ಗೃಹ ವ್ಯವಹಾರಗಳ ಸಚಿವಾಲಯ
ಚತ್ತೀಸ್ ಘಡದ ಜಗ್ದಾಲ್ಪುರ್ ದಲ್ಲಿ ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಭದ್ರತಾ ಪಡೆಯ ವೀರ ಯೋಧರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಗೌರವ ಸಮರ್ಪಣೆ
ಹುತಾತ್ಮ ಭದ್ರತಾ ಸಿಬ್ಬಂದಿಗೆ ನಮಿಸಿದ ಶ್ರೀ ಅಮಿತ್ ಶಾ: ನಿಮ್ಮ ಶೌರ್ಯ ಮತ್ತು ತ್ಯಾಗವನ್ನು ದೇಶ ಎಂದಿಗೂ ಮರೆಯದು
ದುಃಖಿತ ಕುಟುಂಬಗಳೊಂದಿಗೆ ಇಡೀ ದೇಶ ನಿಂತಿದೆ: ಅಶಾಂತಿ ವಿರುದ್ಧದ ಹೋರಾಟವನ್ನು ಕೊನೆಯ ಹಂತಕ್ಕೆ ಕೊಂಡೊಯ್ಯಲು ಬದ್ಧ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಭಾರತ ಸರ್ಕಾರ ಮತ್ತು ಇಡೀ ರಾಷ್ಟ್ರದ ಪರವಾಗಿ ಚತ್ತೀಸ್ ಘಡ ಪೊಲೀಸರು, ಸಿ.ಆರ್.ಪಿ.ಎಫ್ ಮತ್ತು ಕೋಬ್ರಾ ಬೆಟಾಲಿಯನ್ ನಲ್ಲಿ ಹುತಾತ್ಮರಾದ ಸೈನಿಕರಿಗೆ ಗೌರವ ಸಲ್ಲಿಸುತ್ತೇನೆ.
ನಕ್ಸಲೀಯರ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಮೋದಿ ಸರ್ಕಾರದ ಆದ್ಯತೆ: ಕಳೆದ ಕೆಲವು ವರ್ಷಗಳಲ್ಲಿ ನಕ್ಸಲರ ವಿರುದ್ಧದ ಹೋರಾಟ ನಿರ್ಣಾಯಕ ತಿರುವು ಪಡೆದಿದೆ.
ನಕ್ಸಲೀಯರ ದಾಳಿ ಹಿನ್ನೆಲೆ: ಚತ್ತೀಸ್ ಘಡ ಮುಖ್ಯಮಂತ್ರಿ ಮತ್ತು ಹಿರಿಯ ಅಧಿಕಾರಿಗಳ ಜತೆ ಎಡಪಂಥೀಯ ಆತಂಕವಾದ [ಎಲ್.ಡಬ್ಲ್ಯೂ.ಇ] ಕೇಂದ್ರ ಗೃಹ ಸಚಿವರಿಂದ ಉನ್ನತ ಮಟ್ಟದ ಸಭೆ
ಪ್ರಗತಿ ಪರಿಶೀಲನೆ ಸಭೆಯಲ್ಲಿ ನಕ್ಸಲೀಯರ ವಿರುದ್ಧದ ಹೋರಾಟದ ವೇಗವನ್ನು ಯಾವುದೇ ಕಾರಣಕ್ಕೂ ನಿಧಾನಗೊಳಿಸಬಾರದು: ನಮ್ಮ ಸೈನಿಕರ ಸ್ಥೈರ್ಯ ಇನ್ನೂ ಹಾಗೆಯೇ ಇದೆ ಎಂಬುದು ಇದರಿಂದ ಸಾಬೀತು
ಕಳೆದ 5-6 ವರ್ಷಗಳಲ್ಲಿ ಚತ್ತೀಸ್ ಘಡದ ತೀವ್ರ ನಕ್ಸಲ್ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಭದ್ರತಾ ಶಿಬಿರಗಳನ್ನು ಸ್ಥಾಪಿಸಲು ನಾವು ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಸಾಧಿಸಿದ್ದೇವೆ
ಚತ್ತೀಸ್ ಘಡ ಸರ್ಕಾರ ಮತ್ತು
Posted On:
05 APR 2021 8:00PM by PIB Bengaluru
ಚತ್ತೀಸ್ ಘಡದ ಜಗದಾಲ್ಪುರ್ ದಲ್ಲಿ ನಕ್ಸಲೀಯರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಭದ್ರತಾ ಪಡೆಯ ವೀರ ಯೋಧರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೌರವ ಸಮರ್ಪಿಸಿದರು. ನಿಮ್ಮ ತ್ಯಾಗ ಬಲಿದಾವನ್ನು ದೇಶ ಎಂದಿಗೂ ಮರೆಯುವುದಿಲ್ಲ. ದುಃಖಿತ ಕುಟುಂಬಗಳೊಂದಿಗೆ ಇಡೀ ದೇಶ ನಿಂತಿದೆ: ಅಶಾಂತಿ ವಿರುದ್ಧದ ಹೋರಾಟವನ್ನು ಕೊನೆಯ ಹಂತಕ್ಕೆ ಕೊಂಡೊಯ್ಯಲು ಬದ್ಧ ಎಂದು ಹೇಳಿದರು.
