ನೀತಿ ಆಯೋಗ

ಅಟಲ್ ಇನೋವೇಷನ್ ಮಿಷನ್ ನಡಿ ರಾಷ್ಟ್ರದಲ್ಲಿ 295 ಅಟಲ್ ಟಿಂಕರಿಂಗ್ ಲ್ಯಾಬ್ ಗಳ ಸ್ಥಾಪನೆ


ವಿದ್ಯಾರ್ಥಿಗಳಲ್ಲಿ ವಿಜ್ಞಾನಿಗಳು, ಪ್ರಯೋಗಾಲಯಗಳ ಬಗ್ಗೆ ಆಸಕ್ತಿ ಹುಟ್ಟಿಸುವ: “ಸ್ಟೀಮ್” ಆಧರಿತ ಅನುಶೋಧನೆ, ಸಂಶೋಧನೆಯ ಆಸಕ್ತಿ ಹೆಚ್ಚಿಸಲು ಆದ್ಯತೆ

Posted On: 09 APR 2021 5:31PM by PIB Bengaluru

ದೇಶಾದ್ಯಂತ  ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆ ಮತ್ತು ಅನುಶೋಧನೆಯ ಸಂಸ್ಕೃತಿ ಬೆಳೆಸಲು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್  [ಸಿ.ಎಸ್..ಆರ್] ಸಂಸ್ಥೆ ಅಟಲ್ ಇನೋವೇಷನ್ ಮಿಷನ್ [ಎಐಎಂ] ನಡಿ ಮಹತ್ವಾಕಾಂಕ್ಷಿಯ 295 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಇಂದು ಅಧಿಕೃತವಾಗಿ ದತ್ತು ಪಡೆದುಕೊಂಡಿತು.    

ಸಿ.ಎಸ್.,ಆರ್ 295 ಅಟಲ್ ಟಿಂಕರಿಂಗ್ ಲ್ಯಾಬ್ ಗಳಲ್ಲಿ ದೇಶಾದ್ಯಂತ 36 ಪ್ರಯೋಗಾಲಯಗಳನ್ನು ವಶಕ್ಕೆ ಪಡೆದುಕೊಂಡಿದೆ. ದೇಶಾದ್ಯಂತ ಹೊಸಶೋಧನೆಯ ಯುವ ಸಮೂಹಕ್ಕೆ ರಾಷ್ಟ್ರದ ಅತ್ಯುತ್ತಮ ಮನಸ್ಸುಗಳು ಮತ್ತು ವಿಜ್ಞಾನಿಗಳಿಂದ ಕಲಿಯಲು ಇದೊಂದು ಪಥ ಬದಲಿಸುವ ಅವಕಾಶವಾಗಲಿದೆ. ಹೊಸತನ ಹೊಂದಿರುವ ವಿದ್ಯಾರ್ಥಿಗಳಿಗೆ ಅವಕಾಶ ತಮ್ಮ ಶಾಲೆ. ಕುಟುಂಬ ಮತ್ತು ಸ್ಥಳೀಯ ಸಮುದಾಯಗಳಿಗೆ ಜೀವಂತ ಪ್ರೇರಣೆಯಾಗಲು ಅನುವು ಮಾಡಿಕೊಡುತ್ತದೆ.

ಪ್ರತಿಯೊಂದು ಅಟಲ್ ಟಿಂಕರಿಂಗ್ ಲ್ಯಾಬ್ ಗಳಿಗೆ ಸಿ.ಎಸ್..ಆರ್ ಅತ್ಯುತ್ತಮ ಸಂಶೋಧನಾ ವಿದ್ವಾಂಸರು ಮತ್ತು ವಿಜ್ಞಾನಿಗಳನ್ನು ಮಾರ್ಗದರ್ಶಕರನ್ನಾಗಿ ನಿಯೋಜಿಸಲಾಗುತ್ತದೆ ಮತ್ತು ಇವರೆಲ್ಲರೂ ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ಮಾಡಲಿದ್ದಾರೆ. ..ಎಂ ಮತ್ತು ಸಿ.ಎಸ್..ಆರ್ ವಿದ್ಯಾರ್ಥಿಗಳಿಗಾಗಿ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಪರಿಕಲ್ಪನೆ, ಆಲೋಚನೆಗಳು ಅಥವಾ ಸಾಮಾಜಿಕ ಸಮಸ್ಯೆಗಳ ಕುರಿತಾದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ವೆಬಿನಾರ್ ಗಳನ್ನು ಆಯೋಜಿಸಲಿದೆ.

