ನಾಗರೀಕ ವಿಮಾನಯಾನ ಸಚಿವಾಲಯ

ದೃಷ್ಟಿಗೋಚರ ರೇಖೆ ಮೀರಿ [ಬಿ.ವಿ.ಎಲ್.ಒ.ಎಸ್] ಡ್ರೋನ್ ವಿಮಾನಗಳ ಪ್ರಾಯೋಗಿಕ ಹಾರಾಟಕ್ಕೆ ವಿನಾಯಿತಿ


20 ಸಂಸ್ಥೆಗಳಿಗೆ ಅನುಮತಿ

Posted On: 05 MAY 2021 11:41AM by PIB Bengaluru

ದೃಷ್ಟಿಗೋಚರ ರೇಖೆ ಮೀರಿ [ಬಿ.ವಿ.ಎಲ್..ಎಸ್] ಡ್ರೋನ್ ವಿಮಾನಗಳ ಪ್ರಾಯೋಗಿಕ ಹಾರಾಟ ನಡೆಸಲು ಮಾನವ ರಹಿತ ವಿಮಾನ ವ್ಯವಸ್ಥೆ [ಯು..ಎಸ್] ನಿಯಮಗಳು 2021 ರಿಂದ 20 ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ ಷರತ್ತುಬದ್ಧ ವಿನಾಯಿತಿ ನೀಡಿದೆ. ದೃಷ್ಟಿಗೋಚರ ರೇಖೆಯನ್ನು ಮೀರಿ [ಬಿ.ವಿ.ಎಲ್..ಎಸ್] ಡ್ರೋನ್ ಕಾರ್ಯಾಚರಣೆಗೆ ಸಂಬಂಧಿಸಿದ ನಂತರದ ಯುಎವಿ ನಿಯಮಗಳ ಪೂರಕ ಚೌಕಟ್ಟಿನ ಅಭಿವೃದ್ಧಿಗೆ ನೆರವಾಗುವ ದೃಷ್ಟಿಯಿಂದ ಇದಕ್ಕೆ ಪ್ರಾಥಮಿಕ ಅನುಮತಿ ನೀಡಲಾಗಿದೆ. ಭವಿಷ್ಯದಲ್ಲಿ ಡ್ರೋನ್ ಗಳ ಅನುಮತಿ ಮತ್ತು ಡ್ರೋನ್ ಗಳನ್ನು ಬಳಸುವ ಇತರೆ ಪ್ರಮುಖ ಅರ್ಜಿಗಳಿಗೆ ಚೌಕಟ್ಟು ರೂಪಿಸಲು ಬಿ.ವಿ.ಎಲ್..ಎಸ್ ಸಹಾಯ ಮಾಡುತ್ತದೆ.

ಡ್ರೋನ್ ಗಳ ಬಿ.ವಿ.ಎಲ್..ಎಸ್ ಹಾರಾಟ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಪ್ರಾಯೋಗಿಕ ಮೌಲ್ಯಮಾಪನ ಮತ್ತು ನಿಗಾ ಸಮಿತಿ [ಬೀಮ್] ರಚಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ. ಮೇಲೆ ತಿಳಿಸಿದ ಉದ್ದೇಶಕ್ಕಾಗಿ ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು [ಡಿ.ಜಿ.ಸಿ.] ಇಒಐ ನೋಟಿಸ್ (27046/70/2019 -ಎಇಡಿ-ಡಿಜಿಸಿಎ ದಿನಾಂಕ 13 ಮೇ 2019) ಅನ್ನು ನೀಡಿದ್ದಾರೆ. ಬೀಮ್ ಸಮಿತಿ 34 ಆಸಕ್ತರ ಅರ್ಜಿಗಳನ್ನು ಮೌಲ್ಯಮಾಪನ ಮಾಡಿದ್ದು, ಇದರಲ್ಲಿ 20 ಸಂಸ್ಥೆಗಳನ್ನು [ಆಯ್ಕೆ ಕೂಟ] ಆಯ್ಕೆ ಮಾಡಲಾಗಿದೆ

ವಿನಾಯಿತಿಗಳು ಇಒಐ ನೋಟಿಸ್ ನಲ್ಲಿ ತಿಳಿಸಲಾದ ಅವಶ್ಯತೆಗಳು ಮತ್ತು ಬೀಮ್ ಸಮಿತಿಯಿಂದ ನೀಡಲಾದ ನಿರ್ದೇಶನಗಳು/ ವಿನಾಯಿತಿಗಳು [ಅಥವಾ ಭವಿಷ್ಯದಲ್ಲಿ ನೀಡಲಾಗುವುದು] ಸಂಪೂರ್ಣ ಅನುಸರಣೆಗೆ ಒಳಪಟ್ಟಿರುತ್ತದೆ. ಷರತ್ತುಬದ್ಧ ಅನುಮತಿ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲು ಅದು ಮಾನ್ಯವಾಗಿರುತ್ತದೆ.