ಏಪ್ರಿಲ್ 3 ರಂದು ನಕ್ಸಲೀಯರ ವಿರುದ್ಧದ ದಾಳಿ ನಡೆದ ಹಿನ್ನೆಲೆಯಲ್ಲಿ ಜಗ್ದಾಲ್ಪುರದಲ್ಲಿ ಚತ್ತೀಸ್ ಘಡ ಮುಖ್ಯಮಂತ್ರಿ ಶ್ರೀ ಭೂಪೇಶ್ ಬಘೇಲ್ ಮತ್ತು ಹಿರಿಯ ಅಧಿಕಾರಿಗಳ ಜತೆ ಕೇಂದ್ರ ಗೃಹ ಸಚಿವರು ಎಡಪಂಥೀಯ ಆತಂಕವಾದ [ಎಲ್.ಡಬ್ಲ್ಯೂ.ಇ] ನಿಯಂತ್ರಣ ಕುರಿತು ಪ್ರಗತಿಪರಿಶೀಲನೆಗಾಗಿ ಉನ್ನತ ಮಟ್ಟದ ಸಭೆ ನಡೆಸಿದರು.
ಬಳಿದ ಸುದ್ದಿಗಾರರ ಜತೆ ಮಾತನಾಡಿದ ಶ್ರೀ ಅಮಿತ್ ಶಾ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಭಾರತ ಸರ್ಕಾರ ಮತ್ತು ಇಡೀ ರಾಷ್ಟ್ರದ ಪರವಾಗಿ ಚತ್ತೀಸ್ ಘಡ ಪೊಲೀಸರು, ಸಿ.ಆರ್.ಪಿ.ಎಫ್ ಮತ್ತು ಕೋಬ್ರಾ ಬೆಟಾಲಿಯನ್ ನಲ್ಲಿ ಹುತಾತ್ಮರಾದ ಸೈನಿಕರಿಗೆ ನಾವು ಗೌರವ ಸಲ್ಲಿಸುತ್ತಿದ್ದೇವೆ. ಧೈರ್ಯವಂತ ಭದ್ರತಾ ಸಿಬ್ಬಂದಿಯ ತ್ಯಾಗ ವ್ಯರ್ಥವಾಗುವುದಿಲ್ಲ ಮತ್ತು ಈ ಹೋರಾಟಕ್ಕೆ ನಿರ್ಣಾಯಕ ತಿರುವು ಪಡೆಯಲು ದೇಶ ಯಾವಾಗಲೂ ಸರ್ವಶ್ರೇಷ್ಠ ತ್ಯಾಗವನ್ನು ನೆನಪಿಸಿಕೊಳ್ಳಲು ಬಯಸುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು.
