ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರ: ಪ್ರಯಾಣಿಕರ ವಾಹನಗಳ ಮರು ನೋಂದಣಿ ನಿಯಮಗಳ ಸರಳೀಕರಣ


ಐದು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ರಕ್ಷಣಾ ಸಿಬ್ಬಂದಿ, ಕೇಂದ್ರ/ರಾಜ್ಯ ಸರ್ಕಾರಿ ನೌಕರರು, ಕೇಂದ್ರದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು ಮತ್ತು ಖಾಸಗಿ ವಲಯದ ಕಂಪೆನಿಗಳಿಗೆ ಪ್ರಾಯೋಗಿಕ ಮಾದರಿಯಲ್ಲಿ ನೋಂದಣಿಯ ಹೊಸ ವ್ಯವಸ್ಥೆ ಲಭ್ಯ

Posted On: 28 APR 2021 7:37PM by PIB Bengaluru

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳುವವರಿಗೆ ತಮ್ಮ ವಾಹನಗಳನ್ನು ಮರು ನೋಂದಾಯಿಸಲು ಸುಲಭ ಮಾಡಿಕೊಡುವ ಉದ್ದೇಶದಿಂದ ಕೇಂದ್ರ ಭೂ ಸಾರಿಗೆ ಸಚಿವಾಲಯ ಕರಡು ನಿಯಮಗಳನ್ನು ಹೊರಡಿಸಿದೆ. ಹಲವಾರು ಜನ ಕೇಂದ್ರೀತ ಕ್ರಮಗಳು ಮತ್ತು ವಾಹನ ನೋಂದಣಿಗೆ ಐಟಿ ಆಧರಿತ ಪರಿಹಾರದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ವಾಹನ ನೋಂದಣಿ ಪ್ರಕ್ರಿಯೆಯಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ವಾಹನಗಳನ್ನು ಮರು ನೋಂದಾಯಿಸುವುದು ಇನ್ನೂ ಗಮನಹರಿಸಬೇಕಾದ ವಲಯವಾಗಿದೆ.

ಖಾಸಗಿ ಮತ್ತು ಸರ್ಕಾರಿ ವಲಯದ ಉದ್ಯೋಗಿಗಳು ಸ್ಥಳಾಂತರಗೊಂಡಾಗ ಸಮಸ್ಯೆ ಎದುರಾಗುತ್ತದೆ. ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್ 47 ಪ್ರಕಾರ ಮಾತೃ ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನೋಂದಣಿಯನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ನೌಕರರಲ್ಲಿ ಅಹಿತಕರ ಭಾವನೆಗಳಿದ್ದವು. ಆದರೆ ಒಬ್ಬ ವ್ಯಕ್ತಿ 12 ತಿಂಗಳ ಕಾಲ ವಾಹನವನ್ನು ಹಳೆಯ ನೋಂದಣಿ ಸಂಖ್ಯೆಯಲ್ಲೇ ಮುಂದುವರೆಸಬಹುದು. ವಾಹನವನ್ನು ಮೂಲತಃ ನೋಂದಾಯಿಸಿದ ರಾಜ್ಯವನ್ನು ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಹೊಸ ರಾಜ್ಯ ನೋಂದಣಿ ಪ್ರಾಧಿಕಾರದೊಂದಿಗೆ 12 ತಿಂಗಳ ಒಳಗಾಗಿ ಮರು ನೋಂದಣಿ ಮಾಡಿಸಬೇಕಾಗಿದೆ.

ಪ್ರಯಾಣಿಕ ವಾಹನ ಬಳಕೆದಾರರು ತಮ್ಮ ವಾಹನಗಳನ್ನು ಮರು ನೋಂದಣಿ ಮಾಡಿಸಲು ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಬೇಕು

(i) ಮತ್ತೊಂದು ರಾಜ್ಯದಲ್ಲಿ ಮರು ನೋಂದಣಿ ಮಾಡಬೇಕಿದ್ದರೆ ಮಾತೃ ರಾಜ್ಯದಿಂದ ನಿರಪೇಕ್ಷಣಾ ಪತ್ರ ತರಬೇಕು.