ಪ್ರಾಯೋಗಿಕ ಬಿ.ವಿ.ಎಲ್..ಎಸ್ ಡ್ರೋನ್ ಕಾರ್ಯಾಚರಣೆಗಳಿಗಾಗಿ ಆಯ್ಕೆಯಾದ ಪಟ್ಟಿ

  1. ಏರೋಸ್ಪೇಸ್ ಇಂಡಸ್ಟ್ರಿ ಡವಲಪ್ ಮೆಂಟ್ ಅಸೋಸಿಯೇಷನ್ ಆಫ್ ತಮಿಳುನಾಡು [ಎಐಡಿಎಟಿ]
  2. .ಎನ್.ಆರ್. ಕನ್ಸೋರ್ಷಿಯಮ್
  3. .ಎನ್.ಆರ್. ಕನ್ಸೋರ್ಷಿಯಮ್ ಬಿ
  4. ಅಸ್ಟೆರಿಯಾ ಏರೋಸ್ಪೇಷ್ ಪ್ರವೈಟ್ ಲಿಮಿಟೆಡ್
  5. ಆಟೋ ಮೈಕ್ರೋ ಯು..ಎಸ್ ಏರೋಟೆಕ್ ಪ್ರವೈಟ್ ಲಿಮಿಟೆಡ್
  6. ಸೆಂಟಿಲಿಯನ್ ನೆಟ್ ವರ್ಕ್ಸ್ ಪ್ರವೈಟ್ ಲಿಮಿಟೆಡ್
  7. ಕ್ಲಿಯರ್ ಸ್ಕೈ ಫ್ಲೈಟ್ ಕನ್ಸೋರ್ಷಿಯಮ್
  8. ದಕ್ಷ ಅನ್ ಮ್ಯಾನ್ಡ್ ಸಿಸ್ಟಮ್ಸ್ ಪ್ರವೈಟ್ ಲಿಮಿಟೆಡ್
  9. ದುಂಜೋ ಏರ್ ಕನ್ಸೋರ್ಷಿಯಮ್
  10. ಮರುತ್ ಡ್ರೋನ್ ಟೆಕ್ ಪ್ರವೈಟ್ ಲಿಮಿಟೆಡ್
  11. ಸಾಗರ್ ಡಿಫೆನ್ಸ್ ಇಂಜಿನಿಯರಿಂಗ್ ಪ್ರವೈಟ್ ಲಿಮಿಟೆಡ್
  12. ಸೌಬಿಕ ಕನ್ಸೋರ್ಷಿಯಮ್
  13. ಸ್ಕೈಲಾರ್ಕ್ ಡ್ರೋನ್ಸ್ ಅಂಡ್ ಸ್ವಿಗ್ಗಿ
  14. ಶಾಪ್ ಎಕ್ಸ್ ಒಮ್ನಿಪ್ರೆಸೆಂಟ್ ಕನ್ಸೋರ್ಷಿಯಮ್
  15. ಸ್ಪೈಸ್ ಜೆಟ್ ಲಿಮಿಟೆಡ್
  16. ಟೆರಾಡ್ರೋಣ್ ಕನ್ಸೋರ್ಷಿಯಮ್ ಬಿ
  17. ದಿ ಕನ್ಸೋರ್ಷಿಯಮ್
  18. ತ್ರೋಟ್ಲೆ ಏರೋಸ್ಪೇಸ್ ಸಿಸ್ಟಮ್ಸ್ ಪ್ರವೈಟ್ ಲಿಮಿಟೆಡ್
  19. ವ್ಯಾಲ್ಯು ಥಾಟ್ ಐಟಿ ಸಲುಷನ್ಸ್ ಪ್ರವೈಟ್ ಲಿಮಿಟೆಡ್
  20. ವರ್ಜಿನಿಯಾ ಟೆಕ್ ಇಂಡಿಯಾ

ಸಾರ್ವಜನಿಕ ಸೂಚನೆಗೆ ಲಿಂಕ್ ಮಾಡಿ

***



(Release ID: 1716285) Visitor Counter : 324