ಹಣಕಾಸು ಸಚಿವಾಲಯ

ಭಾರತೀಯ ಷೇರು ಮಾರುಕಟ್ಟೆಗೆ ಹರಿದು ಬಂದ 2,74,034 ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆ (ಎಫ್ ಪಿಐ)

Posted On: 06 APR 2021 10:28AM by PIB Bengaluru

2020-21ನೇ ಹಣಕಾಸು ವರ್ಷದಲ್ಲಿ ವಿದೇಶಿ ಬಂಡವಾಳ ಹೂಡಿಕೆ(ಎಫ್ ಬಿಐ) ಹರಿವಿನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದ್ದು, ಭಾರತೀಯ ಷೇರು ಮಾರುಕಟ್ಟೆಗಳಿಗೆ 2,74,034 ಕೋಟಿ ರೂ. ಹರಿದು ಬಂದಿದೆ. ಆ ಮೂಲಕ ಭಾರತೀಯ ಆರ್ಥಿಕತೆಯ ಮೂಲಭೂತ ಅಂಶಗಳ ಮೇಲೆ ವಿದೇಶಿ ಹೂಡಿಕೆದಾರರು ಇಟ್ಟಿರುವ ವಿಶ್ವಾಸ ಸ್ಥಿರವಾಗಿದೆ ಎಂಬುದು ಪ್ರತಿಫಲನಗೊಂಡಿದೆ.

2020-21ನೇ ವರ್ಷ

ಒಟ್ಟು ನಿವ್ವಳ ಹೂಡಿಕೆ (ಕೋಟಿ ರೂ.ಗಳಲ್ಲಿ )

ಏಪ್ರಿಲ್

-6884

ಮೇ

14569

ಜೂನ್

21832

ಜುಲೈ

7563

ಆಗಸ್ಟ್

47080

ಸೆಪ್ಟೆಂಬರ್

-7783

ಅಕ್ಟೋಬರ್

19541

ನವೆಂಬರ್

60358

ಡಿಸೆಂಬರ್

62016

ಜನವರಿ

19473

ಫೆಬ್ರವರಿ

25787

ಮಾರ್ಚ್

10952

ಹಣಕಾಸು ವರ್ಷದಲ್ಲಿ ಒಟ್ಟು 20-21

274034

Up to 1st April 2021; source: NSDL

 

2021ರ ಏಪ್ರಿಲ್ 1ರವರೆಗೆ: ಮೂಲ: ಎನ್ ಎಸ್ ಡಿ ಎಲ್

ಆರ್ಥಿಕ ಪುನಃಶ್ಚೇತನಕ್ಕೆ ವಿನೂತನ ರೀತಿಯಲ್ಲಿ ಹಲವು ಸಂಕಷ್ಟ ಪ್ಯಾಕೇಜುಗಳನ್ನು ಘೋಷಿಸುವ ಮೂಲಕ ಬೆಂಬಲ ನೀಡಿದ್ದು, ನಿರೀಕ್ಷೆಗೂ ಮೀರಿದಂತೆ ಉತ್ಕೃಷ್ಟ ರೀತಿಯಲ್ಲಿ ಎಫ್ ಪಿಐ ಒಳಹರಿವು ಹೆಚ್ಚಾಗಲು ಕಾರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಎಫ್ ಪಿಐ ಹರಿವು ಹೆಚ್ಚಳ ಮತ್ತು ಹೂಡಿಕೆಯ ವಾತಾವರಣ ಸುಧಾರಿಸುವ ಉದ್ದೇಶದಿಂದ ಸರ್ಕಾರ ಮತ್ತು ನಿಯಂತ್ರಕರು ಹಲವು ನೀತಿ ಸುಧಾರಣಾ ಕ್ರಮಗಳನ್ನು ಕೈಗೊಂಡರು. ಅದರಲ್ಲಿ, ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮ ಸರಳೀಕರಣ ಮತ್ತು ಏಕರೂಪಗೊಳಿಸುವುದು, ಸೆಬಿಯಲ್ಲಿ ನೋಂದಣಿ ಮಾಡುವ ಉದ್ದೇಶಕ್ಕೆ ಆನ್ ಲೈನ್  ಒಂದೇ ಬಗೆಯ ಅರ್ಜಿ ನಮೂನೆ(ಸಿಎಎಫ್ ) ಕಾರ್ಯಾಚರಣೆ, ಪ್ಯಾನ್ ಹಂಚಿಕೆ ಮತ್ತು ಬ್ಯಾಂಕ್ ಮತ್ತು ಡಿಮ್ಯಾಟ್ ಖಾತೆ ತೆರೆಯುವುದು ಸೇರಿ ಹಲವು ಕ್ರಮಗಳು ಒಳಗೊಂಡಿವೆ.

ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಭಾರತೀಯ ಕಂಪನಿಗಳಲ್ಲಿ ಸರಾಸರಿ ಶೇ.24ರಿಂದ ವಲಯ ಮಿತಿಯನ್ನು ಹೆಚ್ಚಳ ಮಾಡುವುದು ಪ್ರಮುಖ ಷೇರುಗಳಲ್ಲಿ ಭಾರತೀಯ ಷೇರುಮಾರುಕಟ್ಟೆಯ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ವೇಗವರ್ಧಕವಾಗಿದೆ. ಆ ಮೂಲಕ ನಿಷ್ಕಿಯ ಮತ್ತು ಸಕ್ರಿಯ ಎರಡೂ ಭಾರತೀಯ ಷೇರು ಮಾರುಕಟ್ಟೆಗಳಿಗೆ ಭಾರಿ ಪ್ರಮಾಣದ ಬಂಡವಾಳ ಕ್ರೂಢೀಕರಿಸಲಿವೆ.

ವಿಶ್ವಬ್ಯಾಂಕ್, ಐಎಂಎಫ್ ಮತ್ತು ಇತರೆ ಜಾಗತಿಕ ಸಂಶೋಧನಾ ಸಂಸ್ಥೆಗಳು 2021-22ನೇ ಹಣಕಾಸು ವರ್ಷದಲ್ಲಿ ಭಾರತ ಶೇ.10ರಷ್ಟು ಪ್ರಗತಿ ಸಾಧಿಸಲಿದೆ ಎಂದು ಅಂದಾಜಿಸಿವೆ, ಹಾಗಾಗಿ ಭವಿಷ್ಯದಲ್ಲಿ ಭಾರತ ಆಕರ್ಷಕ ಹೂಡಿಕೆ ತಾಣವಾಗಿ ಮುಂದುವರಿಯಲಿದೆ ಎಂಬುದು ಬಲವಾಗಿ ಪ್ರತಿಪಾದನೆಗೊಂಡಿದೆ.

****



(Release ID: 1709856) Visitor Counter : 194