ಸಂಪುಟ
ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ 2ಎ ಮತ್ತು ಹಂತ 2ಬಿಗೆ ಸಂಪುಟದ ಅನುಮೋದನೆ
Posted On:
20 APR 2021 3:44PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ 2ಎ (ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆ.ಆರ್. ಪುರಂವರೆಗೆ) ಮತ್ತು ಹಂತ 2 ಬಿ (ಕೆ.ಆರ್. ಪುರಂನಿಂದ ಹೆಬ್ಬಾಳ ಜಂಕ್ಷನ್ ಮಾರ್ಗವಾಗಿ ವಿಮಾನ ನಿಲ್ದಾಣದವರೆಗೆ) ಒಟ್ಟು 58.19 ಕಿ.ಮೀ. ಉದ್ದದ ಯೋಜನೆಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯ ಪೂರ್ಣ ವೆಚ್ಚ 14,788.101 ಕೋಟಿ ರೂ. ಆಗಿರುತ್ತದೆ.
ಈ ಯೋಜನೆಯ ಅನುಷ್ಠಾನದೊಂದಿಗೆ ಬೆಂಗಳೂರಿಗೆ ಅತ್ಯಗತ್ಯವಾದ ಹೆಚ್ಚುವರಿ ಸಾರ್ವಜನಿಕ ಸಾರಿಗೆ ಸೌಕರ್ಯ ಲಭಿಸಲಿದೆ.
ಉದ್ದೇಶಗಳು:
ಈ ಯೋಜನೆಯು ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ, ವ್ಯಾಪಕ ಬೆಳವಣಿಗೆ, ಖಾಸಗಿ ವಾಹನಗಳ ಸಂಖ್ಯೆಯಲ್ಲಿ ಹೆಚ್ಚಳ ಮತ್ತು ನಗರದಲ್ಲಿ ಭಾರಿ ನಿರ್ಮಾಣಗಳಿಂದಾಗಿ ಮತ್ತು ಕೈಗಾರಿಕಾ ಚಟುವಟಿಕೆಗಳಿಂದಾಗಿ ಸಾರಿಗೆ ಮೂಲಸೌಕರ್ಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದ್ದು, ಇದು ಅನಿವಾರ್ಯವಾಗಿತ್ತು ಮತ್ತು ಇದು ಜನರಿಗೆ ಸುರಕ್ಷಿತ, ವಿಶ್ವಾಸಾರ್ಹ ಮತ್ತು ಆರಾಮದಾಯಕ ಸಾರ್ವಜನಿಕ ಸಾರಿಗೆ ಒದಗಿಸುತ್ತದೆ.
ಮೆಟ್ರೊ ಯೋಜನೆಯು ಸಾಂಪ್ರದಾಯಿಕ ನಗರ ಸಾರಿಗೆ ವ್ಯವಸ್ಥೆಯಲ್ಲಿ ಒಂದು ನಾವೀನ್ಯ ಸಾರಿಗೆಯಾಗಿದೆ. ಯೋಜನೆಯು ಇತರ ನಗರ ಸಾರಿಗೆ ವ್ಯವಸ್ಥೆಯೊಂದಿಗೆ ಸಮರ್ಥ ಮತ್ತು ಪರಿಣಾಮಕಾರಿ ರೀತಿಯಲ್ಲಿ ಸಂಪರ್ಕಿತವಾಗಿರಬೇಕಾಗುತ್ತದೆ, ಇದು ವಿನ್ಯಾಸ, ತಂತ್ರಜ್ಞಾನ ಮತ್ತು ಸಾಂಸ್ಥಿಕ ನಿರ್ವಹಣೆಯ ನಾವಿನ್ಯಪೂರ್ಣ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಮಾತ್ರ ಸಾಧ್ಯವಾಗುತ್ತದೆ.
***
(Release ID: 1712944)
Visitor Counter : 264
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam