಗವಾಗಿ, ವಿದ್ಯಾರ್ಥಿಗಳು ಮತ್ತು ನಾವಿನ್ಯತೆ ತಂಡಗಳಿಗೆ ತಮ್ಮ ಕಲ್ಪನೆಯನ್ನು ಈ ಕೆಳಕಂಡ ಕ್ಷೇತ್ರಗಳ ಸವಾಲಿನಲ್ಲಿ ಮಂಡಿಸಲು ಆಹ್ವಾನಿಸಲಾಗಿತ್ತು: ಡಿಜಿಟಲ್ ಜಲ ನಿರ್ವಹಣಾ ಪರಿಹಾರಗಳು, ನಗರ ನೀರು ಸರಬರಾಜಿನಲ್ಲಿನ ಸೋರಿಕೆಯ ಮೇಲ್ವಿಚಾರಣೆ ಮತ್ತು ತಡೆಗಟ್ಟಲು ಪರಿಹಾರಕ್ರಮಗಳು, ಗ್ರಾಮೀಣ ಪ್ರದೇಶಗಳು ಮತ್ತು ನಗರ ವಸಾಹತುಗಳಲ್ಲಿ ತ್ಯಾಜ್ಯ ಜಲ ನಿರ್ವಹಣೆ, ಗ್ರಾಮೀಣ ಮತ್ತು ನಗರ ವಸತಿಗಳಲ್ಲಿ ಮಳೆನೀರು ಕೊಯ್ಲು, ಮತ್ತು ಸುರಕ್ಷಿತ ಮತ್ತು ಸುಸ್ಥಿರ ಕುಡಿಯುವ ನೀರು.
ಭಾರತವು ಸವಾಲಿನಲ್ಲಿ ಭಾಗವಹಿಸಲು ತಂಡ ಕಳುಹಿಸುವುದರ ಜೊತೆಗೆ ಆತಿಥ್ಯ ಪಾಲುದಾರಿಗೆ ಸವಾಲೂ ಹಾಕಲಿದೆ. ಎಐಎಂ ಭಾರತಕ್ಕೆ ಸವಾಲು- ಆತಿಥ್ಯವಾಗಿದ್ದರೆ, ಘಾನಾಗೆ ಘಾನಾ ಜಲ ಕಂಪನಿ, ಬ್ರೆಜಿಲ್ ಗೆ ರಾಂಬೋಲ್ ಪ್ರತಿಷ್ಠಾನ, ಡೆನ್ಮಾರ್ಕ್ ಗೆ ಗ್ರಂಡ್ಫೋಸ್ ಪ್ರತಿಷ್ಠಾನ ಮತ್ತು ದಕ್ಷಿಣ ಕೊರಿಯಾಗೆ ಡೇಗು ಮೆಟ್ರೋಪಾಲಿಟನ್ ಆಗಿವೆ. ಭಾಗವಹಿಸುವ ರಾಷ್ಟ್ರಗಳಾದ್ಯಂತ ಆಯ್ದ ತಂಡಗಳು ಪ್ರತಿಯೊಂದು ಸವಾಲಿನ ಪಾಲುದಾರರೊಂದಿಗೆ ಕಾರ್ಯ ನಿರ್ವಹಿಸಲಿವೆ.
ಭಾರತವು ಸವಾಲಿನ ಪಾಲುದಾರನಾಗಿ, ಮೂರು ಭಾರತೀಯ ವಿದ್ಯಾರ್ಥಿ ತಂಡಗಳನ್ನು ಮತ್ತು ಡೆನ್ಮಾರ್ಕ್ ಮತ್ತು ದಕ್ಷಿಣ ಕೊರಿಯಾದ ತಲಾ ಒಂದು ತಂಡದ ಆತಿಥ್ಯ ವಹಿಸಿದೆ, ಈ ತಂಡಗಳು ಭಾರತದ ನಿರ್ದಿಷ್ಟ ಸವಾಲುಗಳನ್ನು ಪರಿಹರಿಸುವಲ್ಲಿ ಕೆಲಸ ಮಾಡಿವೆ; ಹೆಚ್ಚುವರಿಯಾಗಿ, ಘಾನಾ, ಡೆನ್ಮಾರ್ಕ್ ಮತ್ತು ಬ್ರೆಜಿಲ್ ನಿರ್ದಿಷ್ಟ ಸವಾಲುಗಳಲ್ಲಿ ಒಂದು ಭಾರತೀಯ ತಂಡ ಭಾಗವಹಿಸಿತ್ತು.
