ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

15 ಕೋಟಿಗೂ ಹೆಚ್ಚು ಲಸಿಕಾ ವ್ಯಾಪ್ತಿಯೊಂದಿಗೆ ಭಾರತ ಮಹತ್ವದ ಹೆಗ್ಗುರುತನ್ನು ದಾಟಿದೆ


ಕಳೆದ 24 ಗಂಟೆಗಳಲ್ಲಿ 21 ಲಕ್ಷಕ್ಕೂ ಹೆಚ್ಚು ಡೋಸ್‌ಗಳನ್ನು ನೀಡಲಾಗಿದೆ

ಕಳೆದ 24 ಗಂಟೆಗಳಲ್ಲಿ 2.69 ಲಕ್ಷಕ್ಕೂ ಹೆಚ್ಚು ಚೇತರಿಕೆ ಪ್ರಕರಣಗಳು ವರದಿಯಾಗಿವೆ

ಸೋಂಕಿತರ ಸಾವಿನ ದರ ಮತ್ತಷ್ಟು ಕುಸಿದು, ಶೇ.1.11ಕ್ಕೆ ತಲುಪಿದೆ

ಆರು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವು ವರದಿಯಾಗಿಲ್ಲ

Posted On: 29 APR 2021 10:46AM by PIB Bengaluru

ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಇಂದು ಮಹತ್ವದ ಹೆಗ್ಗುರುತನ್ನು ದಾಟಿದೆ. ದೇಶದಲ್ಲಿ ನೀಡಲಾದ ಕೋವಿಡ್=19 ಲಸಿಕೆ ಡೋಸ್‌ಗಳ  ಒಟ್ಟು ಸಂಖ್ಯೆ  15  ಕೋಟಿ ದಾಟಿದೆ.

ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ, ಒಟ್ಟಾರೆಯಾಗಿ 22,07,065 ಸೆಷನ್‌ಗಳ ಮೂಲಕ 15,00,20,648 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. 1ನೇ ಡೋಸ್ ತೆಗೆದುಕೊಂಡ 93,67,520  ಆರೋಗ್ಯ ಕಾರ್ಯಕರ್ತರು (ಎಚ್‌ಸಿಡಬ್ಲ್ಯೂ) ಮತ್ತು 2ನೇ ಡೋಸ್ ತೆಗೆದುಕೊಂಡ  61,47,918  ಆರೋಗ್ಯ ಕಾರ್ಯಕರ್ತರು; 1ನೇ ಡೋಸ್‌ ಪಡೆದ  1,23,19,903  ಫ್ರಂಟ್‌ಲೈನ್‌ ವರ್ಕರ್‌ಗಳು (ಎಲ್‌ಡಬ್ಲ್ಯೂ) ಮತ್ತು  2ನೇ ಡೋಸ್‌ ಪಡೆದ 66,12,789  ಫ್ರಂಟ್‌ ಲೈನ್‌ ವರ್ಕರ್‌ಗಳು; 1ನೇ ಡೋಸ್‌ ಪಡೆದ 60 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ 5,14,99,834  ಫಲಾನುಭವಿಗಳು ಮತ್ತು  2ನೇ ಡೋಸ್ ಪಡೆದ 60 ವರ್ಷಕ್ಕಿಂತ ಮೇಲ್ಪಟ್ಟ 98,92,60 ಫಲಾನುಭವಿಗಳು, 1ನೇ ಡೋಸ್‌ ಪಡೆದ 5,10,24,886  ಮಂದಿ 45 ರಿಂದ 60  ವಯೋಮಾನದ ಫಲಾನುಭವಿಗಳು ಮತ್ತು 2ನೇ ಡೋಸ್‌ ಪಡೆದ  31,55,418  ಮಂದಿ 45 ರಿಂದ 60  ವಯೋಮಾನದ ಫಲಾನುಭವಿಗಳು ಇದರಲ್ಲಿ ಸೇರಿದ್ದಾರೆ.  

ಆರೋಗ್ಯ ಕಾರ್ಯಕರ್ತರು

ಫ್ರಂಟ್‌ ಲೈನ್‌ ವರ್ಕರ್‌ಗಳು

45 ರಿಂದ 60 ವರ್ಷ ವಯೋಮಾನದವರು

60 ವರ್ಷ ಮೇಲ್ಪಟ್ಟ ವಯೋಮಾನದವರು

 

ಒಟ್ಟು

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

93,67,520

61,47,918

1,23,19,903

66,12,789

5,10,24,886

31,55,418

5,14,99,834

98,92,380

15,00,20,648

 

ದೇಶದಲ್ಲಿ ನೀಡಲಾದ ಒಟ್ಟು ಡೋಸ್‌ಗಳಲ್ಲಿ ಹತ್ತು ರಾಜ್ಯಗಳ ಪಾಲು 67.18%.

ಕಳೆದ 24 ಗಂಟೆಗಳಲ್ಲಿ 21 ಲಕ್ಷಕ್ಕೂ ಅಧಿಕ ಲಸಿಕೆ ಡೋಸ್ಗಳನ್ನು ನೀಡಲಾಗಿದೆ.

