ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಹಾರ ನೆರವಿನ ತಾಜಾ ಮಾಹಿತಿ


‘ಇಡೀ ಸರ್ಕಾರ’ ವೆಂಬ ಮನೋಭಾವದಡಿ ಭಾರತ ಸರ್ಕಾರದಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಜಾಗತಿಕ ನೆರವಿನ ತ್ವರಿತ ಹಂಚಿಕೆ ಮತ್ತು ವಿತರಣೆ

ಈವರೆಗೆ 9000ಕ್ಕೂ ಅಧಿಕ ಆಮ್ಲಜನಕ ಸಾಂದ್ರಕಗಳು; 11,800ಕ್ಕೂ ಅಧಿಕ ಆಮ್ಲಜನಕ ಸಿಲಿಂಡರ್; 19 ಆಮ್ಲಜನಕ ಉತ್ಪಾದನಾ ಘಟಕಗಳು; 6,400ಕ್ಕೂ ಅಧಿಕ ವೆಂಟಿಲೇಟರ್/ಬಿ ಪಿಎಪಿ; ಸುಮಾರು 4.22 ಲಕ್ಷ ರೆಮ್ ಡಿಸಿವಿರ್ ವಯಲ್ಸ್ ವಿತರಣೆ/ ರವಾನೆ

Posted On: 13 MAY 2021 4:51PM by PIB Bengaluru

ದೇಶಾದ್ಯಂತ ಅನಿರೀಕ್ಷಿತ ರೀತಿಯಲ್ಲಿ ಏರಿಕೆಯಾಗುತ್ತಿರುವ ಕೋವಿಡ್-19 ಎದುರಿಸಲು ಕೈಗೊಂಡಿರುವ ಪ್ರಯತ್ನಗಳನ್ನು ಹೆಚ್ಚಿಸಲು ಭಾರತ ಸರ್ಕಾರ ನಾನಾ ದೇಶಗಳು/ಸಂಸ್ಥೆಗಳಿಂದ 2021 ಏಪ್ರಿಲ್ 27 ನಂತರ ಅಂತಾರಾಷ್ಟ್ರೀಯ ದೇಣಿಗೆ ಮತ್ತು ಕೋವಿಡ್-19 ವೈದ್ಯಕೀಯ ಸಾಮಗ್ರಿಗಳು ಮತ್ತು ಉಪಕರಣಗಳ ನೆರವನ್ನು ಸ್ವೀಕರಿಸುತ್ತಿದೆ. ಇಡೀ ಸರ್ಕಾರಮನೋಭಾವದೊಂದಿಗೆ ಅತ್ಯಂತ ವ್ಯವಸ್ಥಿತ ಕಾರ್ಯವಿಧಾನದ ಮೂಲಕ ಭಾರತ ಸರ್ಕಾರದ ನಾನಾ ಸಚಿವಾಲಯಗಳು/ಇಲಾಖೆಗಳು, ಹರಿದು ಬರುತ್ತಿರುವ ಜಾಗತಿಕ ನೆರವನ್ನು ತ್ವರಿತವಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡುತ್ತಿವೆ.

2021 ಏಪ್ರಿಲ್ 27 ರಿಂದ 2021 ಮೇ 12 ವರೆಗೆ ರಸ್ತೆ ಮಾರ್ಗ ಮತ್ತು ವಿಮಾನಗಳ ಮೂಲಕ ಒಟ್ಟಾರೆ 9,294 ಆಮ್ಲಜನಕ ಸಾಂದ್ರಕಗಳು; 11,835 ಆಮ್ಲಜನಕ ಸಿಲಿಂಡರ್; 19 ಆಮ್ಲಜನಕ ಉತ್ಪಾದನಾ ಘಟಕಗಳು; 6,439 ವೆಂಟಿಲೇಟರ್ ಗಳು/ಬಿಐ ಪಿಎಪಿ; ಸುಮಾರು 4.22 ಲಕ್ಷ ರೆಮ್ ಡಿಸಿವಿರ್ ವಯಲ್ಸ್ ಅನ್ನು ವಿತರಣೆ/ರವಾನೆ ಮಾಡಲಾಗಿದೆ.

2021 ಮೇ 12ರಂದು ಕುವೈತ್, ಸಿಂಗಾಪುರ್, ಗಿಲ್ಯಾಡ್, ಸ್ವಿಟ್ಜರ್ ಲ್ಯಾಂಡ್, ಸ್ಪೇನ್, ಈಜಿಪ್ಟ್ ನಿಂದ ಸ್ವೀಕರಿಸಿರುವ ಪ್ರಮುಖ ಕನ್ಸೈನ್ ಮೆಂಟ್ ಗಳಲ್ಲಿ ಇವು ಸೇರಿವೆ.

- ರೆಮ್ ಡಿಸಿವಿರ್:  86,595

- ಆಮ್ಲಜನಕ ಸಿಲಿಂಡರ್ : 4,802

- ಆಮ್ಲಜನಕ ಸಾಂದ್ರಕಗಳು: 10

- ವೆಂಟಿಲೇಟರ್/ಬಿಐ ಪಿಎಪಿ/ಸಿಪಿಎಪಿ: 141

ಅವುಗಳನ್ನು ತಕ್ಷಣವೇ ಪರಿಣಾಮಕಾರಿಯಾಗಿ ಹಂಚಿಕೆ ಮಾಡಿ, ಸಂಬಂಧಿಸಿದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಿಗೆ ವಿತರಿಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯ ನಿರಂತರವಾಗಿ ಪ್ರತಿ ದಿನ ಇದರ ಮೇಲೆ ಸಮಗ್ರ ನಿಗಾವಹಿಸಿದೆ. ಅಲ್ಲದೆ ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ನಿರ್ದಿಷ್ಟ ಸಮನ್ವಯ ಘಟಕವನ್ನು ಸ್ಥಾಪಿಸಲಾಗಿದ್ದು, ಅದು ವಿದೇಶಿ ಕೋವಿಡ್ ಪರಿಹಾರ ಸಾಮಗ್ರಿಗಳಾದ ಅನುದಾನ, ನೆರವು ಮತ್ತು ದೇಣಿಗೆಯನ್ನು ಸ್ವೀಕರಿಸುವುದು ಮತ್ತು ಹಂಚಿಕೆ ಮಾಡುವ ಕುರಿತು ಸಮನ್ವಯ ನಡೆಸುತ್ತಿದೆ ಘಟಕ 2021 ಏಪ್ರಿಲ್ 26ರಿಂದ ಕಾರ್ಯಾರಂಭ ಮಾಡಿದೆ. 2021 ಮೇ 2ರಿಂದೀಚೆಗೆ ಕೇಂದ್ರ ಆರೋಗ್ಯ ಸಚಿವಾಲಯ ವಿಶೇಷ ಎಸ್ ಒಪಿಯನ್ನು ರಚಿಸಿ ಅದನ್ನು ಜಾರಿಗೊಳಿಸಿದೆ.

ವಿದೇಶಗಳಿಂದ ಸ್ವೀಕರಿಸಲಾದ ಪರಿಹಾರದ ನೆರವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸೌಕರ್ಯಗಳು ಮತ್ತು ಆಸ್ಪತ್ರೆಗಳಿಗೆ ತ್ವರಿತವಾಗಿ ವಿತರಣೆ ಮಾಡಲಾಗುತ್ತಿರುವ ಚಿತ್ರಣ

    

                         

***(Release ID: 1718433) Visitor Counter : 234