ರೈಲ್ವೇ ಸಚಿವಾಲಯ

ರಾಷ್ಟ್ರಕ್ಕೆ 7115 ಎಂ.ಟಿ.ಗೂ ಅಧಿಕ ಪ್ರಮಾಣದಲ್ಲಿ  ವೈದ್ಯಕೀಯ ಆಮ್ಲಜನಕ  ಪೂರೈಸಿದ ಆಮ್ಲಜನಕ ಎಕ್ಸ್ ಪ್ರೆಸ್


80 ಎಂ.ಟಿ. ಯಷ್ಟು ಎಲ್.ಎಂ.ಒ. ನೊಂದಿಗೆ ತಮಿಳುನಾಡಿಗೆ ಹೊರಟಿದೆ ಮೊದಲ ಆಮ್ಲಜನಕ ಎಕ್ಸ್ ಪ್ರೆಸ್

ಎನ್.ಸಿ.ಆರ್.ವಲಯದಲ್ಲಿ ಇದುವರೆಗೆ ಆಕ್ಸಿಜನ್ ಎಕ್ಸ್ ಪ್ರೆಸ್ ಮೂಲಕ 3900 ಎಂ.ಟಿ.ಗೂ ಅಧಿಕ ಎಲ್.ಎಂ.ಒ.ಪೂರೈಕೆ

ಪಂಜಾಬಿಗೆ ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ 40 ಎಂ.ಟಿ.ಯಷ್ಟು ಎಲ್.ಎಂ.ಒ.ಡೆಹ್ರಾಡೂನ್ ನಲ್ಲಿ ಪೂರೈಕೆ

ಆಮ್ಲಜನಕ ಎಕ್ಸ್ ಪ್ರೆಸ್ ನಿಂದ ದಿನ ನಿತ್ಯ ದೇಶಕ್ಕೆ ಸುಮಾರು 800 ಎಂ.ಟಿ.ಯಷ್ಟು ಎಲ್.ಎಂ.ಒ.ಪೂರೈಕೆ

ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ಉತ್ತರಾಖಂಡ, ಕರ್ನಾಟಕ, ಮಹಾರಾಷ್ಟ, ಮಧ್ಯಪ್ರದೇಶ, ಹರ್ಯಾಣಾ, ತೆಲಂಗಾಣ, ರಾಜಸ್ಥಾನ, ದಿಲ್ಲಿ ಮತ್ತ್ತು ಉತ್ತರಪ್ರದೇಶಗಳಿಗೆ ಆಮ್ಲಜನಕ ಪರಿಹಾರ ಒದಗಣೆ

ಇದುವರೆಗೆ ಮಹಾರಾಷ್ಟ್ರಕ್ಕೆ 407 ಎಂ.ಟಿ, ಉತ್ತರ ಪ್ರದೇಶಕ್ಕೆ, 1960 ಎಂ.ಟಿ, ಮಧ್ಯಪ್ರದೇಶಕ್ಕೆ 361 ಎಂ.ಟಿ., ಹರ್ಯಾಣಕ್ಕೆ 1135 ಎಂ.ಟಿ., ತೆಲಂಗಾಣಕ್ಕೆ 188 ಎಂ.ಟಿ., ರಾಜಸ್ಥಾನಕ್ಕೆ 72 ಏಮ್.ಟಿ., ಕರ್ನಾಟಕಕ್ಕೆ 120 ಎಂ.ಟಿ., ಮತ್ತು ದಿಲ್ಲಿಗೆ 2748 ಎಂ.ಟಿ.ಗೂ ಅಧಿಕ ಪೂರೈಕೆ

Posted On: 13 MAY 2021 5:23PM by PIB Bengaluru

ಎಲ್ಲಾ ಅಡೆ ತಡೆಗಳನ್ನು ಮೀರಿ ಮತ್ತು ಹೊಸ ಪರಿಹಾರಗಳನ್ನು ಅನ್ವೇಷಿಸಿ ಭಾರತೀಯ ರೈಲ್ವೇಯು ದ್ರವೀಕೃತ ಆಮ್ಲಜನಕವನ್ನು (ಎಲ್.ಎಂ..) ದೇಶಾದ್ಯಂತ ವಿವಿಧ ರಾಜ್ಯಗಳಿಗೆ ಪೂರೈಸುವ ಮೂಲಕ ಪರಿಹಾರ ಒದಗಿಸುವ ತನ್ನ ಪ್ರಯಾಣವನ್ನು ಮುಂದುವರೆಸಿದೆ. ಇದುವೆರೆಗೆ ಭಾರತೀಯ ರೈಲ್ವೇಯು ಸುಮಾರು 7115 ಎಂ.ಟಿ.ಯಷ್ಟು ಆಮ್ಲಜನಕವನ್ನು ದೇಶಾದ್ಯಂತ ವಿವಿಧ ರಾಜ್ಯಗಳಿಗೆ 444ಕ್ಕೂ ಅಧಿಕ  ಟ್ಯಾಂಕರುಗಳ ಮೂಲಕ ವಿತರಿಸಿದೆ.

