ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಹಲವಾರು ರಾಜ್ಯಗಳಲ್ಲಿ ಹಿರಿಯರಿಗಾಗಿ ಉಚಿತ ಸಹಾಯವಾಣಿ ಎಲ್ಡರ್ ಲೈನ್ (14567) ಕಾರ್ಯರೂಪಕ್ಕೆ ಬಂದಿದೆ
2021 ರ ಮೇ ಅಂತ್ಯದ ವೇಳೆಗೆ ಎಲ್ಲಾ ರಾಜ್ಯಗಳಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.
Posted On:
17 MAY 2021 3:20PM by PIB Bengaluru
ಈಗಿರುವ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹಿರಿಯರ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ, ಸಾಮಾಜಿಕ ನ್ಯಾಯ ಸಚಿವಾಲಯವು ಎಲ್ಡರ್ ಲೈನ್ ಯೋಜನೆಯಡಿ ಪ್ರಮುಖ ರಾಜ್ಯಗಳಲ್ಲಿ ರಾಜ್ಯವಾರು ಕಾಲ್ ಸೆಂಟರ್ ಗಳನ್ನು ಪ್ರಾರಂಭಿಸಿದೆ. ಈ ಸೌಲಭ್ಯವನ್ನು ಈಗಾಗಲೇ ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳು ನಾಡು ಮತ್ತು ಕರ್ನಾಟಕದ 5 ಪ್ರಮುಖ ರಾಜ್ಯಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ. ತೆಲಂಗಾಣದಲ್ಲಿ, ಈ ಸೌಲಭ್ಯವು ಒಂದು ವರ್ಷದ ಹಿಂದಿನಿಂದಲೂ ಕಾರ್ಯನಿರ್ವಹಿಸುತ್ತಿದೆ.
2021 ರ ಮೇ ಅಂತ್ಯದ ವೇಳೆಗೆ ಎಲ್ಲಾ ರಾಜ್ಯಗಳಲ್ಲಿಯೂ ಅವುಗಳನ್ನು ಪ್ರಾರಂಭಿಸಲು ಪ್ರಯತ್ನಿಸಲಾಗುತ್ತಿದೆ.
ಉಚಿತ ಸಹಾಯವಾಣಿ ಸಂಖ್ಯೆ 14567 ಮೂಲಕ ಈ ಸಹಾಯ ಕೇಂದ್ರ (ಕಾಲ್ ಸೆಂಟರ್) ಗಳಿಗೆ ಕರೆ ಮಾಡಬಹುದು. ಎಲ್ಲಾ ಹಿರಿಯರಿಗೆ ಈ ಸೌಲಭ್ಯವನ್ನು ಬಳಸಲು ಸೂಚಿಸಬಹುದು. ಎಲ್ಡರ್ ಲೈನ್ ಟಾಟಾ ಟ್ರಸ್ಟ್ ಮತ್ತು ಎನ್ ಎಸ್ ಇ ಫೌಂಡೇಶನ್ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಸಹಾಯ ಕೇಂದ್ರಗಳ ಪ್ರಸ್ತುತ ಸ್ಥಿತಿಯ ವಿವರ ಈ ಕೆಳಗಿನಂತಿದೆ:
ರಾಜ್ಯಗಳು
|
ಪ್ರಾರಂಭವಾದ ದಿನಾಂಕ
|
ಅಧಿಕಾರಿಗಳ ಸಂಖ್ಯೆ
|
ಕ್ರಿಯಾತ್ಮಕ ಕರೆಗಳ ಸಂಖ್ಯೆ
|
ಸೇವಾ ವಿನಂತಿಯ ಸಂಖ್ಯೆ
|
ಸೇವಾ ವಿನಂತಿಯ ಮುಗಿಸಲಾದ ಸಂಖ್ಯೆ
|
ತಮಿಳು ನಾಡು
|
28 ಏಪ್ರಿಲ್ l 2021
|
8
|
71
|
25
|
15
|
ಮಧ್ಯ ಪ್ರದೇಶ
|
28 ಏಪ್ರಿಲ್ 2021
|
4
|
163
|
12
|
5
|
ರಾಜಸ್ಥಾನ
|
28 ಏಪ್ರಿಲ್ 2021
|
4
|
25
|
8
|
3
|
ಕರ್ನಾಟಕ
|
28 ಏಪ್ರಿಲ್ 2021
|
3
|
122
|
6
|
1
|
ಉತ್ತರ ಪ್ರದೇಶ
|
14 ಮೇ 2021
|
6
|
94
|
13
|
7
|
*****
(Release ID: 1719455)
Visitor Counter : 348