ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಶೇಕಡಾ 40ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಅಥವಾ ಲಿಖಿತ ಪರೀಕ್ಷೆ ತೆಗೆದುಕೊಳ್ಳುವಾಗ ಬರಹಗಾರ /ಪರಿಹಾರಾರ್ಥ ಸಮಯಾವಕಾಶ ಸೌಲಭ್ಯದ ಅಗತ್ಯವಿರುವಂತಹ ವೈದ್ಯಕೀಯ ಸ್ಥಿತಿಯನ್ನು ಹೊಂದಿರುವ ವ್ಯಕ್ತಿಗಳಿಗಾಗಿ ರೂಪಿಸಲಾದ ಕರಡು ಮಾರ್ಗಸೂಚಿಗಳ ಬಗ್ಗೆ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದ ವಿಕಲಚೇತನರ ಸಬಲೀಕರಣ ಇಲಾಖೆ (ಭಾರತ ಸರಕಾರ)

Posted On: 11 MAY 2021 2:45PM by PIB Bengaluru

ಭಾರತ ಸರಕಾರದ ವಿಕಲಚೇತನರ ಸಬಲೀಕರಣ ಇಲಾಖೆಯು 29.8.2018ರಂದು (ದಿನಾಂಕ 8.2.2.2019 ತಿದ್ದುಪಡಿಯೊಂದಿಗೆ ಓದಿಕೊಳ್ಳತಕ್ಕದ್ದು) ನಿಗದಿತ ಮಾನದಂಡದ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ (ಶೇ.40 ಅಥವಾ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯ) ಲಿಖಿತ ಪರೀಕ್ಷೆ ನಡೆಸಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯವು ಶ್ರೀ ವಿಕಾಸ್ ಕುಮಾರ್ ವರ್ಸಸ್ ಯುಪಿಎಸ್ಸಿ ಮತ್ತು ಇತರರ ಪ್ರಕರಣದಲ್ಲಿ ದಿನಾಂಕ 11.02.2021 ಆದೇಶದಲ್ಲಿ, ಶೇ. 40ಕ್ಕಿಂತ ಕಡಿಮೆ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳು ಅಥವಾ ಪರೀಕ್ಷೆಯನ್ನು ಖುದ್ದು ಬರೆಯಲು ಸಾಧ್ಯವಾಗದ ವೈದ್ಯಕೀಯ ಸ್ಥಿತಿಯಲ್ಲಿರುವಂಥವರಿಗೆ, ಪರೀಕ್ಷೆ ಬರೆಯಲು ಬರಹಗಾರರ ನೇಮಕಕ್ಕೆ ಅನುಮತಿಸುವ ಉದ್ದೇಶಕ್ಕಾಗಿ ಸಾರ್ವಜನಿಕ ಸಮಾಲೋಚನೆಯ ನಂತರ  ಮಾರ್ಗಸೂಚಿಗಳನ್ನು ರೂಪಿಸುವಂತೆ ಇಲಾಖೆಗೆ ನಿರ್ದೇಶನ ನೀಡಿದೆ.

ನಿಟ್ಟಿನಲ್ಲಿ ʼಡಿಇಪಿಡಬ್ಲ್ಯೂಡಿʼ ಕಾರ್ಯದರ್ಶಿ ನೇತೃತ್ವದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಇಲಾಖೆ ಕರಡು ಮಾರ್ಗಸೂಚಿಗಳನ್ನು ರೂಪಿಸಿದೆ. ಇವುಗಳು https://drive.google.com/file/d/11wUZoURvO4gTgb0S2KmHTz9Roe8vK1qY/view ನಲ್ಲಿ ಲಭ್ಯವಿದೆ. ಕರಡು ಮಾರ್ಗಸೂಚಿಗಳು, ಲಿಖಿತ ಪರೀಕ್ಷೆಯನ್ನು ತೆಗೆದುಕೊಳ್ಳುವಾಗ ಅಂತಹ ಅಭ್ಯರ್ಥಿಗಳಿಗೆ ಬರಹಗಾರ/ಪರಿಹಾರಾರ್ಥ ಸಮಯದ ಸೌಲಭ್ಯವನ್ನು ಪಡೆಯಲು ಮಾನದಂಡಗಳನ್ನು ಒದಗಿಸುತ್ತವೆ. ಬರಹಗಾರನ ಅಗತ್ಯವನ್ನು ಪ್ರಮಾಣೀಕರಿಸಲು ವೈದ್ಯಕೀಯ ಪ್ರಾಧಿಕಾರದ ಸಂಯೋಜನೆಯನ್ನೂ ಇದು ಒಳಗೊಂಡಿದೆ.

ಇಲಾಖೆಯು ಕರಡು ಮಾರ್ಗಸೂಚಿಗಳ ಬಗ್ಗೆ ಅದನ್ನು ಅಂತಿಮಗೊಳಿಸುವ ಮೊದಲು ಅಂದರೆ ಜೂನ್ 1, 2021 ಒಳಗಾಗಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು  ಆಹ್ವಾನಿಸಿದೆಪ್ರತಿಕ್ರಿಯೆಗಳನ್ನು kvs.rao13[at]nic[dot]inಗೆ ಇಮೇಲ್ ಮೂಲಕ ಕಳುಹಿಸಬೇಕು ಮತ್ತು ನಿರ್ದೇಶಕರು, ನೀತಿ ವಿಭಾಗ, ಡಿಇಪಿಡಬ್ಲ್ಯೂಡಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಸಚಿವಾಲಯ, ಭಾರತ ಸರಕಾರ ಇವರನ್ನು ಉದ್ದೇಶಿಸಿ ಬರೆಯಬೇಕು.

***



(Release ID: 1717724) Visitor Counter : 230