ನಿನ್ನೆ ಆಮ್ಲಜನಕ ಎಕ್ಸ್ ಪ್ರೆಸ್ ಮೂಲಕ ದೇಶಕ್ಕೆ ಸುಮಾರು 800 ಎಂ.ಟಿ.ಯಷ್ಟು ಎಲ್.ಎಂ.. ಒದಗಣೆಯಾಗಿದೆ.

ಇದುವರೆಗೆ 115 ಆಮ್ಲಜನಕ ಎಕ್ಸ್ ಪ್ರೆಸ್ ಗಳು ತಮ್ಮ ಯಾನವನ್ನು ಪೂರ್ಣಗೊಳಿಸಿವೆ ಮತ್ತು ವಿವಿಧ ರಾಜ್ಯಗಳಿಗೆ ಪರಿಹಾರವನ್ನು ತಂದಿವೆ.

ಕೋರಿಕೆ ಸಲ್ಲಿಸಿರುವ ರಾಜ್ಯಗಳಿಗೆ ಸಾಧ್ಯ ಇರುವ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಧ್ಯ ಇರುವಷ್ಟು ಪ್ರಮಾಣದಲ್ಲಿ ಎಲ್.ಎಂ..ವನ್ನು ಪೂರೈಕೆ ಮಾಡುವುದು ಭಾರತೀಯ ರೈಲ್ವೇಯ ಇರಾದೆಯಾಗಿದೆ.

ಪತ್ರಿಕಾ ಹೇಳಿಕೆಯವರೆಗಿನ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ 407 ಎಂ.ಟಿ.ಯಷ್ಟು ದ್ರವೀಕೃತ ಆಮ್ಲಜನಕವನ್ನು ಇಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ 361 ಎಂ.ಟಿ., ಹರ್ಯಾಣಾದಲ್ಲಿ 1135 ಎಂ.ಟಿ, ತೆಲಂಗಾಣದಲ್ಲಿ 188 ಎಂ.ಟಿ., ರಾಜಸ್ಥಾನದಲ್ಲಿ 72 ಎಂ.ಟಿ., ಕರ್ನಾಟಕದಲ್ಲಿ 120 ಎಂ.ಟಿ. ಮತ್ತು ದಿಲ್ಲಿಯಲ್ಲಿ 2748 ಎಂ.ಟಿ.ಗೂ ಅಧಿಕ ಪ್ರಮಾಣದ ದ್ರವೀಕೃತ ಆಮ್ಲಜನಕವನ್ನು  ಪೂರೈಸಲಾಗಿದೆ.

ತಮಿಳುನಾಡು ತನ್ನ ಮೊದಲ ಆಮ್ಲಜನಕ ಎಕ್ಸ್ ಪ್ರೆಸ್ ನ್ನು ಇಂದು ತಡರಾತ್ರಿ ಬರಮಾಡಿಕೊಳ್ಳಲಿದೆ. ದುರ್ಗಾಪುರದಿಂದ 80 ಎಂ.ಟಿ. ಯಷ್ಟು ಎಲ್.ಎಂ.. ತಮಿಳುನಾಡಿಗೆ ಬರಲಿದೆ.

ಆಮ್ಲಜನಕ ಎಕ್ಸ್ ಪ್ರೆಸ್ ಇದುವರೆಗೆ ಎನ್.ಸಿ.ಆರ್. ವಲಯಕ್ಕೆ ಮುಂದಿನ ವಿತರಣೆಗಾಗಿ 3900 ಎಂ.ಟಿ.ಯಷ್ಟು ದ್ರವೀಕೃತ ಎಲ್.ಎಂ..ವನ್ನು ಪ್ಪೂರೈಕೆ ಮಾಡಿದೆ.

ಹೊಸ ಆಮ್ಲಜನಕ ಎಕ್ಸ್ ಪ್ರೆಸ್ ಗಳನ್ನು ಓಡಿಸುವುದು ಬಹಳ ಚಲನಶೀಲತೆಯ ಕೆಲಸವಾಗಿದೆ. ಮತ್ತು ಅಂಕಿ ಅಂಶಗಳು ಎಲ್ಲಾ ಸಂದರ್ಭಗಳಲ್ಲಿಯು ಸಕಾಲಿಕಗೊಳ್ಳುತ್ತಿರುತ್ತವೆ. ಇನ್ನಷ್ಟು ಆಮ್ಲಜನಕ ತುಂಬಿದ ರೈಲುಗಳು ಇಂದು ರಾತ್ರಿ ತಮ್ಮ ಪ್ರಯಾಣ ಆರಂಭಿಸಲಿವೆ.

***



(Release ID: 1718419) Visitor Counter : 203