ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಮಿಷನ್ ಕೋವಿಡ್ ಸುರಕ್ಷಾ ಯೋಜನೆಯಡಿಯಲ್ಲಿ ಕೋವಾಕ್ಸಿನ್ ಉತ್ಪಾದನೆಗೆ ಉತ್ಪಾದನಾ ಸಾಮರ್ಥ್ಯದ ವರ್ಧನೆಯನ್ನು ಸರ್ಕಾರ ಬೆಂಬಲಿಸುತ್ತದೆ
Posted On:
15 MAY 2021 2:47PM by PIB Bengaluru
ಸ್ಥಳೀಯ ಕೋವಿಡ್ ಲಸಿಕೆಗಳ ಅಭಿವೃದ್ಧಿ ಮತ್ತು ಉತ್ಪಾದನೆಯನ್ನು ತೀವ್ರಗೊಳಿಸಲು ಆತ್ಮನಿರ್ಭರ ಭಾರತ 3.0 ಮಿಷನ್ ಕೋವಿಡ್ ಸುರಕ್ಷವನ್ನು ಭಾರತ ಸರ್ಕಾರ ಘೋಷಿಸಿತು. ಸರ್ಕಾರವು ಇದನ್ನು ನವದೆಹಲಿಯ ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (ಬಿರಾಕ್) ನಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯ ವತಿಯಿಂದ ಜಾರಿಗೊಳಿಸಲಾಗುತ್ತಿದೆ..
ಈ ಯೋಜನೆಯಡಿಯಲ್ಲಿ ಕೊವಾಕ್ಸಿನ್ ನ ಸ್ಥಳೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು, 2021 ರ ಏಪ್ರಿಲ್ನಲ್ಲಿ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗ, ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಲಸಿಕೆ ಉತ್ಪಾದನಾ ಸೌಲಭ್ಯಗಳಿಗೆ ಅನುದಾನವಾಗಿ ಹಣಕಾಸಿನ ನೆರವು ನೀಡಿತು, ಇದು ಸೆಪ್ಟೆಂಬರ್, 2021 ರ ಹೊತ್ತಿಗೆ. ತಿಂಗಳಿಗೆ 10 ಕೋಟಿಗಿಂತ ಹೆಚ್ಚಿನ ಪ್ರಮಾಣವನ್ನು (ಡೊಸ್) ತಲುಪುವ ನಿರೀಕ್ಷೆಯಿದೆ.
ಈ ಅಧಿಕಗೊಳಿಸುವ ಯೋಜನೆಯ ಭಾಗವಾಗಿ, ಹೈದರಾಬಾದ್ನ ಭಾರತ್ ಬಯೋಟೆಕ್ ಲಿಮಿಟೆಡ್ ಮತ್ತು ಇತರ ಸಾರ್ವಜನಿಕ ವಲಯದ ಉತ್ಪಾದಕರ ಸಾಮರ್ಥ್ಯವನ್ನು ಅಗತ್ಯ ಮೂಲಸೌಕರ್ಯ ಮತ್ತು ತಂತ್ರಜ್ಞಾನದೊಂದಿಗೆ ನವೀಕರಿಸಲಾಗುತ್ತಿದೆ. ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಮರುರೂಪಿಸಲಾಗುತ್ತಿರುವ ಭಾರತ್ ಬಯೋಟೆಕ್ನ ಹೊಸ ಬೆಂಗಳೂರು ಸೌಲಭ್ಯಕ್ಕೆ ಕೇಂದ್ರ ಸರ್ಕಾರದಿಂದ ಸುಮಾರು 65 ಕೋಟಿ ರೂ.ಗಳ ಅನುದಾನವಾಗಿ ಹಣಕಾಸಿನ ನೆರವು ನೀಡಲಾಗುತ್ತಿದೆ.
ಲಸಿಕೆ ಉತ್ಪಾದನೆಯ ಸಾಮರ್ಥ್ಯವನ್ನು ಹೆಚ್ಚಿಸಲು ಈ ಕೆಳಗಿನ ಮೂರು ಸಾರ್ವಜನಿಕ ವಲಯದ ಕಂಪನಿಗಳಿಗೆ ಸಹಾಯ ನೀಡಲಾಗುತ್ತಿದೆ.
1. ಮುಂಬೈನ ಹಾಫ್ಕಿನ್ ಬಯೋಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ - ಮಹಾರಾಷ್ಟ್ರದ ರಾಜ್ಯ ಸರ್ಕಾರದ ಸ್ವಾಮ್ಯದ ರಾಜ್ಯ ಸಾರ್ವಜನಿಕ ಉದ್ದಿಮೆ.
ಉತ್ಪಾದನೆಗೆ ಸಿದ್ಧವಾಗಲು ಇಲ್ಲಿರುವ ಸೌಲಭ್ಯಕ್ಕಾಗಿ ಕೇಂದ್ರ ಸರ್ಕಾರ್ವು ಅನುದಾನವಾಗಿ 65 ಕೋಟಿ ರೂಪಾಯಿಗಳ ಸಹಾಯಧನವನ್ನು ನೀಡಿದೆ. ಒಮ್ಮೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದ ನಂತರ ಈ ಘಟಕವು ತಿಂಗಳಿಗೆ 20 ಮಿಲಿಯನ್ ಡೋಸ್ ತಯಾರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
2. ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್ (ಐಐಎಲ್), ಹೈದರಾಬಾದ್ - ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯಡಿ 60 ಕೋಟಿ ರೂಪಾಯಿಗಳ ಒಂದು ದತ್ತಿಯನ್ನು ಒಂದು ಘಟಕಕ್ಕೆ ನೀಡಲಾಗಿದೆ.