ನಕ್ಸಲೀಯರ ವಿರುದ್ಧದ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ನಕ್ಸಲರ ವಿರುದ್ಧದ ಹೋರಾಟ ನಿರ್ಣಾಯಕ ತಿರುವು ಪಡೆದಿದೆ ಮತ್ತು ಈ ದೃರದೃಷ್ಟಕರ ಘಟನೆ ನಮ್ಮ ಸಂಕಲ್ಪವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. ಸಭೆಯಲ್ಲಿ ಚತ್ತೀಸ್ ಘಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಎಲ್ಲಾ ಸಶಸ್ತ್ರ ಪಡೆಗಳ ಅಧಿಕಾರಿಗಳು ನಕ್ಸಲೀಯರ ವಿರುದ್ಧದ ಹೋರಾಟದ ವೇಗ ಯಾವುದೇ ಕಾರಣಕ್ಕೂ ನಿಧಾನವಾಗಬಾರದು. ಇದು ನಮ್ಮ ಪೊಲೀಸರ ನೈತಿಕ ಸ್ಥೈರ್ಯ ಹಾಗೆಯೇ ಉಳಿದಿದೆ ಎಂಬುದನ್ನು ತೋರಿಸುತ್ತದೆ ಸಲಹೆ ನೀಡಿದರು.
ನಕ್ಸಲೀಯರ ವಿರುದ್ಧದ ಹೋರಾಟವನ್ನು ಎಂದಿಗೂ ನಿಲ್ಲಿಸುವುದಿಲ್ಲ ಎಂದು ದೇಶಕ್ಕೆ ಭರವಸೆ ನೀಡಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ, ಈ ಹೋರಾವನ್ನು ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಈ ಕೊನೆಯ ಹೋರಾಟದಲ್ಲಿ ನಕ್ಸಲೀಯರ ವಿರುದ್ಧ ನಿಜಕ್ಕೂ ಗೆಲುವು ಸಾಧಿಸುತ್ತೇವೆ ಎಂದು ಹೇಳಿದರು.
ಕಳೆದ 5-6 ವರ್ಷಗಳಲ್ಲಿ ಚತ್ತೀಸ್ ಘಡದ ತೀವ್ರ ನಕ್ಸಲ್ ಸಮಸ್ಯಾತ್ಮಕ ಪ್ರದೇಶಗಳಲ್ಲಿ ಭದ್ರತಾ ಶಿಬಿರಗಳನ್ನು ಸ್ಥಾಪಿಸಲು ನಾವು ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಸಾಧಿಸಿದ್ದೇವೆ. ಬುಡಕಟ್ಟು ಪ್ರದೇಶದ ಒಳಗಡೆ ಅಭಿವೃದ್ಧಿ ಕೆಲಸಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ತೀವ್ರಗೊಳಿಸಲಾಗಿದೆ. ಮತ್ತೊಂದೆಡೆ ಸಶಸ್ತ್ರ ಗುಂಪುಗಳ ವಿರುದ್ಧದ ಹೋರಾಟ ತೀವ್ರಗೊಳಿಸಲಾಗಿದೆ.
ಅಭಿವೃದ್ದಿ ವಿಚಾರದಲ್ಲೂ ಸಾಕಷ್ಟು ಕೆಲಸಗಳಾಗಿವೆ: ಕೋವಿಡ್ – 19 ನಿಂದಾಗಿ ಕಳೆದ ಒಂದು ವರ್ಷದಲ್ಲಿ ಅಭಿವೃದ್ಧಿಯ ವೇಗ ನಿಧಾನವಾಗಿದೆ: ಬುಡಕಟ್ಟು ಜನ ಪ್ರತಿನಿಧಿಗಳು, ಛತ್ತೀಸ್ ಘಡದ ಮುಖ್ಯಮಂತ್ರಿ ಮತ್ತು ಸಂಸದರಿಂದ ಪಡೆದ ಎಲ್ಲಾ ಸಲಹೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಹುತಾತ್ಮರಾದ ಯೋಧರ ಕುಟುಂಬಗಳ ಪರಮೋಚ್ಛ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ. ದುಃಖಿತ ಸಮಯದಲ್ಲಿ ಹುತಾತ್ಮರಾದ ಕುಟುಂಬಗಳ ಜತೆ ಇಡೀ ದೇಶ ನಿಲ್ಲುತ್ತದೆ. ನಿಮ್ಮ ಕುಟುಂಬ ಸದಸ್ಯರು ಮಾಡಿದ ಸರ್ವೋಚ್ಛ ತ್ಯಾಗದ ಗುರಿಯನ್ನು ನಾವು ಖಂಡಿತವಾಗಿ ಸಾಧಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು.
*****
(Release ID: 1709823)
Visitor Counter : 172