(ii) ಹೊಸ ರಾಜ್ಯದಲ್ಲಿ ಪ್ರೊ-ರಾಟ ಆಧಾರದಲ್ಲಿ ರಸ್ತೆ ತೆರಿಗೆ ಪಾವತಿಸಿದ ನಂತರ ಹೊಸ ನೋಂದಣಿಗೆ ಅವಕಾಶ

(ii) ಪ್ರೊ-ರಾಟ ಆಧಾರದಲ್ಲಿ ಮೂಲ ರಾಜ್ಯದಲ್ಲಿ ರಸ್ತೆ ತೆರಿಗೆ ರೀಫಂಡ್ ಗಾಗಿ ಅರ್ಜಿ ಸಲ್ಲಿಸಬೇಕು

ಪ್ರೊ-ರಾಟ ಆಧಾರದಲ್ಲಿ ಮೂಲ ರಾಜ್ಯದಲ್ಲಿ ರೀಫಂಡ್ ಪಡೆಯುವ ಪ್ರಕ್ರಿಯೆ ತುಂಬಾ ತೊಡಕಿನದ್ದಾಗಿದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಇದು ಬದಲಾಗುತ್ತಿರುತ್ತದೆ.

ಹಿನ್ನೆಲೆಯಲ್ಲಿ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವಾಹನಗಳ ನೋಂದಣಿಗೆ ಹೊಸ ವ್ಯವಸ್ಥೆಯನ್ನು ಪ್ರಸ್ತಾಪಿಸಿದ್ದು, ಇದರಲ್ಲಿ ಹಂಚಿಕೆಯನ್ನು ಐಎನ್ಸರಣಿ ಎಂದು ಗುರುತಿಸಲಾಗುತ್ತಿದೆ, ಇದು ಪ್ರಾಯೋಗಿಕ ಮಾದರಿಯಲ್ಲಿದೆ. ರಾಜ್ಯಗಳಲ್ಲಿ ರಕ್ಷಣಾ ಸಿಬ್ಬಂದಿ, ಕೇಂದ್ರ/ರಾಜ್ಯ ಸರ್ಕಾರಿ ನೌಕರರು, ಕೇಂದ್ರದ ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳು ಮತ್ತು ಖಾಸಗಿ ವಲಯದ ಕಂಪೆನಿಗಳು, ಸಂಘಟನೆಗಳಿಗೆ ಪ್ರಾಯೋಗಿಕ ಮಾದರಿಯಲ್ಲಿ ನೋಂದಣಿಯ ಹೊಸ ಐಎನ್ ಸರಣಿವ್ಯವಸ್ಥೆ ಲಭ್ಯವಿದೆ.

ಮೋಟಾರು ವಾಹನ ತೆರಿಗೆ ಎರಡು ವರ್ಷಗಳವರೆಗೆ ಅಥವಾ ಎರಡರಲ್ಲಿ ಬಹು ಹಂತಗಳಲ್ಲಿರುವುದು ವಿಶೇಷ. ಯೋಜನೆಯೂ ಹೊಸ ರಾಜ್ಯಕ್ಕೆ ಸ್ಥಳಾಂತರಗೊಂಡ ನಂತರ ಭಾರತದ ಯಾವುದೇ ರಾಜ್ಯಗಳಲ್ಲಿ ವೈಯಕ್ತಿಕ ವಾಹನಗಳ ಉಚಿತ ಸಂಚಾರಕ್ಕೆ ಇದು ಅನುಕೂಲ ಮಾಡಿಕೊಡುತ್ತದೆ.

ಕರಡು ನಿಯಮಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಜನತೆ ಅಧಿಸೂಚನೆ ಜಾರಿಯಾದ 30 ದಿನಗಳ ಒಳಗಾಗಿ ತಮ್ಮ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದಾಗಿದೆ.

***



(Release ID: 1714891) Visitor Counter : 162