ಜಾಗತಿಕ ಕಾರ್ಯಕ್ರಮದಲ್ಲಿ ಭಾರತದ 4, ಡೆನ್ಮಾರ್ಕ್ ನ 3, ಕೀನ್ಯಾದ 2 ಮತ್ತು ಘಾನಾದ 2 ತಂಡಗಳು ಸೇರಿ 11 ನವೋದ್ಯಮ ತಂಡಗಳು ಭಾಗವಹಿಸಿದ್ದವು. ನವೋದ್ಯಮ ತಂಡಗಳು ಮುಂದಿನ ಪೀಳಿಗೆಯ ಜಲ ಕ್ರಮ ಅಂತಿಮ ಸುತ್ತಿನಲ್ಲಿ ನಾವಿನ್ಯತೆ ಪ್ರಶಸ್ತಿಗಳಿಗಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿದವು. ಭಾರತದ ನಾಲ್ಕು ನವೋದ್ಯಮ ತಂಡಗಳಲ್ಲಿ ಅಗ್ರೊಮಾರ್ಫ್, ಡಿಜಿಟಲ್ ಇಕೋ-ಇನ್ನೋವಿಷನ್, ಟ್ರಾನ್ ಕಾರ್ಟ್ ಸೊಲ್ಯೂಷನ್ಸ್ ಮತ್ತು ಮೆಸೆಂಟ್ರೊ ಸೇರಿದ್ದವು.
ಎಐಎಂ ಜೊತೆಗೆ ಶೈಕ್ಷಣಿಕ ಪಾಲುದಾರನಾಗಿರುವ - ಐಐಟಿ ದೆಹಲಿ, ಐಐಟಿ ಬಾಂಬೆ ಮತ್ತು ಐಐಟಿ ಮದ್ರಾಸ್ ನಲ್ಲಿರುವ ಶುದ್ಧ ಜಲ ಕುರಿತ ಅಂತಾರಾಷ್ಟ್ರೀಯ ಕೇಂದ್ರ ಮತ್ತು ಇಂಕ್ಯುಬೇಟರ್ ಪಾಲುದಾರರು - ಎಐಸಿ- ಸಂಗಮ್ ಮತ್ತು ಎಐಸಿ ಎಫ್.ಐ.ಎಸ್.ಇ ತಂಡಗಳಿಗೆ ಮಾರ್ಗದರ್ಶನ ನೀಡಲಿವೆ. ಭಾರತದ ಸಮಸ್ಯೆಗಳ ಕುರಿತು ಕೆಲಸ ಮಾಡುವ ತಂಡಗಳಿಗೆ ಎಚ್ಚರಿಕೆಯಿಂದ ಪಡೆದ ಆನ್ ಲೈನ್ ವಸ್ತುವಿಷಯ ಮತ್ತು ಪ್ರಖ್ಯಾತ ನೀರಿನ ತಜ್ಞರ ಸಮಿತಿಯ ಮಾರ್ಗದರ್ಶನ ಬೆಂಬಲ ಒದಗಿಸಲಾಗುತ್ತದೆ. ವರ್ಚುವಲ್ ಜ್ಞಾನ, ಮಾರ್ಗದರ್ಶನ ಮತ್ತು ನೆಟ್ ವರ್ಕಿಂಗ್ ಅಧಿವೇಶನಗಳ ರೂಪದಲ್ಲಿ ಮುಂದಿನ ಪೀಳಿಗೆಯ ಜಲ ಕ್ರಮ ತಂಡಗಳು ಹೆಚ್ಚುವರಿ ಬೆಂಬಲವನ್ನು ಒದಗಿಸುತ್ತವೆ.
ಫೆಬ್ರವರಿ-ಏಪ್ರಿಲ್ 2021ರಿಂದ ಮೂರು ತಿಂಗಳ ಸುದೀರ್ಘ ಬೆಳವಣಿಗೆಯ ಹಂತದ ನಂತರ ತಂಡಗಳು ತಮ್ಮ ಅಂತಿಮ ನಾವೀನ್ಯತೆಯನ್ನು 2021 ಏಪ್ರಿಲ್ 30 ರಂದು ಸಲ್ಲಿಸಿದವು. ನಂತರ ತಂಡಗಳು 2021 ಮೇ 12 ರಂದು ತಮ್ಮ ತಮ್ಮ ಸವಾಲಿನ ಆತಿಥ್ಯ ರಾಷ್ಟ್ರಗಳೊಂದಿಗೆ ಜಾಗತಿಕ ಉಪಾಂತ್ಯದಲ್ಲಿ ಭಾಗವಹಿಸಿದ್ದವು. ಉಪಾಂತ್ಯದಲ್ಲಿ ಪ್ರಸ್ತುತಪಡಿಸಿದ 6 ಭಾರತೀಯ ವಿದ್ಯಾರ್ಥಿ ತಂಡಗಳಲ್ಲಿ 4 ತಂಡಗಳನ್ನು ಪರಿಹಾರ ಪ್ರಸ್ತುತಪಡಿಸಲು ಫೈನಲ್ಗೆ ಆಯ್ಕೆ ಮಾಡಲು ಕಿರುಪಟ್ಟಿ ಮಾಡಲಾಗಿದ್ದರೆ, ನವೋದ್ಯಮ ತಂಡಗಳು ಡಿಟಿಯು 2021ರ ಮೇ 18ರಂದು ಆಯೋಜಿಸಿದ್ದ ಜಾಗತಿಕ ಫೈನಲ್ಸ್ ಗೆ ನೇರವಾಗಿ ಬಂದಿದ್ದವು.
