ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅತಿ ಹೆಚ್ಚು ನಿತ್ಯದ ಹೊಸ ಪ್ರಕರಣ ದಾಖಲೆ ಮುಂದುವರಿಸಿರುವ ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು ಮತ್ತು ಗುಜರಾತ್


ದೇಶದಾದ್ಯಂತ 6.1 ಕೋಟಿಗೂ ಅಧಿಕ ಲಸಿಕೆ ನೀಡಿಕೆ

Posted On: 30 MAR 2021 11:40AM by PIB Bengaluru

ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು ಮತ್ತು ಗುಜರಾತ್ ಆರು ರಾಜ್ಯಗಳಲ್ಲಿ ಕೋವಿಡ್ ನಿತ್ಯದ ಹೊಸ ಪ್ರಕರಣಗಳ ಹೆಚ್ಚಳದ ವರದಿ ಮುಂದುವರಿದಿದ್ದು, ಒಟ್ಟಾರೆ ಪ್ರಕರಣಗಳ ಶೇ. 78.56ರಷ್ಟು 6 ರಾಜ್ಯಗಳಿಂದ ವರದಿಯಾಗುತ್ತಿದೆ.

56,211 ಹೊಸ ಪ್ರಕರಣಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ವರದಿಯಾಗಿವೆ.

https://static.pib.gov.in/WriteReadData/userfiles/image/image001AMY8.jpg

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ದೈನಂದಿನ ಪ್ರಕರಣ 31,643 ವರದಿಯಾಗಿದ್ದರೆ, ಪಂಜಾಬ್ ನಲ್ಲಿ 2,868 ಮತ್ತು ಕರ್ನಾಟಕದಲ್ಲಿ 2,792 ಹೊಸ ಪ್ರಕರಣ ವರದಿಯಾಗಿದೆ.

https://static.pib.gov.in/WriteReadData/userfiles/image/image002KYY9.jpg

https://static.pib.gov.in/WriteReadData/userfiles/image/image003JUPH.jpg

ಹತ್ತು ರಾಜ್ಯಗಳು, ಕೆಳಗೆ ತೋರಿಸಿರುವಂತೆ, ದೈನಂದಿನ ಹೊಸ ಪ್ರಕರಣಗಳಲ್ಲಿ ಏರುಮುಖವಾಗಿ ಸಾಗಿವೆ.

ಭಾರತದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 5,40,720 ತಲುಪಿದೆ. ಭಾರತದ ಪ್ರಸ್ತುತ ಸಕ್ರಿಯ ಪ್ರಕರಣಗಳು ಭಾರತದ ಒಟ್ಟಾರೆ ಸೋಂಕು ದೃಢಪಟ್ಟ ಪ್ರಕರಣಗಳ ಶೇ.4.47ರಷ್ಟಾಗುತ್ತದೆ. ಕಳೆದ 24 ಗಂಟೆಗಳಲ್ಲಿ ಒಟ್ಟಾರೆ ಸೋಂಕು ದೃಢಪಟ್ಟ ಪ್ರಕರಣಗಳಲ್ಲಿ 18,912 ಪ್ರಕರಣಗಳ ನಿವ್ವಳ ಹೆಚ್ಚಳ (Incline) ದಾಖಲಾಗಿದೆ.