3. ಸಿಪಿಎಸ್ಇ ಬಯೋಟೆಕ್ನಾಲಜಿ ವಿಭಾಗದ ಅಡಿಯಲ್ಲಿ ಬರುವ ಬುಲಂದ್ಶಹರ್ ನಲ್ಲಿರುವ ಭಾರತ್ ಇಮ್ಯುನೊಲಾಜಿಕಲ್ಸ್ ಅಂಡ್ ಬಯೋಲಾಜಿಕಲ್ಸ್ ಲಿಮಿಟೆಡ್ (ಬಿಐಬಿಸಿಒಎಲ್) ಸಂಸ್ಥೆಗೆ ತಿಂಗಳಿಗೆ 10-15 ದಶಲಕ್ಷ ಡೋಸ್ ಗಳನ್ನು ತಯಾರುಮಾಡುವ ಸೌಲಭ್ಯಕ್ಕಾಗಿ 30 ಕೋಟಿ ರೂಪಾಯಿಗಳ ದತ್ತಿಯನ್ನು ನೀಡಲಾಗಿದೆ.
ಇದಲ್ಲದೆ, ಗುಜರಾತ್ ಸರ್ಕಾರದ ಗುಜರಾತ್ ಜೈವಿಕ ತಂತ್ರಜ್ಞಾನ ಸಂಶೋಧನಾ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಜೊತೆಗೆ ಹೆಸ್ಟರ್ ಬಯೋಸೈನ್ಸ್ ಮತ್ತು ಓಮ್ನಿ ಬಿಆರ್ ಎಕ್ಸ್ ಸಹ ಕೋವಾಕ್ಸಿನ್ ತಂತ್ರಜ್ಞಾನವನ್ನು ಹೆಚ್ಚಿಸಲು ಮತ್ತು ತಿಂಗಳಿಗೆ ಕನಿಷ್ಠ 20 ಮಿಲಿಯನ್ ಡೋಸ್ಗಳನ್ನು ಉತ್ಪಾದಿಸಲು ಭಾರತ್ ಬಯೋಟೆಕ್ ಜೊತೆಗಿನ ಚರ್ಚೆಯನ್ನು ದೃಢಪಡಿಸಿದೆ. ಎಲ್ಲಾ ಉತ್ಪಾದಕರೊಂದಿಗೆ ತಂತ್ರಜ್ಞಾನ ವರ್ಗಾವಣೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ.
ಡಿಬಿಟಿ ಬಗ್ಗೆ: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಧೀನದಲ್ಲಿರುವ ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಕೃಷಿ, ಆರೋಗ್ಯ ರಕ್ಷಣೆ, ಪ್ರಾಣಿ ವಿಜ್ಞಾನ, ಪರಿಸರ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸುತ್ತದೆ. ಇದು ಜೈವಿಕ ತಂತ್ರಜ್ಞಾನ ಸಂಶೋಧನೆಯಲ್ಲಿ ಹೊಸ ಮೈಲುಗಲ್ಲನ್ನು ಸಾಧಿಸುವುದು, ಜೈವಿಕ ತಂತ್ರಜ್ಞಾನವನ್ನು ಭವಿಷ್ಯದ ಪ್ರಮುಖ ನಿಖರ ಸಾಧನವಾಗಿ ಸಂಪತ್ತಿನ ಸೃಷ್ಟಿಗೆ ರೂಪಿಸುವುದು ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವುದು. ಇದನ್ನು ವಿಶೇಷವಾಗಿ ಬಡವರ ಕಲ್ಯಾಣಕ್ಕಾಗಿ ಸ್ಥಾಪಿಸಲಾಗಿದೆ . www.dbtindia.gov.in
ಬೈರಾಕ್ ಬಗ್ಗೆ: ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (ಬಿಐಆರ್ಎಸಿ) ಲಾಭರಹಿತ ಪರಿಚ್ಛೇದ 8, ಅನುಬಂಧ ಬಿಯಡಿಯಲ್ಲಿ ಸ್ಥಾಪಿಸಲಾದ ಸಾರ್ವಜನಿಕ ವಲಯದ ಉದ್ಯಮವಾಗಿದೆ, ಇದನ್ನು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಸ್ಥಾಪಿಸಿದೆ. ರಾಷ್ಟ್ರಕ್ಕೆ ಸಂಬಂಧಿಸಿದ ಉತ್ಪನ್ನಗಳ ಅಭಿವೃದ್ಧಿಯ ಅಗತ್ಯಗಳನ್ನು ಪರಿಹರಿಸುವ ಮೂಲಕ ಕಾರ್ಯತಂತ್ರದ ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಕೈಗೊಳ್ಳಲು ಉದಯೋನ್ಮುಖ ಬಯೋಟೆಕ್ ಉದ್ಯಮವನ್ನು ಬಲಪಡಿಸಲು ಮತ್ತು ಅಧಿಕಾರ ನೀಡಲು ಇಂಟರ್ಫೇಸ್ ಸಂಸ್ಥೆಯನ್ನಾಗಿ ಪ್ರಾರಂಭಿಸಲಾಗಿದೆ. ವಿವರಗಳಿಗಾಗಿ ನೋಡಿ www.birac.nic.in
ಹೆಚ್ಚಿನ ಮಾಹಿತಿಗಾಗಿ: ಡಿಬಿಟಿ / ಬಿರಾಕ್ ನ್ನು ಸಂಪರ್ಕಿಸಿ : @DBTIndia@BIRAC_2012
www.dbtindia.gov.in , www.birac.nic.in
***
(Release ID: 1718856)
Visitor Counter : 299