ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಆಂಪೋಟೆರಿಸಿನ್ ಬಿ ಅಗತ್ಯ ಮತ್ತು ಪೂರೈಕೆ ಕುರಿತು ಶ್ರೀ ಮನ್ಸುಖ್  ಮಾಂಡವಿಯ ಪರಾಮರ್ಶೆ; ಲಭ್ಯತೆ  ಖಾತ್ರಿಪಡಿಸಿದ ಸಚಿವರು


ಔಷಧಿಯನ್ನು ನ್ಯಾಯಯುತವಾಗಿ ಬಳಕೆ ಮಾಡಲು ಸಚಿವರ ಕರೆ

Posted On: 18 MAY 2021 2:41PM by PIB Bengaluru

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವಿಯ ಅವರು ಇಂದು ಮ್ಯೂಕರ್ ಮೈಕೋಸಿಸ್ ಕಾಯಿಲೆ ವಾಸಿ ಮಾಡುವ ಆಂಪೋಟೆರಿಸಿನ್-ಬಿ ಔಷಧಿಯ ಅವಶ್ಯಕತೆ ಮತ್ತು ಪೂರೈಕೆ ಸ್ಥಿತಿಗತಿ ಬಗ್ಗೆ ಪರಾಮರ್ಶೆ ನಡೆಸಿದರು. ದೇಶೀಯವಾಗಿ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಜಗತ್ತಿನೆಲ್ಲೆಡೆಯಿಂದ ಔಷಧವನ್ನು ಆಮದು ಮಾಡಿಕೊಳ್ಳಲು ಸರ್ಕಾರ ಉತ್ಪಾದಕರ ಜೊತೆ ಕಾರ್ಯತಂತ್ರ ರೂಪಿಸಿದೆ.

 

ಆಂಪೋಟೆರಿಸಿನ್-ಬಿ ಔಷಧಿಯ ಪೂರೈಕೆ ಹಲವು ಪಟ್ಟು ಹೆಚ್ಚಾಗಿರುವುದನ್ನು ಸಚಿವರು ಗಮನಿಸಿದರು. ಆದರೆ ಸದ್ಯ ಔಷಧಕ್ಕೆ ಭಾರಿ ಬೇಡಿಕೆ ಇದೆ. ಅಗತ್ಯವಿರುವ ರೋಗಿಗಳಿಗೆ ಔಷಧವನ್ನು ಲಭ್ಯವಾಗುವಂತೆ ಮಾಡಲು ಸಾಧ್ಯವಾದ ಮತ್ತು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದರು.

ಆಂಪೋಟೆರಿಸಿನ್-ಬಿ ಔಷಧಿಯ ಪೂರೈಕೆ ಸರಣಿ ನಿರ್ವಹಣೆ ಮತ್ತು ಪರಿಣಾಮಕಾರಿ ವಿತರಣೆಗೆ ಸರ್ಕಾರ ವ್ಯವಸ್ಥೆಯನ್ನು ರೂಪಿಸಿದೆ. ಔಷಧಿಯ ಕೊರತೆ ಆದಷ್ಟು ಬೇಗ ನಿವಾರಣೆಯಾಗಲಿದೆ. ರಾಜ್ಯಗಳು ನಿಗದಿತ ಮಾರ್ಗಸೂಚಿಯನ್ನು ಕಠಿಣವಾಗಿ ಪಾಲಿಸಿ, ಔಷಧಿಯನ್ನು ನ್ಯಾಯಯುತವಾಗಿ ಬಳಕೆ ಮಾಡಬೇಕು ಎಂದು ಮಾಂಡವಿಯ ಕರೆ ನೀಡಿದರು.

***


(Release ID: 1719634) Visitor Counter : 257