ರೈಲ್ವೇ ಸಚಿವಾಲಯ

ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯ ನಂತರ ಆಕ್ಸಿಜನ್ ಎಕ್ಸ್ ಪ್ರೆಸ್ ಕಾರ್ಯಾಚರಣೆಗಳು ಹರಿಯಾಣ ಮತ್ತು ತೆಲಂಗಾಣಕ್ಕೆ ವಿಸ್ತರಿಸಲಾಗಿದೆ


ಮುಂದಿನ 24 ಗಂಟೆಗಳಲ್ಲಿ ಭಾರತೀಯ ರೈಲ್ವೆಯು  ಸಾಗಿಸುವ  ಒಟ್ಟು ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ದ ಪ್ರಮಾಣ  ಸುಮಾರು 640 ಮೆ.ಟನ್ ನಷ್ಟು ತಲುಪುತ್ತದೆ

ಉತ್ತರ ಪ್ರದೇಶ ತನ್ನ 5 ನೇ ಆಕ್ಸಿಜನ್ ಎಕ್ಸ್ ಪ್ರೆಸ್ ಅನ್ನು 76 ಮೆಟ್ರಿಕ್ ಟನ್ ಗಿಂತ ಹೆಚ್ಚು  ಎಲ್ಎಂಒ ಪಡೆದಿದೆ ಹಾಗೂ  6ನೆಯದನ್ನು ಪಡೆಯಲಿದೆ

ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್ ಪ್ರೆಸ್ ಕಾರ್ಯಾಚರಣೆಗಳು ರಾಜ್ಯಗಳಿಗೆ ಪರಿಹಾರವನ್ನು ತರುತ್ತಿವೆ

Posted On: 29 APR 2021 4:16PM by PIB Bengaluru

ಭಾರತೀಯ ರೈಲ್ವೆಯ ಆಕ್ಸಿಜನ್ ಎಕ್ಸ್ ಪ್ರೆಸ್ ಕಾರ್ಯಾಚರಣೆಗಳು ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ದೆಹಲಿಯ ನಂತರ ಹರಿಯಾಣ ಮತ್ತು ತೆಲಂಗಾಣ ರಾಜ್ಯಗಳಿಗೆ ವಿಸ್ತರಿಸಿದ್ದರಿಂದ ರಾಜ್ಯಗಳಿಗೆ ಪರಿಹಾರವನ್ನು ನೀಡುತ್ತಲೇ ಬಂದಿವೆ.

ಕಾರ್ಯಾಚರಣೆಯನ್ನು ಮುಂದುವರಿಸುತ್ತಾ, ದ್ರವ ಆಮ್ಲಜನಕವನ್ನು ಹೊತ್ತೊಯ್ಯುವ ಅಥವಾ ಲೋಡಿಂಗ್  ಸ್ಥಾವರಗಳಿಗೆ ಹೋಗುವ ದಾರಿಯಲ್ಲಿ ಇನ್ನೂ ಮೂರು ರೈಲುಗಳಿವೆಮುಂದಿನ 24 ಗಂಟೆಗಳಲ್ಲಿ ಭಾರತೀಯ ರೈಲ್ವೆ ಸಾಗಿಸುವ  ಒಟ್ಟು  ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಸುಮಾರು 640 ಮೆ.ಟನ್ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.

ಉತ್ತರ ಪ್ರದೇಶವು  5 ಟ್ಯಾಂಕರ್ಗಳಲ್ಲಿ ತನ್ನ  76.29 ಮೆ.ಟನ್ ದ್ರವ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಇರುವ ಆಕ್ಸಿಜನ್ ಎಕ್ಸ್ ಪ್ರೆಸ್ ನಂ. 5ಅನ್ನು  ಇಂದು ಪಡೆದಿದೆಒಂದು ಟ್ಯಾಂಕರ್ ಅನ್ನು ವಾರಾಣಸಿಯಲ್ಲಿ ಇಳಿಸಲಾಗಿದ್ದು, ಉಳಿದ 4 ಟ್ಯಾಂಕರ್ ಗಳನ್ನು ಲಕ್ನೋದಲ್ಲಿ  ಇಳಿಸಲಾಗಿದೆ. ರೈಲು ಸಂಖ್ಯೆ. 6 ಈಗಾಗಲೇ ಲಕ್ನೋಗೆ ಹೋಗುವ ಹಾದಿಯಲ್ಲಿದೆ ಮತ್ತು ನಾಳೆ ಅಂದರೆ 30 ಏಪ್ರಿಲ್ 2021 ರಂದು 4 ಟ್ಯಾಂಕರ್ಗಳಲ್ಲಿ 33.18 ಮೆ.ಟನ್ ಎಲ್ಎಂಒ ಕೊಂಡೊಯ್ಯುವ ನಿರೀಕ್ಷೆಯಿದೆ. ಮುಂದಿನ  ಆಮ್ಲಜನಕ ಟ್ಯಾಂಕರ್ ಗಳನ್ನು ತರಲು ಮತ್ತೊಂದು ಖಾಲಿ ರೇಕ್ ಇಂದು ಲಕ್ನೋದಿಂದ ಹೊರಡುವ ನಿರೀಕ್ಷೆಯಿದೆ.