ಲಸಿಕಾ ಅಭಿಯಾನದ 103ನೇ ದಿನದಂದು (28 ಏಪ್ರಿಲ್, 2021) 21,93,281 ಲಸಿಕೆ ಡೋಸ್‌ಗಳನ್ನು ನೀಡಲಾಯಿತು. 20,944 ಸೆಷನ್‌ಗಳಲ್ಲಿ 12,82,135 ಫಲಾನುಭವಿಗಳಿಗೆ 1ನೇ ಡೋಸ್‌ ಲಸಿಕೆ ಮತ್ತು 9,11,146 ಫಲಾನುಭವಿಗಳಿಗೆ 2ನೇ ಡೋಸ್‌ ಲಸಿಕೆಯನ್ನು ನೀಡಲಾಗಿದೆ.

 

ದಿನಾಂಕ: 28 ಏಪ್ರಿಲ್  2021  (ದಿನ-103)

ಆರೋಗ್ಯ ಕಾರ್ಯಕರ್ತರು

ಫ್ರಂಟ್‌ ಲೈನ್‌ ವರ್ಕರ್‌ಗಳು

45 ರಿಂದ 60 ವರ್ಷ ವಯೋಮಾನದವರು

60 ವರ್ಷ ಮೇಲ್ಪಟ್ಟ ವಯೋಮಾನದವರು

ಒಟ್ಟು ಸಾಧನೆ

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

1ನೇ ಡೋಸ್

2ನೇ ಡೋಸ್

19,745

41,681

97,928

86,411

7,50,305

2,27,966

4,14,157

5,55,088

12,82,135

9,11,146

 

ಇಂದು ಭಾರತದ ಒಟ್ಟು ಚೇತರಿಕೆ ಪ್ರಕರಣಗಳು 1,50,86,878 ರಷ್ಟಿವೆ. ರಾಷ್ಟ್ರೀಯ ಚೇತರಿಕೆ ದರ  82. 10% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ2,69,507  ಚೇತರಿಕೆ ಪ್ರಕರಣಗಳು ದಾಖಲಾಗಿವೆ.

ಹೊಸ ಚೇತರಿಕೆಗಳ ಪ್ರಮಾಣದಲ್ಲಿ ಹತ್ತು ರಾಜ್ಯಗಳ ಒಟ್ಟು ಪಾಲು 78. 07%  

ಕಳೆದ 24 ಗಂಟೆಗಳಲ್ಲಿ 3,79,257 ಹೊಸ ಪ್ರಕರಣಗಳು ದಾಖಲಾಗಿವೆ.

ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ತಮಿಳುನಾಡು,  ಆಂಧ್ರಪ್ರದೇಶ  ಮತ್ತು ರಾಜಸ್ಥಾನ ಸೇರಿದಂತೆ ಹತ್ತು ರಾಜ್ಯಗಳಲ್ಲಿ 72. 20%  ಹೊಸ ಪ್ರಕರಣಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಅತ್ಯಧಿಕ ದೈನಂದಿನ ಹೊಸ ಪ್ರಕರಣಗಳು - 63,309 ಪ್ರಕರಣಗಳು ವರದಿಯಾಗಿವೆ. ಇದರ ಬಳಿಕ 39,047 ಪ್ರಕರಣಗಳೊಂದಿಗೆ ಕರ್ನಾಟಕವು ಎರಡನೇ ಸ್ಥಾನದಲ್ಲಿದ್ದರೆ,  35,013 ಹೊಸ ಪ್ರಕರಣಗಳೊಂದಿಗೆ ಕೇರಳ ಆ ನಂತರದ ಸ್ಥಾನದಲ್ಲಿದೆ.

ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆ 30,84,814ಕ್ಕೆ ತಲುಪಿದೆ. ಈ ಪ್ರಮಾಣವು ಪ್ರಸ್ತುತ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ16.79% ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಹೊರೆಯಲ್ಲಿ ನಿವ್ವಳ 1,06,105 ಪ್ರಕರಣಗಳ ಇಳಿಕೆ ದಾಖಲಾಗಿದೆ.

ಭಾರತದ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಹನ್ನೊಂದು ರಾಜ್ಯಗಳು ಒಟ್ಟು 78.26% ರಷ್ಟು ಪಾಲನ್ನು ಹೊಂದಿವೆ.

ರಾಷ್ಟ್ರೀಯ ಮರಣ ದರವು ಕುಸಿಯುತ್ತಿದ್ದು, ಪ್ರಸ್ತುತ 1.11% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ3,645 ಸಾವುಗಳು ವರದಿಯಾಗಿವೆ.

ಹೊಸ ಸಾವುಗಳ ಪೈಕಿ ಹತ್ತು ರಾಜ್ಯಗಳು 78.71% ಪಾಲು ಹೊಂದಿವೆ . ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವುಗಳು(1,035) ಸಂಭವಿಸಿವೆ. ದೆಹಲಿ, 368 ದೈನಂದಿನ ಸಾವುಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಆರು ರಾಜ್ಯಗಳುಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಕೋವಿಡ್-19 ಸಾವುಗಳು ವರದಿಯಾಗಿಲ್ಲ. ಅವುಗಳೆಂದರೆ  ಡಿಯು ಮತ್ತು ಡಮನ್‌, ಅಂಡಮಾನ್‌,   ಲಡಾಖ್ (ಕೇಂದ್ರಾಡಳಿ ಪ್ರದೇಶ),  ಲಕ್ಷದ್ವೀಪ,  ಮಿಜೋರಾಂ,  ತ್ರಿಪುರ ಮತ್ತು ಅರುಣಾಚಲ ಪ್ರದೇಶ.

***


(Release ID: 1714816) Visitor Counter : 248