ಸಂಪುಟ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (III ನೇ ಹಂತ) ಅಡಿಯಲ್ಲಿ ಎನ್‌ಎಫ್‌ಎಸ್‌ಎ ಫಲಾನುಭವಿಗಳಿಗೆ 2021 ರ ಮೇ ಮತ್ತು ಜೂನ್ ತಿಂಗಳಲ್ಲಿ ಹೆಚ್ಚುವರಿ ಆಹಾರ ಧಾನ್ಯ ಹಂಚಿಕೆಗೆ ಸಂಪುಟದ ಅನುಮೋದನೆ

Posted On: 05 MAY 2021 12:12PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಕೆಳಗಿನ ತೀರ್ಮಾನಗಳಿಗೆ ಘಟನೋತ್ತರ ಅನುಮೋದನೆ ನೀಡಿದೆ:

  1. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ 3ನೇ ಹಂತದ ಅಡಿಯಲ್ಲಿ ಎನ್ಎಫ್ಎಸ್ (ಎಎವೈ ಮತ್ತು ಪಿಎಚ್ಹೆಚ್) ವ್ಯಾಪ್ತಿಗೆ ಒಳಪಡುವ 79.88 ಕೋಟಿ ಫಲಾನುಭವಿಗಳಿಗೆ 2021 ಮೇ, ಜೂನ್ ತಿಂಗಳಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳಿಗೆ ಹೆಚ್ಚುವರಿಯಾಗಿ  5 ಕೆಜಿ ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸಲಾಗುವುದು
  2. ಗೋಧಿ / ಅಕ್ಕಿಯನ್ನು ರಾಜ್ಯ / ಕೇಂದ್ರಾಡಳಿತ ಪ್ರದೆಶವಾರು ಹಂಚಿಕೆಯನ್ನು ಎನ್ಎಫ್ಎಸ್ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಹಂಚಿಕೆ ಅನುಪಾತದ ಆಧಾರದ ಮೇಲೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನಿರ್ಧರಿಸುತ್ತದೆ. ಅಲ್ಲದೆ, ಭಾಗಶಃ ಮತ್ತು ಸ್ಥಳೀಯ ಲಾಕ್ಡೌನ್ ಮತ್ತು ಮಳೆಗಾಲ, ಚಂಡಮಾರುತಗಳಂತಹ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಪ್ರತಿಕೂಲ ಪರಿಣಾಮ ಮತ್ತು ಕೋವಿಡ್-ಪ್ರೇರಿತ ನಿರ್ಬಂಧಗಳು ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆಯ ಅವಶ್ಯಕತೆಗಳಿಗೆ ಅನುಗುಣವಾಗಿ ಪಿಎಂಜಿಕೆಎ ಅಡಿಯಲ್ಲಿ ಎತ್ತುವಳಿ / ವಿತರಣಾ ಅವಧಿಯನ್ನು ವಿಸ್ತರಿಸುವ ಬಗ್ಗೆ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ನಿರ್ಧರಿಸಬಹುದು
  3. ಇದಕ್ಕಾಗಿ ಸುಮಾರು 80 ಲಕ್ಷ ಮೆಟ್ರಿಕ್ ಟನ್ ಆಹಾರ-ಧಾನ್ಯಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಟಿಪಿಡಿಎಸ್ ಅಡಿಯಲ್ಲಿ ಸುಮಾರು 79.88 ಕೋಟಿ ವ್ಯಕ್ತಿಗಳಿಗೆ ಹೆಚ್ಚುವರಿ ಆಹಾರ-ಧಾನ್ಯವನ್ನು ಎರಡು ತಿಂಗಳವರೆಗೆ ಅಂದರೆ 2021 ಮೇ ಮತ್ತು ಜೂನ್ ನಲ್ಲಿ ತಿಂಗಳಿಗೆ 5 ಕೆ.ಜಿ.ಯಂತೆ ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿ  36789.2/ ಮೆ.ಟನ್ ಅಕ್ಕಿ ಮತ್ತು  25731.4 / ಮೆ.ಟನ್. ಗೋಧಿಗೆ ಅಂದಾಜು ಆಹಾರ ಸಬ್ಸಿಡಿ 25332.92 ರೂ. ಅಂದಾಜು ಆರ್ಥಿಕ ವೆಚ್ಚ ತಗುಲಲಿದೆ.

ಹೆಚ್ಚುವರಿ ಹಂಚಿಕೆಯು ಕೊರೊನಾ ವೈರಸ್ನಿಂದ ಉಂಟಾಗುವ ಎದುರಿಸುತ್ತಿರುವ ಬಡವರ ಆರ್ಥಿಕ ಸಂಕಷ್ಟಗಳನ್ನು ನಿವಾರಿಸುತ್ತದೆ. ಮುಂದಿನ ಎರಡು ತಿಂಗಳಲ್ಲಿ ಯಾವುದೇ ಬಡ ಕುಟುಂಬವೂ ಆಹಾರ-ಧಾನ್ಯಗಳ ಅಲಭ್ಯತೆಯಿಂದ ತೊಂದರೆ ಅನುಭವಿಸುವುದಿಲ್ಲ.

***(Release ID: 1716232) Visitor Counter : 199