ಎರಡು ಟ್ಯಾಂಕರ್ ಗಳನ್ನು ಹೊಂದಿರುವ ರೈಲು ಇಂದು ಅಂಗುಲ್ (ಒರಿಸ್ಸಾ) ದಿಂದ ಹೊರಡುವ ನಿರೀಕ್ಷೆಯಿರುವುದರಿಂದ ಹರಿಯಾಣ ತನ್ನ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ಅನ್ನು ಸ್ವೀಕರಿಸಲಿದೆ.  ಫರಿದಾಬಾದ್ನಿಂದ ರೂರ್ಕೆಲಾಕ್ಕೆ ಖಾಲಿ  ರೇಕ್ ಕೂಡ ಸಾಗುತ್ತಿದೆ ಮತ್ತು ಇಂದು ರಾತ್ರಿ ತಲುಪುವ ನಿರೀಕ್ಷೆಯಿದೆ. ಹರಿಯಾಣಕ್ಕೆ ಆಕ್ಸಿಜನ್ ರೈಲುಗಳ ನಿರಂತರ ಹರಿವು ರಾಜ್ಯದ ಕೋವಿಡ್ -19 ರೋಗಿಗಳಿಗೆ ಆಮ್ಲಜನಕವನ್ನು ಮರುಪೂರಣ ಮಾಡುವುದನ್ನು ಖಚಿತಪಡಿಸುತ್ತದೆ.

ತೆಲಂಗಾಣ ಸರ್ಕಾರ ಆಕ್ಸಿಜನ್ ಎಕ್ಸ್ ಪ್ರೆಸ್ ಗಾಗಿ ಭಾರತೀಯ ರೈಲ್ವೆಯನ್ನು ಕೇಳಿಕೊಂಡಿದೆಸಿಕಂದರಾಬಾದ್ ನಿಂದ ಅಂಗುಲ್ ಗೆ 5 ಖಾಲಿ ಟ್ಯಾಂಕರ್ ಗಳೊಂದಿಗೆ ಖಾಲಿ ರೇಕ್ ಸಾಗುತ್ತಿದ್ದು, ನಾಳೆ ಅಂಗುಲ್ ತಲುಪುವ ನಿರೀಕ್ಷೆಯಿದೆ.

ಅಗತ್ಯವಿರುವ ಎಲ್ಲಾ ರಾಜ್ಯಗಳಿಗೆ ಆಮ್ಲಜನಕ ಸಾರಿಗೆ ಸೇವೆಗಳನ್ನು ಒದಗಿಸಲು ರೈಲ್ವೆಯು ಸಂಪೂರ್ಣ ಸಿದ್ಧತೆಯಲ್ಲಿದೆ. ಪ್ರಸ್ತುತ ಕಾರ್ಯಾಚರಣೆಯಲ್ಲಿ, ರಾಜ್ಯಗಳು ರೈಲ್ವೆಗೆ ಟ್ಯಾಂಕರ್-ಗಳನ್ನು ಒದಗಿಸುತ್ತವೆ. ರೈಲ್ವೆಯು ನಂತರ ಸಿಗುವ ಸ್ಥಳದಿಂದ ಆಮ್ಲಜನಕವನ್ನು ತರಲು ವೇಗವಾಗಿ ಕಾರ್ಯಸಾಧ್ಯವಾದ ಕ್ರಮದಲ್ಲಿ ಮುಂದುವರಿಯುತ್ತದೆ ಮತ್ತು ಅದನ್ನು ಅಗತ್ಯವಿರುವ ರಾಜ್ಯಕ್ಕೆ ತಲುಪಿಸುತ್ತದೆ. ಆಮ್ಲಜನಕದ ನಿಯೋಜನೆ ಮತ್ತು ಬಳಕೆಯನ್ನು ರಾಜ್ಯ ಸರ್ಕಾರ ಮಾಡುತ್ತದೆ.

ದ್ರವ ಆಮ್ಲಜನಕವು ಕ್ರಯೋಜೆನಿಕ್ ಸರಕು ಆಗಿರುವುದರಿಂದ ಅದನ್ನು ಸಾಗಿಸಬಹುದಾದ ಗರಿಷ್ಠ ವೇಗ, ಗರಿಷ್ಠ ವೇಗವರ್ಧನೆ ಮತ್ತು ಇಳಿಕೆ ಮತ್ತು ದ್ರವ ಆಮ್ಲಜನಕ ಟ್ಯಾಂಕರ್ಗಳ ಲಭ್ಯತೆ ಮತ್ತು ಲೋಡ್ ರಾಂಪ್ಗಳಂತಹ ಲೋಡಿಂಗ್ ನಿರ್ಬಂಧಗಳು ಮುಂತಾದ ಹಲವು ಮಿತಿಗಳನ್ನು ಹೊಂದಿದೆ. ರೋಡ್ ಮ್ಯಾಪಿಂಗ್ ಸಹ  (ವಿವಿಧ RUB ಗಳು ಮತ್ತು FOB ಗಳ ಕಾರಣ) ಮಾರ್ಗದಲ್ಲಿ ಲಭ್ಯವಿರುವ ಗರಿಷ್ಠ  ಅನುಕೂಲಗಳನ್ನು ನೋಡಿಕೊಳ್ಳುತ್ತದೆ.

***


(Release ID: 1714896) Visitor Counter : 245