ರೈಲ್ವೇ ಸಚಿವಾಲಯ

ಒಂದೇ ದಿನ ದಾಖಲೆಯ 831 ಎಂಟಿ  ಎಲ್ ಎಂಒ ಸಾಗಣೆ ಮಾಡಿದ ಆಕ್ಸಿಜನ್ ಎಕ್ಸಪ್ರೆಸ್ 


ಮಹಾರಾಷ್ಟ್ರ, ಮಧ್ಯಪ್ರದೇಶ, ಹರಿಯಾಣ, ತೆಲಂಗಾಣ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶಕ್ಕೆ ಆಕ್ಸಿಜನ್ ಎಕ್ಸಪ್ರೆಸ್ ಮೂಲಕ 4700 ಎಂಟಿಗೂ ಅಧಿಕ ಆಮ್ಲಜನಕ ಪೂರೈಕೆ

ನಾನಾ ರಾಜ್ಯಗಳಿಗೆ 295ಕ್ಕೂ ಅಧಿಕ ಟ್ಯಾಂಕರ್  ಲೋಡ್ ಆಕ್ಸಿಜನ್ ಪೂರೈಕೆ

ಸಂಚಾರ ಪೂರ್ಣಗೊಳಿಸಿದ 75 ಆಕ್ಸಿಜನ್ ಎಕ್ಸಪ್ರೆಸ್ ರೈಲುಗಳು

120 ಎಂಟಿ ಆಮ್ಲಜನಕ ಹೊತ್ತ ಕರ್ನಾಟಕದ ಮೊದಲ ಆಕ್ಸಿಜನ್ ಎಕ್ಸಪ್ರೆಸ್ ರೈಲು ಬೆಂಗಳೂರಿನತ್ತ ಪ್ರಯಾಣ

ಈವರೆಗೆ ಮಹಾರಾಷ್ಟ್ರಕ್ಕೆ 293 ಎಂಟಿ, ಉತ್ತರ ಪ್ರದೇಶಕ್ಕೆ 1334 ಎಂಟಿ, ಮಧ್ಯಪ್ರದೇಶಕ್ಕೆ 306 ಎಂಟಿ, ಹರಿಯಾಣಕ್ಕೆ 598 ಎಂಟಿ, ತೆಲಂಗಾಣಕ್ಕೆ 123 ಎಂಟಿ, ರಾಜಸ್ಥಾನಕ್ಕೆ 40 ಎಂಟಿ ಮತ್ತು ದೆಹಲಿಗೆ 2011 ಎಂಟಿ ಆಮ್ಲಜನಕ ಪೂರೈಕೆ 

Posted On: 10 MAY 2021 5:08PM by PIB Bengaluru

ಭಾರತೀಯ ರೈಲ್ವೆ ಎಲ್ಲ ಅಡೆತಡೆಗಳನ್ನು ನಿವಾರಿಸಿ ಮತ್ತು ಹೊಸ ಪರಿಹಾರಗಳನ್ನು ಕಂಡುಕೊಂಡು, ದೇಶದ ನಾನಾ ರಾಜ್ಯಗಳಿಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ (ಎಲ್ ಎಂಒ) ಪೂರೈಕೆ ಮಾಡುವ ಮೂಲಕ ಪರಿಹಾರವನ್ನು ನೀಡುವ ತನ್ನ ಕಾರ್ಯವನ್ನು ಮುಂದುವರಿಸಿದೆ. ಈವರೆಗೆ ಭಾರತೀಯ ರೈಲ್ವೆ ದೇಶದ ನಾನಾ ರಾಜ್ಯಗಳಿಗೆ 295 ಕ್ಕೂ ಅಧಿಕ ಟ್ಯಾಂಕರ್ ಗಳ ಮೂಲಕ ಸುಮಾರು 4700 ಎಂಟಿಗೂ ಅಧಿಕ ಎಲ್ ಎಂಒ ಅನ್ನು ತಲುಪಿಸಿದೆ.

