ಹಣಕಾಸು ಸಚಿವಾಲಯ
17 ರಾಜ್ಯಗಳಿಗೆ ರೂ. 9,871 ಕೋಟಿ ಕಂದಾಯ ಕೊರತೆ ಅನುದಾನ ಬಿಡುಗಡೆ
ಕಳೆದ 2 ತಿಂಗಳುಗಳಲ್ಲಿ ಬಿಡುಗಡೆಯಾದ ಒಟ್ಟು ಕಂದಾಯ ಕೊರತೆ ಅನುದಾನ ರೂ.19,742 ಕೋಟಿ
प्रविष्टि तिथि:
06 MAY 2021 4:26PM by PIB Bengaluru
ವ್ಯಯ ಇಲಾಖೆ, ಹಣಕಾಸು ಸಚಿವಾಲಯ ಇಂದು 2021-22 ರ 2ನೇ ಮಾಸಿಕ ಕಂತಿನ ತೆರಿಗೆ ವರ್ಗಾವಣೆಯ ನಂತರದ ಆದಾಯ ಕೊರತೆ (ಪೋಸ್ಟ್ ಡಿವಲ್ಯೂಷನ್ ರೆವೆನ್ಯೂ ಡಿಫಿಸಿಟ್ - ಪಿಡಿಆರ್ ಡಿ) ಅನುದಾನವಾದ 9,871 ಕೋಟಿ ರೂಪಾಯಿಗಳನ್ನು 17 ರಾಜ್ಯಗಳಿಗೆ ಬಿಡುಗಡೆ ಮಾಡಿದೆ.
ಎರಡನೇ ಕಂತಿನ ಬಿಡುಗಡೆಯೊಂದಿಗೆ, ಒಟ್ಟು ಪ್ರಸಕ್ತ ಹಣಕಾಸು ವರ್ಷದ ಮೊದಲ ಎರಡು ತಿಂಗಳಲ್ಲಿ 19,742 ಕೋಟಿ ರೂ.ಗಳನ್ನು ರಾಜ್ಯಗಳಿಗೆ ತೆರಿಗೆ ವರ್ಗಾವಣೆಯ ನಂತರ ಆದಾಯ ಕೊರತೆಯ ಅನುದಾನವಾಗಿ ಬಿಡುಗಡೆ ಮಾಡಲಾಗಿದೆ. ಗುರುವಾರ ಬಿಡುಗಡೆಯಾದ ಅನುದಾನದ ರಾಜ್ಯವಾರು ವಿವರಗಳು ಮತ್ತು 2021-22ರಲ್ಲಿ ರಾಜ್ಯಗಳಿಗೆ ಬಿಡುಗಡೆಯಾದ ಪಿಡಿಆರ್ ಡಿ ಅನುದಾನದ ಒಟ್ಟು ಮೊತ್ತವನ್ನು ಕೊಡಲಾಗಿದೆ.
ಕೇಂದ್ರವು ಸಂವಿಧಾನದ 275 ನೇ ವಿಧಿ ಅನ್ವಯ ರಾಜ್ಯಗಳಿಗೆ ತೆರಿಗೆ ವರ್ಗಾವಣೆಯ ನಂತರ ಆದಾಯ ಕೊರತೆಯ ಅನುದಾನವನ್ನು ಒದಗಿಸುತ್ತದೆ. ವರ್ಗಾವಣೆಯ ನಂತರ ರಾಜ್ಯಗಳ ಕಂದಾಯ ಖಾತೆಗಳಲ್ಲಿನ ಅಂತರವನ್ನು ಪೂರೈಸಲು ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಮಾಸಿಕ ಕಂತುಗಳಲ್ಲಿ ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. 15 ನೇ ಹಣಕಾಸು ಆಯೋಗವು 17 ರಾಜ್ಯಗಳಿಗೆ ಪಿಡಿಆರ್.ಡಿ ಅನುದಾನವನ್ನು ಶಿಫಾರಸು ಮಾಡಿದೆ.
ತೆರಿಗೆ ವರ್ಗಾವಣೆಯ ನಂತರದ ಆದಾಯ ಕೊರತೆಯ ಅನುದಾನಕ್ಕಾಗಿ ಶಿಫಾರಸು ಮಾಡಲ್ಪಟ್ಟರಾಜ್ಯಗಳು: ಆಂಧ್ರಪ್ರದೇಶ, ಅಸ್ಸಾಂ, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ ಮತ್ತು ಪಶ್ಚಿಮ ಬಂಗಾಳ.
