ಹಣಕಾಸು ಸಚಿವಾಲಯ

ಕಸ್ಟಮ್ಸ್ ಅಧಿಕಾರಿಗಳ ಮುಂದೆ 3000 ಆಮ್ಲಜನಕ ಸಾಂದ್ರಕಗಳ ರವಾನೆ ಬಾಕಿ ಇಲ್ಲ: ಹಣಕಾಸು ಸಚಿವಾಲಯ

प्रविष्टि तिथि: 03 MAY 2021 8:25PM by PIB Bengaluru

ಕಸ್ಟಮ್ಸ್ ಅಧಿಕಾರಿಗಳ ಮುಂದೆ 3000 ಆಮ್ಲಜನಕ ಸಾಂದ್ರಕಗಳ ರವಾನೆಗೆ ಸಂಬಂಧಿಸಿದ ವಿಷಯ ಗೌರವಾನ್ವಿತ ದೆಹಲಿ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿತ್ತು. ಸಧ್ಯಕ್ಕೆ ಅಂತಹ ಯಾವುದೇ ಸರಕು ಕಸ್ಟಮ್ಸ್ ಅಧಿಕಾರಿಗಳ ಮುಂದೆ ಬಾಕಿ ಇಲ್ಲ ಎಂದು ಸರ್ಕಾರಿ ವಕೀಲರು ಸ್ಪಷ್ಟಪಡಿಸಿದರು.

ಆದರೆ 3000 ಆಮ್ಲಜನಕ ಸಾಂದ್ರಕಗಳು ಕಸ್ಟಮ್ಸ್ ಬಳಿ ಇವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರವಾಹದಂತೆ ಹರಿದಾಡುತ್ತಿತ್ತು. ನಾವು ಮತ್ತೆ ತಮ್ಮ ಕ್ಷೇತ್ರೀಯ ವ್ಯವಸ್ಥೆ ಮೂಲಕ ಇದನ್ನು ಪರಿಶೀಲಿಸಿದ್ದೇವೆ ಮತ್ತು ಕಸ್ಟಮ್ಸ್ ನಲ್ಲಿ ಅಂತಹ ಯಾವುದೇ ಸರಕು ಇಲ್ಲ. ಟ್ವಿಟ್ಟರ್ ನಲ್ಲಿ ಇದರ ಕುರಿತಾದ ಛಾಯಾಚಿತ್ರವನ್ನು ಸಹ ಹಾಕಲಾಗಿದೆ. ಅದು ಎಲ್ಲಿದೆ ಎಂಬ ಕುರಿತು ಯಾರಾದರು ಮಾಹಿತಿ ಹೊಂದಿದ್ದರೆ ಅದನ್ನು ನಮಗೆ ತಿಳಿಸಬಹುದು ಮತ್ತು ತಕ್ಷಣ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ..

***


(रिलीज़ आईडी: 1715793) आगंतुक पटल : 268
इस विज्ञप्ति को इन भाषाओं में पढ़ें: English , Urdu , हिन्दी , Manipuri , Punjabi , Telugu