ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಲಸಿಕೆ ಹಂಚಿಕೆಯ ಬಗ್ಗೆ ಹೊಸ ಮಾಹಿತಿ


ಮೇ 16ರಿಂದ  31 ರವರೆಗೆ ಹದಿನೈದು ದಿನಗಳಲ್ಲಿ ಕೇಂದ್ರ ಸರ್ಕಾರವು  ಸುಮಾರು 192 ಲಕ್ಷ  ಕೋವಿಡ್ ಲಸಿಕೆಗಳನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ನೀಡಲಿದೆ

Posted On: 14 MAY 2021 12:49PM by PIB Bengaluru

ದೇಶದಲ್ಲಿ ನೀಡಲಾದ ಕೋವಿಡ್-19 ಲಸಿಕೆ ಪ್ರಮಾಣ (ಡೋಸ್)ಗಳ  ಒಟ್ಟು ಸಂಖ್ಯೆ ಸುಮಾರು 18 ಕೋಟಿ (17.93 ಕೋಟಿ. ಇಂದು ಬೆಳಿಗ್ಗೆ 7 ತಾತ್ಕಾಲಿಕ ವರದಿಯ ಪ್ರಕಾರ). ಕೋವಿಡ್-19 ಲಸಿಕೆ ನೀಡಿಕೆ ಅಭಿಯಾನದ 118 ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ, ಇದರಲ್ಲಿ ಎಲ್ಲಾ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಸಹಯೋಗದ ಮೂಲಕ ಗುರುತಿಸಲಾದ ಫಲಾನುಭವಿಗಳಿಗೆ 17.89 ಕೋಟಿ ಪ್ರಮಾಣವನ್ನು ನೀಡಲಾಗಿದೆ. ಭಾರತವು ವಿಶ್ವದಲ್ಲಿ 114 ದಿನಗಳಲ್ಲಿ 17 ಕೋಟಿ ಗುರಿ ತಲುಪಿದ ಅತ್ಯಂತ ವೇಗದ ದೇಶವಾಗಿದೆಅಮೆರಿಕ 115 ದಿನಗಳನ್ನು ತೆಗೆದುಕೊಂಡಿತು ಮತ್ತು ಚೀನಾ 119 ದಿನಗಳನ್ನು ತೆಗೆದುಕೊಂಡಿತು.

'ಉದಾರೀಕೃತ ಬೆಲೆ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್-19 ಲಸಿಕಾ ತಂತ್ರ 'ವನ್ನು ಮೇ 1, 2021 ರಿಂದ ಜಾರಿಗೆ ತರಲಾಗಿದೆ, ಇದರಲ್ಲಿ ಲಭ್ಯವಿರುವ 50% ಪ್ರಮಾಣವನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಗೆ ಸರಬರಾಜು ಮಾಡಲು ಮೀಸಲಿಡಲಾಗಿದೆ, ಆದರೆ ಭಾರತ ಸರ್ಕಾರದ ವತಿಯಿಂದ ಉಚಿತವಾಗಿ ಸರಬರಾಜು ಮಾಡಲಾಗುವುದು, ಉಳಿದವು ಲಸಿಕೆ ತಯಾರಕರಿಂದ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮತ್ತು ಖಾಸಗಿ ಆಸ್ಪತ್ರೆಗಳ ನೇರ ಸಂಗ್ರಹಣೆಗೆ 50% ಲಭ್ಯವಿದೆ.

ಸರ್ಕಾರದ ಹಂಚಿಕೆಯು ಮುಂಬರುವ ಹದಿನೈದು ದಿನಗಳಲ್ಲಿ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆಯ ಬಳಕೆ ಮಾದರಿ ಮತ್ತು 2 ನೇ ಪ್ರಮಾಣಗಳಿಗೆ ಫಲಾನುಭವಿಗಳ  ಸಂಖ್ಯೆಯ ಮೇಲೆ ನಿರ್ಧರಿಸಲಾಗುತ್ತದೆ. 16ರಿಂದ 31 ಮೇ 2021 ಅವಧಿಯಲ್ಲಿ, 191.99 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಅನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ಇದರಲ್ಲಿ 162.5 ಲಕ್ಷ ಕೋವಿಶೀಲ್ಡ್ ಮತ್ತು 29.49 ಲಕ್ಷ ಕೋವಾಕ್ಸಿನ್ ಸೇರಿವೆ.

ಹಂಚಿಕೆಯ ವಿತರಣಾ ವೇಳಾಪಟ್ಟಿಯನ್ನು ಮುಂಚಿತವಾಗಿ ಹಂಚಿಕೊಳ್ಳಲಾಗುತ್ತದೆ.  ನಿಗದಿಪಡಿಸಿದ ಪ್ರಮಾಣಗಳ ಅಗತ್ಯವಾದ ಮತ್ತು ನ್ಯಾಯಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಲಸಿಕೆಯ ವ್ಯರ್ಥವನ್ನು ಕಡಿಮೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ರಾಜ್ಯಗಳಿಗೆ ಕೋರಲಾಗಿದೆ.

15 ದಿನಗಳವರೆಗೆ ಭಾರತ ಸರ್ಕಾರದಿಂದ ಲಭ್ಯವಾಗಲಿರುವ ಉಚಿತ ಲಸಿಕೆ ಪ್ರಮಾಣವನ್ನು ಮುಂಚಿತವಾಗಿ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸುವ ಹಿಂದಿನ ಉದ್ದೇಶವೆಂದರೆ, 45 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮತ್ತು ಆರೋಗ್ಯ ಕಾರ್ಯಕರ್ತರು ಮತ್ತು ಮುಂದಿರುವ ಕಾರ್ಯಕರ್ತರುಗಳಿಗೆ, ಉಚಿತ ಲಸಿಕೆ ಪ್ರಮಾಣಗಳ ನ್ಯಾಯಯುತ ಮತ್ತು ಗರಿಷ್ಠ ಬಳಕೆಗೆ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸುವುದನ್ನು ಖಚಿತಪಡಿಸಿಕೊಳ್ಳುವುದು. ಹಿಂದಿನ ಹದಿನೈದು ದಿನಗಳಲ್ಲಿ, ಅಂದರೆ 2021 ಮೇ 1 ರಿಂದ 15 ರವರೆಗೆ ಒಟ್ಟು 1.7 ಕೋಟಿ  ಲಸಿಕೆ ಪ್ರಮಾಣವನ್ನು (ಡೋಸ್) ಕೇಂದ್ರ ಸರ್ಕಾರವು ರಾಜ್ಯಗಳಿಗೆ ಉಚಿತವಾಗಿ ಲಭ್ಯಗೊಳಿಸಿದೆ.

ಇದಲ್ಲದೆ, 2021 ಮೇ ತಿಂಗಳಲ್ಲಿ ರಾಜ್ಯಗಳ ಮತ್ತು ಖಾಸಗಿ ಆಸ್ಪತ್ರೆಗಳ ನೇರ ಸಂಗ್ರಹಣೆಗಾಗಿ ಒಟ್ಟು 4.39 ಕೋಟಿಗಿಂತ ಹೆಚ್ಚಿನ ಪ್ರಮಾಣಗಳು ಲಭ್ಯವಿವೆ.

***



(Release ID: 1718691) Visitor Counter : 233