ಫೈನಲ್ ಸ್ಪರ್ಧೆ ಭೌತಿಕವಾಗಿ ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 5 ಪಾಲ್ಗೊಳ್ಳುವ ರಾಷ್ಟ್ರಗಳ ಸ್ಥಳೀಯ ತಾಣಗಳಿಂದ ವರ್ಚುವಲ್ ಪಾಲ್ಗೊಳ್ಳುವಿಕೆಯೊಂದಿಗೆ ನಡೆಯಿತು. ಭಾರತವು ತನ್ನ ಅಂತಿಮ ಮಂಡನೆಯನ್ನು ವರ್ಚುವಲ್ ಮೂಲಕ ಸಲ್ಲಿಸಿತು ಮತ್ತು ಫೈನಲ್ ಸ್ಪರ್ಧೆಯ ಭಾಗವಾಗಿ, ಅಟಲ್ ನಾವಿನ್ಯ ಅಭಿಯಾನದ ಯೋಜನಾ ನಿರ್ದೇಶಕ ಡಾ. ಚಿಂತನ್ ವೈಷ್ಣವ್ ಪ್ಯಾನಲ್ ಚರ್ಚೆಯನ್ನೂ ಆಯೋಜಿಸಿದ್ದರು.
ಅಂತಿಮ ಸ್ಪರ್ಧೆಯ ವೇಳೆ ಮಾತನಾಡಿದ ಡಾ. ಚಿಂತನ್, “ಈ ವಲಯದಲ್ಲಿನ ತಂತ್ರಜ್ಞಾನ ಮತ್ತು ವ್ಯವಹಾರ ಮಾದರಿ ನಾವೀನ್ಯತೆಗಳಿಗೆ ಹೆಚ್ಚಿನ ಸೃಜನಶೀಲತೆ ಮತ್ತು ಸಮಗ್ರತೆಯ ಅಗತ್ಯವಿರುವುದರಿಂದ, ನೀರಿನ ಸಂಬಂಧಿತ ವಿಷಯಗಳ ಬಗ್ಗೆ ಕಾರ್ಯ ನಿರ್ವಹಿಸಲು ನಾನು ಎಲ್ಲಾ ನಾವಿನ್ಯತೆಯನ್ನು ಶ್ಲಾಘಿಸುತ್ತೇನೆ. ಈ ಯೋಗ್ಯ ಸವಾಲನ್ನು ಆಯೋಜಿಸಿದ್ದಕ್ಕಾಗಿ ಡೆನ್ಮಾರ್ಕ್ ನಾವಿನ್ಯತೆ ಕೇಂದ್ರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ” ಎಂದು ತಿಳಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡಿದ್ದವರು ಭಾರತದಲ್ಲಿ ಭವಿಷ್ಯದ ಜಲ ತಂತ್ರಜ್ಞಾನ ನಾವಿನ್ಯತೆ ಕುರಿತ ತಮ್ಮ ದೃಷ್ಟಿಕೋನಗಳನ್ನು ಪ್ರಸ್ತುತಪಡಿಸಿದರು. ಪ್ಯಾನಲ್ ಚರ್ಚೆಯ ನಂತರ ಜಾಗತಿಕ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ದೇಶಗಳು, ಪಾಲುದಾರರು ಮತ್ತು ನಾವೀನ್ಯದಾರರ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಡಾ. ಚಿಂತನ್ ವೈಷ್ಣವ್ ಅವರು ಪ್ರಧಾನ ಭಾಷಣಕಾರರಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು ಮತ್ತು ಭಾರತೀಯ ಸವಾಲಿನ ವಿಜೇತರನ್ನು ಘೋಷಿಸಿದರು.
ಫೈನಲ್ ಸ್ಪರ್ಧೆಯಲ್ಲಿ ಈ ಕೆಳಕಂಡ ಭಾರತೀಯ ತಂಡಗಳನ್ನು ಮುಂದಿನ ಪೀಳಿಗೆಯ ಜಲ ಕ್ರಮದ ವಿಜೇತರೆಂದು ಘೋಷಿಸಲಾಯಿತು:
ವಿದ್ಯಾರ್ಥಿ ತಂಡಗಳು:
1. ವೇಗವರ್ಧಕ ಪ್ರಶಸ್ತಿ: ವೈಶಾಲಿ ಮತ್ತು ಕೌಶಲ್ಯ ಅವರು ನೀಡಿದ ಪರಿಹಾರ- ಕೈಗೆಟಕುವ ಚೇತರಿಕೆ ತಂತ್ರಜ್ಞಾನ (ಸ್ಮಾರ್ಟ್) ಸುಸ್ಥಿರ ನಿರ್ವಹಣೆಗಾಗಿ.
