ರಕ್ಷಣಾ ಸಚಿವಾಲಯ

ಏರ್ ವೈಸ್ ಮಾರ್ಷಲ್ ಅಶುತೋಷ್ ಶರ್ಮಾ ಬರೆದಿದ್ದಾರೆಂಬ ವಾಟ್ಸಪ್ ಸಂದೇಶದ ಆರೋಪದ ಬಗ್ಗೆ ಸ್ಪಷ್ಟೀಕರಣ

ಪ್ರಕಟಣಾ ದಿನಾಂಕ: 25 APR 2021 12:51PM by PIB Bengaluru

ಕೋವಿಡ್-19 ಸಾಂಕ್ರಾಮಿಕ ಎದುರಿಸಲು ಹಬೆ (ಸ್ಟೀಮ್) ಬಳಕೆ ಮಾಡಬಹುದು ಎಂದು ಬೆಂಗಳೂರಿನ ವಾಯುಪಡೆಯ ಕಮಾಂಡ್ ಆಸ್ಪತ್ರೆ(ಸಿಎಚ್ಎಎಫ್ ಬಿ)ಯ ಏರ್ ಮಾರ್ಷಲ್ ಅಶುತೋಷ್ ಶರ್ಮಾ ಅವರು ಬರೆದಿದ್ದಾರೆ ಎನ್ನಲಾದ ಆರೋಪದ ವಾಟ್ಸ್ ಅಪ್ ಸಂದೇಶ ಚಲಾವಣೆಯಲ್ಲಿದೆ.

ಈ ಮೂಲಕ ಸ್ಪಷ್ಟನೆ ನೀಡುವುದೆಂದರೆ, ಏರ್ ಮಾರ್ಷಲ್ ಅಶುತೋಷ್ ಶರ್ಮಾ ಅವರು ಬೆಂಗಳೂರಿನಲ್ಲಿಲ್ಲ. ವಾಯುಪಡೆಯ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯ ನೇತೃತ್ವವನ್ನು ಏರ್ ವೈಸ್ ಮಾರ್ಷಲ್ ಅಶುತೋಷ್ ಶರ್ಮಾ ವಹಿಸಿದ್ದಾರೆ ಮತ್ತು ಈ ಮೇಲಿನ ಚಲಾವಣೆಯಲ್ಲಿರುವ ಸಂದೇಶ ಮೂಲತಃ ಅವರು ನೀಡಿರುವುದಿಲ್ಲ.

ಭಾರತೀಯ ವಾಯುಪಡೆ ಮತ್ತು ಏರ್ ವೈಸ್ ಮಾರ್ಷಲ್ ಅಶುತೋಷ್ ಶರ್ಮಾ ಆ ಸಂದೇಶದಲ್ಲಿ ತಿಳಿಸಿದ ಮಾಹಿತಿಗೆ ಜವಾಬ್ದಾರರಲ್ಲ. ಕೋವಿಡ್-19 ಸೋಂಕಿನ ಲಕ್ಷಣಗಳಿರುವ ಯಾವುದೇ ವ್ಯಕ್ತಿ ಚಿಕಿತ್ಸೆಗಾಗಿ ವೃತ್ತಿಪರ ವೈದ್ಯರ ಸಹಾಯವನ್ನು ಪಡೆಯುವುದು ಕಡ್ಡಾಯವಾಗಿದೆ.

***


(ಪ್ರಕಟಣೆ ಐ.ಡಿ.: 1714031) ವಿಸಿಟರ್ ಕೌಂಟರ್ : 456
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Bengali , Tamil