ನೀತಿ ಆಯೋಗದ ಹೆಚ್ಚುವರಿ ಕಾರ್ಯದರ್ಶಿ ಮತ್ತು ..ಎಂನ ಮಿಷನ್ ಡೈರೆಕ್ಟರ್ ಆರ್. ರೆಹಮಾನ್ ವರ್ಚುವಲ್ ವೇದಿಕೆ ಮೂಲಕ ಪಾಲುದಾರಿಕೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಂಕ್ರಾಮಿಕವು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಚಾಲಿತ ನಿರ್ಣಾಯಕ ನಾವಿನ್ಯತೆಗಳ ಮಹತ್ವವನ್ನು ಬಲಪಡಿಸಿದೆ. ಅಟಲ್ ಇನೋವೇಷನ್ ಮಿಷನ್ ಗೆ ಇದೊಂದು ಐತಿಹಾಸಿಕ ಮೈಲಿಗಲ್ಲಿನ ಸಾಧನೆಯಾಗಿದೆ. ವಲಯದಲ್ಲಿ ಪ್ರಮುಖ ಪಾತ್ರವಹಿಸುವ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳೊಂದಿಗೆ ಎಸ್.ಟಿ..ಎಂ ಸಂಶೋಧನೆ ಮತ್ತು ಹೊಸಶೋಧ ಕ್ಷೇತ್ರದಲ್ಲಿ ಸಹಯೋಗ ಹೆಚ್ಚಿಸಲಿದೆ ಎಂದರು.

ಸಿ.ಎಸ್..ಆರ್ ಪ್ರಯೋಗಾಲಯಗಳ ಮೂಲಕ ಇತ್ತೀಚಿನ ತಂತ್ರಜ್ಞಾನಗಳು ಮತ್ತು ವೈಜ್ಞಾನಿಕ ಸಂಶೋಧನೆಗಳಿಗೆ ಪ್ರವೇಶ ಒದಗಿಸುತ್ತದೆ. ಜತೆಗೆ ದೇಶದ ಯುವ ವಿದ್ಯಾರ್ಥಿ ಸಮುದಾಯಕ್ಕೆ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು ಒದಗಿಸುವ ಅವಕಾಶಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತದೆ. ಏಕೆಂದರೆ ಇದು ರಾಷ್ಟ್ರೀಯ ಶಿಕ್ಷಣ ನೀತಿಎನ್..ಪಿ 2020 ದೂರ ದೃಷ್ಟಿಗೆ ಹೊಂದಿಕೆಯಾಗುವುದಲ್ಲದೇ ಆತ್ಮ ನಿರ್ಭರ್ ಭಾರತ್ ನಿರ್ಮಾಣಕ್ಕೆ ಹಾದಿ ಮಾಡಿಕೊಡುತ್ತದೆಎಂದು ಹೇಳಿದರು.

ಸಮಾರಂಭದಲ್ಲಿ ಮಾತನಾಡಿದ ಸಿ.ಎಸ್..ಆರ್ ಮಹಾ ನಿರ್ದೇಶಕ ಡಾ. ಶೇಖರ್ ಸಿ ಮಂಡೆ, “ ಸಿ..ಎಸ್..ಆರ್ ಇತಿಹಾಸದಲ್ಲಿ ಇದೊಂದು ಮಹತ್ವದ ಹೆಗ್ಗುರುತಾಗಿದೆದೇಶದ ಯುವ ವಿಜ್ಞಾನಿ ಸಮುದಾಯವನ್ನು ತಲುಪಲು ಇದರಿಂದ ಸಹಕಾರಿಯಾಗಲಿದೆಸಿ.ಎಸ್..ಆರ್ ಯಾವಾಗಲೂ ಹೊಸಶೋಧ, ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದಲ್ಲಿ ದೇಶದ ಜನತೆಯೊಂದಿಗೆ ಇದೆ. ತನ್ನ ಮಹತ್ವಾಕಾಂಕ್ಷಿಯ "ಜಿಗ್ಯಾಸಕಾರ್ಯಕ್ರಮ ಕೆಲವೇ ವರ್ಷಗಳಲ್ಲಿ ಮೂರು ಲಕ್ಷ ವಿದ್ಯಾರ್ಥಿಗಳನ್ನು ತಲುಪಿದೆ. ಅಟಲ್ ಇನೋವೇಷನ್ ಮಿಷನ್ ನೊಂದಿಗೆ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲು ಅವಕಾಶ ಕಲ್ಪಿಸಿದೆಎಂದರು

ದೇಶಾದ್ಯಂತ ಹೊಸಶೋಧ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುತ್ತಿರುವ ಎಐಎಂ ಅನ್ನು ಡಾ. ಮಂಡೆ ಅವರು ಸಹ ಹೊಗಳಿದರು. ದೇಶದಲ್ಲಿ ಇನ್ ಕ್ಯುಬೇಷನ್ ಕೇಂದ್ರಗಳನ್ನು ಉತ್ತೇಜಿಸುವ ಸಂಸ್ಕೃತಿಯಲ್ಲಿ ನಾವು ಬಹಳ ದೂರ ಸಾಗಿದ್ದೇವೆ ಎಂದರು.

***



(Release ID: 1711111) Visitor Counter : 269