ಕಾನೂನು ಮತ್ತು ನ್ಯಾಯ ಸಚಿವಾಲಯ

ನ್ಯಾಯಮೂರ್ತಿ ಚಂದ್ರಚೂಡ್ ಅವರಿಂದ ತೀರ್ಪುಗಳು ಮತ್ತು ಆದೇಶಗಳ ಪೋರ್ಟಲ್ ಮತ್ತು ಇ-ಫೈಲಿಂಗ್ 3.0 ಮಾದರಿ ಉದ್ಘಾಟನೆ

Posted On: 12 APR 2021 3:50PM by PIB Bengaluru

ಭಾರತದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಮತ್ತು ಸುಪ್ರೀಂಕೋರ್ಟ್ ನ ಇ-ಸಮಿತಿ ಅಧ್ಯಕ್ಷ, ನ್ಯಾಯಮೂರ್ತಿ ಡಾ. ಧನಂಜಯ ವೈ. ಚಂದ್ರಚೂಡ್ ಅವರು 2021ರ ಏಪ್ರಿಲ್ 9ರಂದು ಶುಕ್ರವಾರ ಹಿಂದಿನ ತೀರ್ಪುಗಳು ಮತ್ತು ಆದೇಶಗಳ ಪೋರ್ಟಲ್ ಹಾಗೂ ವರ್ಚುವಲ್ ಮೂಲಕ ಕೋರ್ಟ್ ದಾಖಲೆಗಳನ್ನು ವಿದ್ಯುನ್ಮಾನ ರೀತಿಯಲ್ಲಿ ಸಲ್ಲಿಸುವ ಇ-ಫೈಲಿಂಗ್ 3.0 ಮಾದರಿಯನ್ನು ಉದ್ಘಾಟಿಸಿದರು. ನ್ಯಾಯ ಇಲಾಖೆಯ ಕಾರ್ಯದರ್ಶಿ ಶ್ರೀ ಬರುನ್ ಮಿತ್ರಾ, ನಾನಾ ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳು, ನ್ಯಾಷನಲ್ ಇನ್ಫಾರ್ಮ್ಯಾಟಿಕ್ ಸಂಸ್ಥೆಯ ನಿರ್ದೇಶಕಿ ಡಾ. ನೀತಾ ವರ್ಮಾ ಮತ್ತು ಸುಪ್ರೀಂಕೋರ್ಟ್ ನ ಇ-ಸಮಿತಿಯ ಸದ್ಯಸರು ವರ್ಚುವಲ್ ರೂಪದಲ್ಲಿ ಭಾಗಿಯಾಗಿದ್ದರು. ಪುಣೆ ಮೂಲದ ಇ-ಕೋರ್ಟ್ಸ್ ಯೋಜನಾ ತಂಡ ಅಭಿವೃದ್ಧಿಪಡಿಸಿರುವ ಈ ಉಪಕ್ರಮಗಳು ನ್ಯಾಯಾಂಗ ವ್ಯವಸ್ಥೆಯ ಬಲವರ್ಧನೆಗೊಳಿಸುವ ಗುರಿ ಹೊಂದಿವೆ. .

ತೀರ್ಪುಗಳು ಮತ್ತು ಆದೇಶಗಳ ಪೋರ್ಟಲ್ ದೇಶದ ನಾನಾ ಹೈಕೋರ್ಟ್ ಗಳು ನೀಡಿರುವ ತೀರ್ಪುಗಳ ಭಂಡಾರ ಆಗಿರಲಿದೆ. ಇದು ಬಹುಉಪಯೋಗಿ ಸರ್ಚ್(ಹುಡುಕುವ ವಿಧಾನಗಳನ್ನು) ಬಳಸಿ ಅಂತಿಮ ಆದೇಶಗಳು ಮತ್ತು ತೀರ್ಪುಗಳನ್ನು ಹುಡುಕುವ ಸೌಲಭ್ಯ ಒದಗಿಸುತ್ತದೆ. ಪೋರ್ಟಲ್ ನ ಪ್ರಮುಖಾಂಶಗಳು ಈ ಕೆಳಗಿನಂತಿವೆ:

