ಹಣಕಾಸು ಸಚಿವಾಲಯ

ಸಾಂಕ್ರಾಮಿಕ ಹೆಚ್ಚಳ ಹಿನ್ನೆಲೆ ಕೆಲವೊಂದು ಕಾಲಮಿತಿಗಳನ್ನು ವಿಸ್ತರಣೆ ಮಾಡಿದ ಸರ್ಕಾರ

Posted On: 24 APR 2021 12:15PM by PIB Bengaluru

ಕೋವಿಡ್-19 ಸಾಂಕ್ರಾಮಿಕ ದೇಶಾದ್ಯಂತ ಹೆಚ್ಚು ಹೆಚ್ಚು ಜನರಿಗೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ಪಾವತಿದಾರರು, ತೆರಿಗೆ ಸಲಹೆಗಾರರು ಮತ್ತು ಇತರೆ ಸಂಬಂಧಿಸಿದವರಿಂದ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಕಾಲಾವಧಿ ಮೀರುವ ಹಲವು ಗಡುವುಗಳ ಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು ಹಲವು ಅಧಿಸೂಚನೆಗಳ ಮೂಲಕ ಏಪ್ರಿಲ್ 30ರ ವರೆಗೆ ವಿಸ್ತರಣೆ ಮಾಡಲಾಗಿದ್ದ ಗಡುವುಗಳನ್ನು ನೇರ ತೆರಿಗೆ ವಿವಾದ ಸೆ ವಿಶ್ವಾಸ್ ಕಾಯ್ದೆ 2020ರ ಅಡಿಯಲ್ಲಿ ಮತ್ತೆ ವಿಸ್ತರಣೆ ಮಾಡಲಾಗಿದ್ದು, ಸರ್ಕಾರ ಕೆಲವು ಕಾಲಮಿತಿಗಳನ್ನು ವಿಸ್ತರಣೆ ಮಾಡಿ ಇಂದು ಆದೇಶ ಹೊರಡಿಸಿದೆ.

ಹಲವು ಮನವಿಗಳ ಸ್ವೀಕಾರ ಹಿನ್ನೆಲೆಯಲ್ಲಿ ಮತ್ತು ಸಂಬಂಧಿಸಿದ ಹಲವರು ಎದುರಿಸುತ್ತಿರುವ ಕಷ್ಟಗಳನ್ನು ಬಗೆಹರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮೊದಲು 2021ರ ಏಪ್ರಿಲ್ 30ರ ವರೆಗೆ ವಿಸ್ತರಿಸಲಾಗಿದ್ದ ಕಾಲಮಿತಿಗಳನ್ನು ತೆರಿಗೆ ಮತ್ತು ಇತರೆ ಕಾನೂನುಗಳು(ವಿನಾಯಿತಿ) ಮತ್ತು ಕೆಲವು ಅಂಶಗಳ ತಿದ್ದುಪಡಿ ಕಾಯ್ದೆ 2020ರ ಅಡಿಯಲ್ಲಿ ಹಲವು ಅಧಿಸೂಚನೆಗಳನ್ನು ಹೊರಡಿಸಿ ಕಾಲಮಿತಿಗಳನ್ನು 2021ರ ಜೂನ್ 31ರ ವರೆಗೆ ವಿಸ್ತರಿಸಲಾಗಿದೆ:

I. ಆದಾಯ ತೆರಿಗೆ ಕಾಯ್ದೆ 1961(ಇನ್ನು ಮುಂದೆ ಕಾಯ್ದೆ ಎಂದು ಓದಿಕೊಳ್ಳುವುದು)ರ ಅಡಿಯಲ್ಲಿ ಸೆಕ್ಷನ್ 153 ಅಥವಾ ಸೆಕ್ಷನ್ 153ಬಿ ಅಡಿಯಲ್ಲಿ ಮೌಲ್ಯಮಾಪನ ಅಥವಾ ಮರು ಮೌಲ್ಯಮಾಪನ ಆದೇಶಗಳನ್ನು ಹೊರಡಿಸಲು ನಿಗದಿಪಡಿಸಿದ್ದ ಸಮಯದ ಮಿತಿಯನ್ನು ವಿಸ್ತರಿಸಲಾಗಿದೆ.

II. ಕಾಯ್ದೆಯ ಸೆಕ್ಷನ್ 144 ಸಿ ಉಪನಿಯಮ(13) ಅಡಿಯಲ್ಲಿ ಡಿ ಆರ್ ಪಿ ನಿರ್ದೇಶನ ನೀಡುವ ಒಪ್ಪಿಗೆ ಆದೇಶಗಳನ್ನು ಹೊರಡಿಸುವ ಸಮಯದ ಮಿತಿಯನ್ನು ವಿಸ್ತರಿಸಲಾಗಿದೆ.

III. ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ಯಾವ ಆದಾಯ ತೆರಿಗೆ ಪಾವತಿದಾರರು ಮೌಲ್ಯಮಾಪನದಿಂದ ತಪ್ಪಿಸಿಕೊಂಡಿರುತ್ತಾರೋ ಅಂತಹ ಪ್ರಕರಣಗಳನ್ನು ಮತ್ತೆ ವಿಚಾರಣೆ ನಡೆಸಿ, ಮೌಲ್ಯಮಾಪನ ಆದೇಶಗಳನ್ನು ಹೊರಡಿಸುವ ಕಾಲಾವಧಿ ವಿಸ್ತರಣೆ.

IV. 2016ರ ಹಣಕಾಸು ಕಾಯ್ದೆ ಸೆಕ್ಷನ್ 148ರ ಉಪನಿಯಮ 1 ರ ಅಡಿಯಲ್ಲಿ ಇಕ್ವಲೈಸೇಷನ್ ಲೆವಿ ಪ್ರಕ್ರಿಯೆಯ ಮಾಹಿತಿ ಕಳುಹಿಸಲು ಸಮಯ ಮಿತಿಯನ್ನು ವಿಸ್ತರಣೆ ಮಾಡಲಾಗಿದೆ.

2020ರ ನೇರ ತೆರಿಗೆಗಳ ವಿವಾದ್ ಸೆ ವಿಶ್ವಾಸ್ ಕಾಯ್ದೆ ಅಡಿಯಲ್ಲಿ ಪಾವತಿ ಮಾಡಬೇಕಾಗಿರುವ ಮೊತ್ತಕ್ಕೆ ಹೆಚ್ಚುವರಿ ಮೊತ್ತವಿಲ್ಲದೆ ಪಾವತಿಸುವ ಸಮಯದ ಮಿತಿಯನ್ನು 2021ರ ಜೂನ್ 30ರ ವರೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ.

ಈ ವಿಸ್ತರಣೆ ಕಾಲಾವಧಿ ಕುರಿತಂತೆ ಮುಂದಿನ ದಿನಗಳಲ್ಲಿ ಅಧಿಸೂಚನೆಗಳನ್ನು ಹೊರಡಿಸಲಾಗುವುದು.

***



(Release ID: 1713799) Visitor Counter : 233