ನಿನ್ನೆ (ಭಾನುವಾರ) ಒಂದೇ ದಿನ ದಾಖಲೆಯ 831 ಎಂಟಿ ಎಲ್ ಎಂಒ ಅನ್ನು ಆಕ್ಸಿಜನ್ ಎಕ್ಸಪ್ರೆಸ್ ರೈಲುಗಳು ಸಾಗಾಣೆ ಮಾಡಿವೆ.

ಈವರೆಗೆ 75 ಆಕ್ಸಿಜನ್ ಎಕ್ಸಪ್ರೆಸ್ ರೈಲುಗಳು ಸಂಚಾರವನ್ನು ಪೂರ್ಣಗೊಳಿಸಿವೆ

ಮನವಿ ಮಾಡಿದ ರಾಜ್ಯಗಳಿಗೆ ಅತ್ಯಲ್ಪ ಸಮಯದಲ್ಲಿಯೇ ಎಷ್ಟು ಸಾಧ್ಯವೋ ಅಷ್ಟು ಎಲ್ ಎಂಒ ಅನ್ನು ಪೂರೈಕೆ ಮಾಡುವಲ್ಲಿ ಭಾರತೀಯ ರೈಲ್ವೆ ಪ್ರಯತ್ನವನ್ನು ಮಾಡುತ್ತಿದೆ.

ಪ್ರಕಟಣೆ ಹೊರಬೀಳುವ ವೇಳೆಗೆ, ಮಹಾರಾಷ್ಟ್ರಕ್ಕೆ 293 ಎಂಟಿ, ಉತ್ತರ ಪ್ರದೇಶಕ್ಕೆ 1334 ಎಂಟಿ, ಮಧ್ಯಪ್ರದೇಶಕ್ಕೆ 306 ಎಂಟಿ, ಹರಿಯಾಣಕ್ಕೆ 598 ಎಂಟಿ, ತೆಲಂಗಾಣಕ್ಕೆ 123 ಎಂಟಿ, ರಾಜಸ್ಥಾನಕ್ಕೆ 40 ಎಂಟಿ ಮತ್ತು ದೆಹಲಿಗೆ 2011 ಎಂಟಿ ಆಮ್ಲಜನಕವನ್ನು ಸರಬರಾಜು ಮಾಡಲಾಗಿದೆ

ಕರ್ನಾಟಕದ ಮೊದಲ ಆಕ್ಸಿಜನ್ ಎಕ್ಸಪ್ರೆಸ್ ರೈಲು ಜಾರ್ಖಂಡ್ ಟಾಟಾನಗರದಿಂದ ಪ್ರಯಾಣ ಆರಂಭಿಸಿದೆ ಮತ್ತು 120 ಎಂಟಿ ಆಮ್ಲಜನಕ ಹೊತ್ತ ರೈಲು  ಬೆಂಗಳೂರಿನತ್ತ ಸಾಗಿದೆ.

ಹೊಸದಾಗಿ ಆಮ್ಲಜನಕ ಸಾಗಾಣೆ ಮಾಡುವುದು ಕ್ಲಿಷ್ಟ ಪ್ರಕ್ರಿಯೆಯಾಗಿದೆ ಮತ್ತು ಅಂಕಿ ಅಂಶಗಳು ಸದಾ ಅಪ್ ಡೇಟ್ ಆಗುತ್ತಿರುತ್ತವೆ. ಇನ್ನೂ ಹಲವು ಆಕ್ಸಿಜನ್ ಎಕ್ಸ್ ಪ್ರೆಸ್ ರೈಲುಗಳು ಇಂದು ರಾತ್ರಿ ಪಯಣವನ್ನು ಆರಂಭಿಸುವ ಸಾಧ್ಯತೆ ಇದೆ.

***



(Release ID: 1717550) Visitor Counter : 221