ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ನೆದರ್ಲ್ಯಾಂಡ್ಸ್ ವರ್ಚುವಲ್ ಶೃಂಗಸಭೆ (ಏಪ್ರಿಲ್ 09, 2021)

Posted On: 08 APR 2021 7:09PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಏಪ್ರಿಲ್ 9, 2021ರಂದು ನೆದರ್ಲ್ಯಾಂಡ್ಸ್ ಪ್ರಧಾನಿ ಮಂತ್ರಿ ಮಾರ್ಕ್ ರುಟ್‌ ಅವರೊಂದಿಗೆ ವರ್ಚುವಲ್ ಶೃಂಗಸಭೆ ನಡೆಸಲಿದ್ದಾರೆ.

ನೆದರ್ಲ್ಯಾಂಡ್ಸ್ ಸಂಸತ್ ಚುನಾವಣೆಯಲ್ಲಿ ಪ್ರಧಾನಿ ರುಟ್‌ ಅವರ ಇತ್ತೀಚಿನ ಗೆಲುವಿನ ನಂತರ ಶೃಂಗಸಭೆಯು ನಡೆಯುತ್ತಿದ್ದು, ಪರಸ್ಪರ ಉನ್ನತ ಮಟ್ಟದ ಸಂವಾದಗಳ ಮೂಲಕ ಉಭಯ ದೇಶಗಳು ಕಾಯ್ದುಕೊಂಡಿರುವ ದ್ವಿಪಕ್ಷೀಯ ಸಂಬಂಧದ ವೇಗವನ್ನು ಇದು ಸುಸ್ಥಿರಗೊಳಿಸಲಿದೆ. ಶೃಂಗಸಭೆಯ ವೇಳೆ, ಉಭಯ ನಾಯಕರು ನಮ್ಮ ದ್ವಿಪಕ್ಷೀಯ ಸಹಕಾರದ ಬಗ್ಗೆ ವಿಸ್ತೃತವಾಗಿ ಚರ್ಚಿಸಲಿದ್ದು, ಸಂಬಂಧವನ್ನು ಬಲಪಡಿಸುವ ಹೊಸ ಮಾರ್ಗಗಳ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ. ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆಯೂ ಅವರು ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ.

ಭಾರತ ಮತ್ತು ನೆದರ್ಲ್ಯಾಂಡ್ಸ್ ಎರಡೂ ದೇಶಗಳು ಪ್ರಜಾಪ್ರಭುತ್ವ, ಕಾನೂನು ಮತ್ತು ಸ್ವಾತಂತ್ರ್ಯದ ಮೌಲ್ಯಗಳನ್ನು ಆಧರಿಸಿರುವ ಸೌಹಾರ್ದಯುತ ಹಾಗೂ ಸ್ನೇಹಪರ ಸಂಬಂಧಗಳನ್ನು ಹಂಚಿಕೊಂಡಿವೆ. ನೆದರ್ಲ್ಯಾಂಡ್ಸ್ಯುರೋಪ್‌ ಖಂಡದಲ್ಲಿ ಭಾರಿ ಸಂಖ್ಯೆಯ ಭಾರತೀಯ ವಲಸಿಗರಿಗೆ ನೆಲೆಯಾಗಿದೆ. ಎರಡೂ ದೇಶಗಳು ನೀರಿನ ನಿರ್ವಹಣೆ, ಕೃಷಿ ಮತ್ತು ಆಹಾರ ಸಂಸ್ಕರಣೆ, ಆರೋಗ್ಯ ರಕ್ಷಣೆ, ಸ್ಮಾರ್ಟ್ ನಗರಗಳು ಮತ್ತು ನಗರ ಸಂಚಾರ, ವಿಜ್ಞಾನ ಮತ್ತು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಮತ್ತು ಬಾಹ್ಯಾಕಾಶ ಸೇರಿದಂತೆ ಹಲವು ವಿಚಾರಗಳಲ್ಲಿ ವ್ಯಾಪಕ ಸಹಕಾರವನ್ನು ಹೊಂದಿವೆ. ನೆದರ್ಲ್ಯಾಂಡ್ಸ್ ಭಾರತದಲ್ಲಿ ಮೂರನೇ ಅತಿದೊಡ್ಡ ಹೂಡಿಕೆದಾರ ದೇಶವಾಗಿದ್ದು, ಉಭಯ ರಾಷ್ಟ್ರಗಳೂ ಸದೃಢವಾದ ಆರ್ಥಿಕ ಪಾಲುದಾರಿಕೆಯನ್ನು ಹಂಚಿಕೊಂಡಿವೆ. ಭಾರತದಲ್ಲಿ 200ಕ್ಕೂ ಹೆಚ್ಚು ಡಚ್ ಕಂಪನಿಗಳಿವೆ. ನೆದರ್ಲ್ಯಾಂಡ್ಸ್‌ನಲ್ಲೂ ಇದೇ ರೀತಿ  ಭಾರತೀಯ ವ್ಯವಹಾರಗಳನ್ನು ಕಾಣಬಹುದು.

***



(Release ID: 1710621) Visitor Counter : 167