ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಹೊಸದಾಗಿ 25 ಸ್ಥಳಗಳಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಅನುಮೋದನೆ
ತಿಂಗಳಿಗೆ 40ಲಕ್ಷ ಬಾಟಲ್ ನಿಂದ ತಿಂಗಳಿಗೆ 90 ಲಕ್ಷ ಬಾಟಲ್ ಗೆ ಉತ್ಪಾದನಾ ಸಾಮರ್ಥ್ಯ ಏರಿಕೆ
ಸದ್ಯದಲ್ಲೇ ಪ್ರತಿದಿನದ ಉತ್ಪಾದನೆ 3 ಲಕ್ಷ ಬಾಟಲ್ ಗೆ ಹೆಚ್ಚಳ
Posted On:
23 APR 2021 7:53PM by PIB Bengaluru
2021ರ ಏಪ್ರಿಲ್ 12 ರಿಂದೀಚೆಗೆ ದೇಶದಲ್ಲಿ ರೆಮ್ ಡೆಸಿವಿರ್ ಉತ್ಪಾದನೆಗೆ ಹೊಸದಾಗಿ 25 ಸ್ಥಳಗಳಲ್ಲಿ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಶ್ರೀ ಮನ್ಸೂಖ್ ಮಾಂಡವೀಯ ಹೇಳಿದ್ದಾರೆ.
ಅವರು “ರೆಮ್ ಡೆಸಿವಿರ್ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 40 ಲಕ್ಷ ಬಾಟಲ್ ಇತ್ತು, ಇದೀಗ ಆ ಸಾಮರ್ಥ್ಯವನ್ನು ತಿಂಗಳಿಗೆ 90 ಲಕ್ಷ ಬಾಟಲ್ ಗೆ ಹೆಚ್ಚಳ ಮಾಡಲಾಗಿದೆ. ಸದ್ಯದಲ್ಲೇ ದಿನವೊಂದಕ್ಕೆ 3 ಲಕ್ಷ ಬಾಟಲ್ ಔಷಧ ಉತ್ಪಾದನೆ ಮಾಡಲಾಗುವುದು. ಪ್ರತಿದಿನವೂ ಉತ್ಪಾದನೆ ಮೇಲೆ ನಿಗಾ ವಹಿಸಲಾಗುತ್ತಿದೆ. ರೆಮ್ ಡೆಸಿವಿರ್ ಪೂರೈಕೆಯಲ್ಲಿ ಯಾವುದೇ ಕೊರತೆ ಆಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
***
(Release ID: 1713666)
Visitor Counter : 274