•           ಉಚಿತ ಪಠ್ಯ ಹುಡುಕುವ ಸೌಕರ್ಯದ ಜೊತೆ ಯಾವುದೇ ಒಂದು ಕೀ-ಪದ ಅಥವಾ ಹಲವು ಕೀ-ಪದಗಳನ್ನು ಸೇರಿಸಿ ತೀರ್ಪುಗಳನ್ನು ಸುಲಭವಾಗಿ ಹುಡುಕಬಹುದಾಗಿದೆ.

•           ಬಳಕೆದಾರರು ನ್ಯಾಯಪೀಠ, ಪ್ರಕರಣದ ವರ್ಗ, ಪ್ರಕರಣದ ಸಂಖ್ಯೆ, ವರ್ಷ ಅರ್ಜಿದಾರರು/ಪ್ರತಿವಾದಿ ಹೆಸರು, ನ್ಯಾಯಮೂರ್ತಿ ಹೆಸರು, ಕಾಯ್ದೆ, ನಿಯಮ, ಇತ್ಯರ್ಥ ಸ್ವರೂಪ ಮತ್ತು ತೀರ್ಪಿನ ದಿನಾಂಕ ಸೇರಿದಂತೆ ಹಲವು ವಿಧಾನಗಳನ್ನು ಬಳಸಿ ತೀರ್ಪುಗಳನ್ನು ಹುಡುಕಬಹುದಾಗಿದೆ.  ಹಲವು ಬಗೆಯ ಸರ್ಚ್ ಆಯ್ಕೆಗಳು ಲಭ್ಯವಿರುವುದರಿಂದ ನಿರೀಕ್ಷಿತ ಫಲಿತಾಂಶಗಳು ಬಳಕೆದಾರರಿಗೆ ಸಿಗಲಿವೆ.

•           ಇದರಲ್ಲಿ ಅಡಕಗೊಂಡಿರುವ ಅಂಶಗಳಿಂದಾಗಿ ಲಭ್ಯವಿರುವ ಫಲಿತಾಂಶಗಳಲ್ಲಿ ಮತ್ತೆ ಶೋಧಿಸಬಹುದಾಗಿದ್ದು, ಅದರಿಂದ ಶೋಧನೆಗೆ ಮತ್ತಷ್ಟು ಮೌಲ್ಯ ಒದಗಿದೆ.

ಈ ಸಂದರ್ಭದಲ್ಲಿ ಪೋರ್ಟಲ್ ಕುರಿತು ಮಾತನಾಡಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು, ಸದ್ಯ ಜಡ್ಜ್ ಮೆಂಟ್ ಸರ್ಚ್ ಪೋರ್ಟಲ್ ನಲ್ಲಿ ಇಂದು 38 ಮಿಲಿಯನ್ ಕೇಸ್ ಗಳ ದತ್ತಾಂಶ ಲಭ್ಯವಿದೆ ಎಂದರು. ಈವರೆಗೆ ಇತ್ಯರ್ಥಗೊಂಡಿರುವ 106 ಮಿಲಿಯನ್ ಪ್ರಕರಣಗಳ ದತ್ತಾಂಶ ನಮ್ಮಲ್ಲಿ ಲಭ್ಯವಿದೆ. ಒಟ್ಟಾರೆ ಲಭ್ಯವಿರುವ ಆದೇಶಗಳ ಸಂಖ್ಯೆ 141 ಮಿಲಿಯನ್ ಇದೆ. ಈ ದತ್ತಾಂಶ ನಿಕ್ಷೇಪದಿಂದಾಗಿ ನಾವೇಕೆ ಉಚಿತ ಸರ್ಚ್ ಇಂಜಿನ್ ಒದಗಿಸಬಾರದುಎಂದು ಹೇಳಿದರು.

