ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತದ ಮೊದಲ ಸೌರ ಬಾಹ್ಯಾಕಾಶ ಕಾರ್ಯಾಚರಣೆ ಮೂಲಕ ಸಂಗ್ರಹವಾಗುವ ದತ್ತಾಂಶಗಳ ವಿಶ್ಲೇಷಣೆಗೆ ಸಮುದಾಯ ಸೇವಾ ಕೇಂದ್ರ

Posted On: 27 APR 2021 1:21PM by PIB Bengaluru

ಭಾರತದ ಮೊದಲ ಸೌರ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿನ ಎಲ್ಲಾ ದತ್ತಾಂಶವನ್ನು ಒಂದೇ ವೆಬ್ ಆಧರಿತ ಇಂಟರ್ಫೇಸ್ ಗೆ ತರಲು ಸಮುದಾಯ ಸೇವಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ತ್ವರಿತವಾಗಿ ಬಳಕೆದಾರರು ದತ್ತಾಂಶ ಪಡೆಯಲು ಮತ್ತು ವಿಜ್ಞಾನದ ಆಸಕ್ತಿದಾಯಕ ಪ್ರಕರಣಗಳನ್ನು ಪತ್ತೆ ಮಾಡಲು ಇದರಿಂದ ಸಹಕಾರಿಯಾಗಲಿದೆ.

ಇಸ್ರೋ ಮತ್ತು ಎ.ಐ.ಆರ್.ಇ.ಎಸ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ

ಈ ಸೇವಾ ಕೇಂದ್ರವನ್ನು “ಆದಿತ್ಯಾ-ಎಲ್1 ಸಪೋರ್ಟ್ ಸೆಂಟರ್ [ಎ.ಎಲ್1ಎಸ್.ಸಿ] ಎಂದು ಹೆಸರಿಸಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ – ಇಸ್ರೋ ಮತ್ತು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಆರ್ಯಭಟ್ಟ ಪರಿವೀಕ್ಷಣಾ ವಿಜ್ಞಾನ ಸಂಶೋಧನಾ ಸಂಸ್ಥೆಯ ಜಂಟಿ ಪ್ರಯತ್ನದಿಂದ ಈ ಕೇಂದ್ರ ನಿರ್ಮಾಣವಾಗಿದ್ದು, ಇದರಿಂದ ಅತಿಥಿ ಪರಿವೀಕ್ಷಕರು ವಿಜ್ಞಾನ ದತ್ತಾಂಶಗಳನ್ನು ವಿಶ್ಲೇ಼ಷಣೆಗೆ ಒಳಪಡಿಸಿ ವಿಜ್ಞಾನ ವೀಕ್ಷಣಾ ಪ್ರಸ್ತಾಪಗಳನ್ನು ಸಿದ್ಧಪಡಿಸಲಿದ್ದಾರೆ.

ಉತ್ತರಾಖಂಡದ ಹಲ್ದಾನಿಯಲ್ಲಿರುವ ಎ.ಆರ್.ಐ.ಇ.ಎಸ್ ಆವರಣದಲ್ಲಿ ಎ.ಎಲ್.1ಎಸ್.ಸಿ ಅನ್ನು ಸ್ಥಾಪಿಸಲಾಗಿದೆ. ಆದಿತ್ಯಾ ಎಲ್1 ನಿಂದ ವಿಜ್ಞಾನ ದತ್ತಾಂಶಗಳನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಮತ್ತು ಭಾರತದ ಮೊದಲ ಸೌರ ಬಾಹ್ಯಾಕಾಶ ಮಿಷನ್ ಆದಿತ್ಯಾ ಎಲ್1ಗೆ ಅನುಕೂಲವಾಗುವಂತೆ ಇಸ್ರೋ ಜತೆ ಜಂಟಿಯಾಗಿ ಕೆಲಸಮಾಡಲು ಇದರಿಂದ ಸಹಕಾರಿಯಾಗಲಿದೆ.

ಈ ಕೇಂದ್ರ ಬಳಕೆದಾರರ ನಡುವೆ [ಸಂಶೋಧನಾ ಸಂಸ್ಥೆಗಳು/ ವಿಶ್ವವಿದ್ಯಾಲಯಗಳು/ ಕಾಲೇಜುಗಳು ಮತ್ತು ಅಧ್ಯಾಪಕ ಸದಸ್ಯರು] ಮತ್ತು ಆದಿತ್ಯಾ ಎಲ್1 ಮತ್ತು ಸೌರ ಖಗೋಳ ವಿಜ್ಞಾನ ಸಂಶೋಧನಾ ಸಮುದಾಯದ ಪೇಲೋಡ್ ತಂಡಗಳ ನಡುವೆ ಮಾರ್ಗದರ್ಶಿಯಾಗಿ ಇದು ಕಾರ್ಯನಿರ್ವಹಿಸುತ್ತದೆ. ಆದಿತ್ಯಾ ಎಲ್1 ಅವಲೋಕನಗಳಿಗಾಗಿ ವೀಕ್ಷಣಾ ಪ್ರಸ್ತಾಪಗಳನ್ನು ತಯಾರಿಸಲು ಅತಿಥಿ ವೀಕ್ಷಕರು/ ಸಂಶೋಧಕರಿಗೆ ನೆರವಾಗಲು ನಿರ್ದಿಷ್ಟ ಸಾಧನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ವೈಜ್ಞಾನಿಕ ದತ್ತಾಂಶ ನಿರ್ವಹಿಸಲು ಅಗತ್ಯವಾದ ವಿಶ್ಲೇಷಣಾ ತಂತ್ರಾಂಶ ವಿನ್ಯಾಸ ಮತ್ತು ಅಭಿವೃದ್ದಿಗಾಗಿ ಇಸ್ರೋ ನೆರವು ನೀಡಲಿದೆ.  