https://static.pib.gov.in/WriteReadData/userfiles/image/image004OMVV.jpg

ದೇಶದಲ್ಲಿ ದಾಖಲಾದ ಒಟ್ಟಾರೆ ಸಕ್ರಿಯ ಪ್ರಕರಣಗಳಲ್ಲಿ ಶೇ.79.64ರಷ್ಟು ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ ಮತ್ತು ಛತ್ತೀಸಗಢದಲ್ಲಿದೆ. ಮಹಾರಾಷ್ಟ್ರ ದೇಶದ ಶೇ.62ರಷ್ಟು ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಮತ್ತೊಂದೆಡೆ ಇಂದು ಬೆಳಗ್ಗೆ 7ಗಂಟೆವರೆಗಿನ ತಾತ್ಕಾಲಿಕ ವರದಿಗಳ ರೀತ್ಯ 6.11 ಕೋಟಿಗೂ ಅಧಿಕ (6,11,13,354) ಲಸಿಕೆಯ ಡೋಸ್ ಗಳನ್ನು 10,07,091ಸೆಷನ್ ಗಳ ಮೂಲಕ ನೀಡಲಾಗಿದೆ. ಇದರಲ್ಲಿ 81,74,916 ಎಚ್.ಸಿ.ಡಬ್ಲ್ಯು. (ಪ್ರಥಮ ಡೋಸ್), 51,88,747 ಎಚ್.ಸಿ.ಡಬ್ಲ್ಯು (2ನೇ ಡೋಸ್) 89,44,742 ಎಫ್.ಎಲ್.ಡಬ್ಲ್ಯು (ಪ್ರಥಮ ಡೋಸ್) ಮತ್ತು 37,11,221 ಎಫ್.ಎಲ್.ಡಬ್ಲ್ಯು (2ನೇ ಡೋಸ್) ಸೇರಿದೆ, 68,72,483 (ಪ್ರಥಮ ಡೋಸ್) ಮತ್ತು 405 (2ನೇ ಡೋಸ್) ಅನ್ನು 45 ವರ್ಷ ಮತ್ತು ನಿರ್ದಿಷ್ಟ ಸಹ ಅಸ್ವಸ್ಥತೆ ಇರುವ ಫಲಾನುಭವಿಗಳು ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ ಫಲಾನುಭವಗಳಿಗೆ 2,82,19,257 (ಪ್ರಥಮ ಡೋಸ್) ಮತ್ತು 1583 (ಎರಡನೇ ಡೋಸ್) ನೀಡಲಾಗಿದೆ.

ಎಚ್.ಸಿ.ಡಬ್ಲ್ಯು.ಗಳು

ಎಫ್.ಎಲ್.ಡಬ್ಲ್ಯು.ಗಳು

45 ರಿಂದ <60 ವಯಸ್ಸಿನ ಸಹ ಅಸ್ವಸ್ಥತೆ ಇರುವವರು

60 ವರ್ಷ ಮೇಲ್ಪಟ್ಟವರು

 

ಒಟ್ಟು

ಪ್ರಥಮ ಡೋಸ್

2ನೇ ಡೋಸ್

ಪ್ರಥಮ ಡೋಸ್

2ನೇ ಡೋಸ್

ಪ್ರಥಮ ಡೋಸ್

2ನೇ ಡೋಸ್

ಪ್ರಥಮ ಡೋಸ್

2ನೇ ಡೋಸ್

81,74,916

51,88,747

89,44,742

37,11,221

68,72,483

405

2,82,19,257

1583

6,11,13,354

ಲಸಿಕೆ ಅಭಿಯಾನದ 73ನೇ ದಿನದವರೆಗೆ (2021 ಮಾರ್ಚ್ 29), ಒಟ್ಟು 5,82,919 ಲಸಿಕೆಯ ಡೋಸ್ ಗಳನ್ನು ನೀಡಲಾಗಿದೆ. ಪೈಕಿ 5,51,164 ಫಲಾನುಭವಿಗಳು 14,608 ಸೆಷನ್ ಗಳಲ್ಲಿ 1ನೇ ಡೋಸ್ ಅನ್ನು ಮತ್ತು 31,755 ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ದಿನಾಂಕ: 2021 ಮಾರ್ಚ್ 29

ಎಚ್.ಸಿ.ಡಬ್ಲ್ಯು ಗಳು

ಎಫ್.ಎಲ್.ಡಬ್ಲ್ಯು.ಗಳು

45 ರಿಂದ < 60 ವರ್ಷಗಳವರೆಗೆ ಸಹ ಅಸ್ವಸ್ಥತೆ ಇರುವವರು

60 ವರ್ಷ ಮೇಲ್ಪಟ್ಟವರು

ಒಟ್ಟು ಸಾಧನೆ

ಪ್ರಥಮ ಡೋಸ್

2ನೇ ಡೋಸ್

ಪ್ರಥಮ ಡೋಸ್

2ನೇ ಡೋಸ್

ಪ್ರಥಮ ಡೋಸ್

2ನೇ ಡೋಸ್

ಪ್ರಥಮ ಡೋಸ್

2ನೇ ಡೋಸ್

ಪ್ರಥಮ ಡೋಸ್

2ನೇ ಡೋಸ್

17,919

10,682

32,629

19,085

1,41,260

405

3,59,356

1,583

5,51,164

31,755

ಭಾರತದ ಸಂಚಿತ ಗುಣಮುಖವು ಇಂದು 1,13,93,021 ಆಗಿದೆ. ರಾಷ್ಟ್ರೀಯ ಚೇತರಿಕೆ ದರ ಶೇ. 94.19 ಆಗಿದೆ.

37,028 ಚೇತರಿಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾಗಿದೆ.

***


(Release ID: 1708646) Visitor Counter : 305