ಇ-ಪೈಲಿಂಗ್ 3.0 ಮಾದರಿಯನ್ನು ಸುಪ್ರೀಂಕೋರ್ಟ್ ನ ಇ-ಸಮಿತಿ ಪರಿಚಯಿಸಿದ್ದು, ಅದರಲ್ಲಿ ಕೋರ್ಟ್ ದಾಖಲೆಗಳನ್ನು ವಿದ್ಯುನ್ಮಾನ ರೀತಿಯಲ್ಲಿ ಸಲ್ಲಿಸಬಹುದಾಗಿದೆ. ಈ ಮಾದರಿ ಪರಿಚಯದಿಂದಾಗಿ ಯಾವುದೇ ವಕೀಲರು ಅಥವಾ ಕಕ್ಷಿದಾರರು ತಮ್ಮ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಕೋರ್ಟ್ ಆವರಣಕ್ಕೆ ಭೇಟಿ ನೀಡಬೇಕಾಗಿಲ್ಲ. ಕೋರ್ಟ್, ಕಕ್ಷಿದಾರರು  ಮತ್ತು ವಕೀಲರು ಮೂವರು ಬೇರೆ ಬೇರೆ ಸ್ಥಳದಲ್ಲಿ ಇದ್ದರೂ ಸಹ ಇ-ಫೈಲಿಂಗ್ ಪ್ರಕ್ರಿಯೆ ನಡೆಯಲಿದೆ. ವಕೀಲರು ತಮ್ಮ ಕಚೇರಿಯಲ್ಲಿಯೇ ಕುಳಿತು ಎಲ್ಲಿಗೂ ಪ್ರಯಾಣಿಸದೆ, ತಮ್ಮ ಇಡೀ ಕೆಲಸವನ್ನು ಪೂರ್ಣಗೊಳಿಸಬಹುದಾಗಿದೆ. ಈ ಯೋಜನಾ ವ್ಯವಸ್ಥೆ ದಾಖಲೆಯ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಂಡಿದೆ.

ನ್ಯಾಯ ಇಲಾಖೆ ಕಾರ್ಯದರ್ಶಿ ಶ್ರೀ ಬರುನ್ ಮಿತ್ರ, ಇ-ಫೈಲಿಂಗ್ 3.0ದ ನಾನಾ ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಇಂದು 3.0 ಆವೃತ್ತಿಯ ಉನ್ನತೀಕರಿಸಿದ ಆವೃತಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಬಳಕೆದಾರ ಸ್ನೇಹಿಯಾಗಿದ್ದು, ವಕೀಲರು ಇ-ನೋಂದಣಿ ಸಾಫ್ಟ್ ವೇರ್ ನಲ್ಲಿ ನೋಂದಣಿ ಮಾಡಿಕೊಳ್ಳುವುದೂ ಸಹ ಸರಳೀಕರಣಗೊಳಿಸಲಾಗಿದೆ. ಜೊತೆಗೆ ವಕೀಲರಿಗೆ ತಮ್ಮ ಪಾಲುದಾರರು ಅಥವಾ ಕಕ್ಷಿದಾರರನ್ನು ಇ-ಫೈಲಿಂಗ್ ಮಾದರಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಹಾಗೂ ಆನ್ ಲೈನ್ ನಲ್ಲಿ ವಕಾಲತ್ ನಾಮ, ----- ಸಿದ್ಧಪಡಿಸಿದ ಅರ್ಜಿಗಳ ಮಾದರಿಗಳು, ಆನ್ ಲೈನ್ ನಲ್ಲೇ ಪ್ರಮಾಣಪತ್ರ ಸಲ್ಲಿಕೆ, ಪ್ರಕರಣದ ಕಾಗದ ಪತ್ರಗಳ ಮೇಲೆ ಡಿಜಿಟಲ್ ಸಹಿ ಮಾಡುವುದು, ಮಾಹಿತಿ ವಿನಿಮಯ ಸೇರಿದಂತೆ ಹಲವು ಬಗೆಯ ಅರ್ಜಿ ನಮೂನೆಗಳು ಮತ್ತು ವಕೀಲರು ಹಾಗೂ ನ್ಯಾಯಾಂಗದ ನಡುವೆ ಭೌತಿಕ ಸಂಪರ್ಕವಿಲ್ಲದೆ ದಾಖಲೆಗಳನ್ನು ಒದಗಿಸಲು ಸಹಾಯಕವಾಗಲಿದೆ ಎಂದರು.