2. ಅತ್ಯಂತ ಭರವಸೆಯ ಪರಿಹಾರ: ಮಿಹೀರ್ ಪಲವ್ ಮತ್ತು ಏಕ್ತಾವ್ಯಂ ತಂಡಕ್ಕೆ ಅವರ - ನೀರಿನ ಆಡಳಿತಕ್ಕಾಗಿ ಬಹು ಬಾಧ್ಯಸ್ಥರ ವೇದಿಕೆಯನ್ನು ತಂತ್ರಜ್ಞಾನಶಕ್ತಗೊಳಿಸುವ ಪರಿಹಾರಕ್ಕಾಗಿ.
3. ಅಂತಾರಾಷ್ಟ್ರೀಯ ವಿಶ್ವ ಜಲ ಕಾಂಗ್ರೆಸ್ 2022 ವಿದ್ಯಾರ್ಥಿವೇತನಗಳು: ಮಿಹೀರ್ ಪಲವ್ ಮತ್ತು ಏಕ್ತಾವ್ಯಂ ಅವರ –ನೀರಿನ ಆಡಳಿತಕ್ಕಾಗಿ ಬಹು ಬಾಧ್ಯಸ್ಥರ ವೇದಿಕೆಯನ್ನು ತಂತ್ರಜ್ಞಾನಶಕ್ತಗೊಳಿಸುವ ಪರಿಹಾರಕ್ಕಾಗಿ.
ನವೋದ್ಯಮ ತಂಡಗಳು:
1. ಅಗ್ರ 5 ನವೋದ್ಯಮಗಳು: ಆಕಾಂಕ್ಷಾ ಅಗರ್ವಾಲ್ ನೇತೃತ್ವದ ಅಗ್ರೊಮಾರ್ಫ್ ಮತ್ತು ಮಾನ್ಸಿ ಜೈನ್ ನೇತೃತ್ವದ ಡಿಜಿಟಲ್ ಇಕೋಇನೋವಿಷನ್ ಅನ್ನು 5 ಅಗ್ರ ನವೋದ್ಯಮಗಳಲ್ಲಿ ಆಯ್ಕೆ ಮಾಡಲಾಗಿದೆ.
2. ಅಂತಾರಾಷ್ಟ್ರೀಯ ವಿಶ್ವ ಜಲ ಕಾಂಗ್ರೆಸ್ 2022 ವಿದ್ಯಾರ್ಥಿವೇತನಗಳು: ಆಕಾಂಕ್ಷಾ ಅಗರ್ವಾಲ್ ನೇತೃತ್ವದ ಅಗ್ರೊಮಾರ್ಫ್
ಎರಡು ನಾವಿನ್ಯತೆಯ ಕಾಯಗಳ ನಡುವಿನ ಪಾಲುದಾರಿಕೆ – ಭಾರತದಿಂದ ಅಟಲ್ ನಾವಿನ್ಯತೆ ಅಭಿಯಾನ, ನೀತಿ ಆಯೋಗ ಮತ್ತು ಡೆನ್ಮಾರ್ಕ್ ನಾವಿನ್ಯತೆ ಕೇಂದ್ರ – ಗಳನ್ನು ಭಾರತ ಮತ್ತು ಡೆನ್ಮಾರ್ಕ್ ಹಸಿರು ವ್ಯೂಹಾತ್ಮಕ ಪಾಲುದಾರಿಕೆಯ ದೊಡ್ಡ ಗುರಿ ಸಾಧನೆಗೆ ಜೋಡಿಸಲಾಗಿದೆ, 2021 ಏಪ್ರಿಲ್ 12, ರಂದು ಎರಡೂ ಸಂಸ್ಥೆಗಳ ನಡುವೆ ಒಂದು ಹೇಳಿಕೆ (ಎಸ್.ಓ.ಐ) ಗೆ ಸಹಿ ಹಾಕಲಾಗಿದೆ. ಪರಿಸರ ಮತ್ತು ಸುಸ್ಥಿರತೆಯ ಕ್ಷೇತ್ರದಲ್ಲಿ ಹೆಚ್ಚಿನ ಒಳಿತಿಗಾಗಿ ಎಐಎಂ ಮತ್ತು ಐಸಿಡಿಕೆ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ.
***
(Release ID: 1719963)
Visitor Counter : 252