ಆದಿತ್ಯಾ ಎಲ್1 ನಿಂದ ಪಡೆದ ದತ್ತಾಂಶಕ್ಕೆ ಪೂರಕವಾಗಿ ವಿಶ್ವದ ಇತರೆ ವೀಕ್ಷಣಾಲಯಗಳಿಂದ ಸಹ ಸಂಗ್ರಹಿಸಲಾದ ದತ್ತಾಂಶವನ್ನು ಈ ಕೇಂದ್ರ ಒದಗಿಸುತ್ತದೆ. ಆದಿತ್ಯಾ ಎಲ್1 ಸಾಮರ್ಥ್ಯವನ್ನು ಮೀರಿ ವಿಜ್ಞಾನದ ಗುರಿಗಳನ್ನು ಸಾಧಿಸಲು ಇದು ಅನುವು ಮಾಡಿಕೊಡುತ್ತದೆ.

ಇತರೆ ವೀಕ್ಷಣಾಲಯಗಳಿಂದ ದತ್ತಾಂಶವನ್ನು ಸಂಯೋಜಿಸುವುದು ಸೌರ ವೈಶಿಷ್ಟ್ಯ ಕಾರ್ಯಕ್ರಮಗಳ ಜ್ಞಾನ ನೆಲೆ ನಿರ್ಮಿಸಲು ಇದರಿಂದ ಸಹಕಾರಿಯಾಗಲಿದೆ. ಇದು ಸೂರ್ಯನ ಮೇಲ್ಮೈ ಮತ್ತು ಹಿಲಿಯೋಸ್ಪಿಯರ್ ನಲ್ಲಿ ಕಂಡು ಬರುವ ವಿಭಿನ್ನ ಸೌರ ವೈಶಿಷ್ಟ್ಯಗಳ ಸಂಯೋಜನೆಯಾಗಿದೆ. ಹಿಲಿಯೋಸ್ಪಿಯರ್ ನಲ್ಲಿ ಕಂಡು ಬರುವ ವಿಭಿನ್ನ ಸೌರ ವೈಶಿಷ್ಟ್ಯಗಳನ್ನು ಸೂರ್ಯನ ಮೇಲ್ಮೈಗೆ ಸಂಪರ್ಕಿಸಲು ವೈಜ್ಞಾನಿಕ ಸಮುದಾಯಕ್ಕೆ ಈ ಜ್ಞಾನದ ಮೂಲ ತುಂಬಾ ಉಪಯುಕ್ತವಾಗಿದೆ.

ಇದರ ಜತೆಗೆ ಎಲ್1 ಎಸ್.ಸಿ ದತ್ತಾಂಶ ವಿಶ್ಲೇಷಣೆ ಮತ್ತು ಪ್ರಸ್ತಾವನೆ ಸಿದ್ಧತೆ ಕುರಿತು ರಾಷ್ಟ್ರೀಯ ಬಳಕೆದಾರರಿಗೆ ನಿಯಮಿತವಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಆದಿತ್ಯಾ ಎಲ್1 ದತ್ತಾಂಶ ವಿಶ್ಲೇಷಣೆ ಮತ್ತು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶ ಇರದ ಭಾರತದ ವಿಶ್ವವಿದ್ಯಾಲಯಗಳನ್ನು ಕೇಂದ್ರೀಕರಿಸಿ ವಿವಿಧೆಡೆ 2-3 ದಿನಗಳ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಮುಂದುವರಿದಂತೆ ಎ.ಎಲ್1ಎಸ್.ಸಿ ನಿಯಮಿತವಾಗಿ ಇ-ಕಾರ್ಯಾಗಾರಗಳು ಮತ್ತು ಆನ್ ಲೈನ್ ವೇದಿಕೆಗಳ ಮೂಲಕ ಬೋಧನೆಗೆ ಸೂಕ್ತ ವ್ಯವಸ್ಥೆ ಮಾಡಲು ಯೋಜಿಸಿದೆ.

ಆದಿತ್ಯಾ -ಎಲ್1 ಕೇಂದ್ರ ಭಾರತದ ಒಳಗಡೆ ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲೂ ತನ್ನ ಕಾರ್ಯಾಚರಣೆಯನ್ನು ಕಣ್ಣಿಗೆ ಕಾಣುವಂತೆ ವಿಸ್ತರಿಸಿ, ವೃದ್ಧಿಸಲು ಉದ್ದೇಶಿಸಿದೆ. ಇದರಿಂದ ಪ್ರತಿಯೊಬ್ಬ ಆಸಕ್ತ ವ್ಯಕ್ತಿ ದತ್ತಾಂಶದ ವೈಜ್ಞಾನಿಕ ವಿಶ್ಲೇಷಣೆ ಮಾಡಲು ಅನುವು ಮಾಡಿಕೊಡುವುದು ಇದರ ಗುರಿಯಾಗಿದೆ.  

***


(Release ID: 1714336) Visitor Counter : 196