ನ್ಯಾಯಾಂಗ ಕಾರ್ಯದರ್ಶಿ ಈ ಎರಡೂ ಪೋರ್ಟಲ್ ಗಳ ಬಿಡುಗಡೆಯಿಂದಾಗಿ ನಮ್ಮ ನ್ಯಾಯಾಂಗ ವಿನ್ಯಾಸ ಮತ್ತು ನ್ಯಾಯಾಂಗ ಪ್ರಕ್ರಿಯೆ ನಿರಂತರವಾಗಿ ಮತ್ತು  ಸಕ್ರಿಯವಾಗಿ ಅತ್ಯಂತ ವೇಗದ ಡಿಜಿಟಲ್ ಜಗತ್ತನ್ನು ಅಳವಡಿಸಿಕೊಳ್ಳುತ್ತಿರುವುದಕ್ಕೆ ಬದ್ಧತೆಯಾಗಿದೆ ಎಂದು ಹೇಳಿದರು. ಇಂದಿನ ಪ್ರತಿಕೂಲ ಪರಿಸ್ಥಿತಿಗಳು ದೀರ್ಘಕಾಲದ ಅಡೆತಡೆಗಳನ್ನು ನಿವಾರಿಸಿ ಕೋರ್ಟ್ ಗಳ ಡಿಜಿಟಲೀಕರಣಕ್ಕೆ ದಾರಿ ಮಾಡಿಕೊಟ್ಟಿದೆ ಎಂದ ಅವರು ಹೇಗೆ ಎಲ್ಲ ಸಂಬಂಧಪಟ್ಟವರು ಅತ್ಯಂತ ತ್ವರಿತವಾಗಿ ಹೊಸ ವಿಧಾನಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ ಎಂದು ವಿವರಿಸಿದರು.

ಶ್ರೀ ಬರುನ್ ಮಿತ್ರ ಅವರು, ಸಂವಿಧಾನ ನ್ಯಾಯ ಭಾರತದ ಜನರಿಗೆ ಅತ್ಯಂತ ತ್ವರಿತವಾಗಿ ಲಭ್ಯವಾಗಬೇಕು ಎಂದು ಪರಿಗಣಿಸಿದೆ ಮತ್ತು ಇ-ಕೋರ್ಟ್ ಯೋಜನೆ ನಾಗರಿಕ ಕೇಂದ್ರಿತ ನ್ಯಾಯದಾನ ಖಾತ್ರಿಯಲ್ಲಿ ಅತ್ಯಂತ ಸುಸ್ಥಿರ ಪಾತ್ರವನ್ನು ವಹಿಸುತ್ತದೆ ಎಂದರು. ಈ ಗಣನೀಯ ಕಾರ್ಯವನ್ನು ಗುರುತಿಸಿ ಭಾರತ ಸರ್ಕಾರ 2020ರಲ್ಲಿ ಡಿಜಿಟಲ್ ಆಡಳಿತ ಶ್ರೇಷ್ಠತಾ ಪ್ರಶಸ್ತಿಯನ್ನು ನೀಡಿದೆ ಎಂದು ಅವರು ಹೇಳಿದರು.

***


(Release ID: 1711810) Visitor Counter : 276