ಪ್ರಧಾನ ಮಂತ್ರಿಯವರ ಕಛೇರಿ

ಹನುಮಾನ್ ಜಯಂತಿಯ ಶುಭ ದಿನದ ಅಂಗವಾಗಿ ಜನತೆಗೆ ಶುಭ ಕೋರಿದ ಪ್ರಧಾನಿ

Posted On: 27 APR 2021 11:01AM by PIB Bengaluru

ಹನುಮಾನ್ ಜಯಂತಿಯ ಶುಭ ದಿನದಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ದೇಶದ ಜನರಿಗೆ ಶುಭ ಕೋರಿದ್ದಾರೆ.

ಹನುಮಾನ್ ಜಯಂತಿಯ ಶುಭ ಸಂದರ್ಭವು, ಭಗವಾನ್ ಹನುಮಾನ್‌ನ ಸಹಾನುಭೂತಿ ಮತ್ತು ಸಮರ್ಪಣೆಯನ್ನು ಸ್ಮರಿಸುವಂತಹ ದಿನವಾಗಿದೆ ಎಂದು ಶ್ರೀ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಕರೋನಾ ವಿರುದ್ಧದ ಹೋರಾಟದಲ್ಲಿ ಭಗವಾನ್‌ ಹನುಮಾನ್‌ನ ಆಶೀರ್ವಾದವನ್ನು ಕೋರಿರುವ ಅವರು, ಅವನ ಜೀವನ ಮತ್ತು ಆದರ್ಶಗಳು ನಮ್ಮೆಲ್ಲರಿಗೂ ಸದಾ ಪ್ರೇರಣೆಯಾಗಿ ಮುಂದುವರಿಯಲಿವೆ ಎಂದು ಹಾರೈಸಿದ್ದಾರೆ.

***


(Release ID: 1714286)