ಈ ಅನುದಾನವನ್ನು ಸ್ವೀಕರಿಸಲು ರಾಜ್ಯಗಳ ಅರ್ಹತೆ ಮತ್ತು ಅನುದಾನದ ಪ್ರಮಾಣವನ್ನು ಆಯೋಗವು ಆದಾಯದ ಮೌಲ್ಯಮಾಪನ ಮತ್ತು ರಾಜ್ಯದ ಖರ್ಚಿನ ನಡುವಿನ ಅಂತರವನ್ನು ಆಧರಿಸಿ ನಿರ್ಧರಿಸಿತು. 2021-22ರ ಆರ್ಥಿಕ ವರ್ಷಕ್ಕೆ ಮೌಲ್ಯಮಾಪನ ಹಂಚಿಕೆಯನ್ನು ಆಯೋಗವು ಗಣನೆಗೆ ತೆಗೆದುಕೊಂಡಿದೆ.
ಹದಿನೈದನೇ ಹಣಕಾಸು ಆಯೋಗವು ಒಟ್ಟು ತೆರಿಗೆ ವರ್ಗಾವಣೆಯ ನಂತರದ ಆದಾಯ ಕೊರತೆಯ ಅನುದಾನಕ್ಕಾಗಿ ಅನುದಾನವನ್ನು ರೂ. 2021-22ರ ಆರ್ಥಿಕ ವರ್ಷದಲ್ಲಿ 17 ರಾಜ್ಯಗಳಿಗೆ 1,18,452 ಕೋಟಿ ರೂ.ಗಳ ಅನುದಾನವನ್ನು 12 ಮಾಸಿಕ ಕಂತುಗಳಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ.
ರಾಜ್ಯವಾರು ತೆರಿಗೆ ವರ್ಗಾವಣೆಯ ನಂತರದ ಆದಾಯ ಕೊರತೆಯ ಅನುದಾನ ಬಿಡುಗಡೆಯ ವಿವರ
|
ಕ್ರಮ ಸಂಖ್ಯೆ
|
ರಾಜ್ಯದ ಹೆಸರು
|
ಮೇ 2021 ರಲ್ಲಿ ಬಿಡುಗಡೆ ಮಾಡಿದ ಮೊತ್ತ
(2ನೇ ಕಂತು)
(ರೂ. ಕೋಟಿಗಳಲ್ಲಿ)
|
2021-22ರಲ್ಲಿ ಬಿಡುಗಡೆ ಮಾಡಿದ ಒಟ್ಟು ಮೊತ್ತ
(ಏಪ್ರಿಲ್ + ಮೇ 2021)
(ರೂ. ಕೋಟಿಗಳಲ್ಲಿ)
|
|
1
|
ಆಂಧ್ರ ಪ್ರದೇಶ
|
1438.08
|
2876.16
|
|
2
|
ಅಸ್ಸಾಂ
|
531.33
|
1062.66
|
|
3
|
ಹರಿಯಾಣ
|
11.00
|
22
|
|
4
|
ಹಿಮಾಚಲ ಪ್ರದೇಶ
|
854.08
|
1708.16
|
|
5
|
ಕರ್ನಾಟಕ
|
135.92
|
271.84
|
|
6
|
ಕೇರಳ
|
1657.58
|
3315.16
|
|
7
|
ಮಣಿಪುರ
|
210.33
|
420.66
|
|
8
|
ಮೇಘಾಲಯ
|
106.58
|
213.16
|
|
9
|
ಮಿಜೋರಂ
|
149.17
|
298.34
|
|
10
|
ನಾಗಾಲ್ಯಾಂಡ್
|
379.75
|
759.5
|
|
11
|
ಪಂಜಾಬ್
|
840.08
|
1680.16
|
|
12
|
ರಾಜಸ್ಥಾನ್
|
823.17
|
1646.34
|
|
13
|
ಸಿಕ್ಕಿಂ
|
56.50
|
113
|
|
14
|
ತಮಿಳು ನಾಡು
|
183.67
|
367.34
|
|
15
|
ತ್ರಿಪುರ
|
378.83
|
757.66
|
|
16
|
ಉತ್ತರಾಖಂಡ
|
647.67
|
1295.34
|
|
17
|
ಪಶ್ಚಿಮ ಬಂಗಾಳ
|
1467.25
|
2934.5
|
|
|
ಒಟ್ಟು
|
9,871.00
|
19,742.00
|
****
(रिलीज़ आईडी: 1716645)
आगंतुक पटल : 280