ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ವರೆಗೆ ಭಾರತ ಸರ್ಕಾರದಿಂದ ಉಚಿತವಾಗಿ ಸುಮಾರು 18 ಕೋಟಿ ಡೋಸ್ ಲಸಿಕೆ ಪೂರೈಕೆ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಒಂದು ಕೋಟಿ ಡೋಸ್ ಗೂ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯ
ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 9 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆ ಸ್ವೀಕರಿಸಲಿರುವ ರಾಜ್ಯಗಳು. ಕೇಂದ್ರಾಡಳಿತ ಪ್ರದೇಶಗಳು
Posted On:
10 MAY 2021 10:42AM by PIB Bengaluru
ಕೋವಿಡ್ 19 ಸೋಂಕು ನಿಯಂತ್ರಣ ಮತ್ತು ನಿರ್ವಹಣೆ [ಪರೀಕ್ಷೆ, ಜಾಡು ಪತ್ತೆ, ಚಿಕಿತ್ಸೆ ಮತ್ತು ಕೋವಿಡ್ ಸೂಕ್ತ ವರ್ತನೆ] ಗೆ ಸರ್ಕಾರದ ಐದು ಅಂಶಗಳ ಕಾರ್ಯತಂತ್ರದಲ್ಲಿ ಲಸಿಕೆ ಅವಿಭಾಜ್ಯ ಅಂಗವಾಗಿದೆ. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಸೂಕ್ತ ಬೆಂಬಲ ನೀಡುತ್ತಿದ್ದು, ರಾಷ್ಟ್ರವ್ಯಾಪಿ ಉಚಿತ ಲಸಿಕೆಗಳನ್ನು ಪೂರೈಸುತ್ತಿದೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರ ಈವರೆಗೆ ಸುಮಾರು 18 ಕೋಟಿ ಡೋಸ್ ಲಸಿಕೆಗಳನ್ನು [17,93,57,860] ಉಚಿತವಾಗಿ ಒದಗಿಸಿದೆ. ನಷ್ಟವಾದ ಲಸಿಕೆ ಸೇರಿ ಈತನಕ 16.89,27,797 ಡೋಸ್ ಗಳು [ರಾತ್ರಿ 8 ಗಂಟೆವರೆಗೆ ದೊರೆತ ದತ್ತಾಂಶದ ಪ್ರಕಾರ] ಬಳಕೆಯಾಗಿವೆ.
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಬಳಿ ಒಂದು ಕೋಟಿ ಡೋಸ್ ಗೂ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯವಿದೆ. ಋಣಾತ್ಮಕ ಸಮತೋಲನ ಹೊಂದಿರುವ ರಾಜ್ಯಗಳು ಸಶಸ್ತ್ರ ಪಡೆಗಳಿಗೆ ಸರಬರಾಜು ಮಾಡಿದ ಲಸಿಕೆಯನ್ನು ಹೊಂದಾಣಿಕೆ ಮಾಡಿಕೊಳ್ಳದ ಕಾರಣ ಪೂರೈಸಿದ ಲಸಿಕೆಗಿಂತ ಹೆಚ್ಚಿನ ಬಳಕೆ [ವ್ಯರ್ಥವಾದದ್ದು ಸೇರಿ] ತೋರಿಸುತ್ತಿದೆ.
ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿಯಾಗಿ 9 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಗಳನ್ನು ರಾಜ್ಯಗಳು. ಕೇಂದ್ರಾಡಳಿತ ಪ್ರದೇಶಗಳು [9,24,910] ಸ್ವೀಕರಿಸಲಿವೆ.
(Release ID: 1717437)
Visitor Counter : 244
Read this release in:
Odia
,
English
,
Urdu
,
Hindi
,
Marathi
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam