ಪ್ರಧಾನ ಮಂತ್ರಿಯವರ ಕಛೇರಿ
ಓರಾಕಾಂಡಿಯ ಸಮುದಾಯ ಸ್ವಾಗತ ಸಮಾರಂಭದಲ್ಲಿ ಭಾಗಿಯಾಗಿ, ಹರಿ ಮಂದಿರಕ್ಕೆ ಭೇಟಿ ನೀಡಿದ ಪ್ರಧಾನಮಂತ್ರಿ
Posted On:
27 MAR 2021 6:28PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎರಡು ದಿನಗಳ ಬಾಂಗ್ಲಾದೇಶದ ಭೇಟಿಯ ಎರಡನೇ ದಿನದಂದು, ಓರಾಕಾಂಡಿಯ ಹರಿ ಮಂದಿರದಲ್ಲಿ ಆಶೀರ್ವಾದ ಪಡೆದರು ಮತ್ತು ಗೌರವಾನ್ವಿತ ಠಾಕೂರ್ ಕುಟುಂಬದ ವಂಶಜರೊಂದಿಗೆ ಸಂವಾದ ನಡೆಸಿದರು.
ಶ್ರೀ ಶ್ರೀ ಹರಿ ಚಂದ್ ಠಾಕೂರ್ ಜಿ ಅವರು ಸಾಮಾಜಿಕ ಸುಧಾರಣೆಗಳ ಧರ್ಮನಿಷ್ಠ ಸಂದೇಶವನ್ನು ಸಾರಿದ ಓರಾಕಾಂಡಿಯಲ್ಲಿ ಮತುವಾ ಸಮುದಾಯದ ಪ್ರತಿನಿಧಿಗಳನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಭಾಷಣ ಮಾಡಿದರು. ಭಾರತ ಮತ್ತು ಬಾಂಗ್ಲಾದೇಶಗಳೆರಡೂ ತಮ್ಮ ಅಭಿವೃದ್ಧಿ ಮತ್ತು ಪ್ರಗತಿಯೊಂದಿಗೆ ಇಡೀ ವಿಶ್ವದ ಪ್ರಗತಿಯನ್ನು ನೋಡಲು ಬಯಸುತ್ತವೆ ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಎರಡೂ ದೇಶಗಳು ಅಸ್ಥಿರತೆ, ಭಯೋತ್ಪಾದನೆ ಮತ್ತು ಅಶಾಂತಿಯ ಬದಲಾಗಿ ಜಗತ್ತಿನಲ್ಲಿ ಸ್ಥಿರತೆ, ಪ್ರೀತಿ ಮತ್ತು ಶಾಂತಿಯನ್ನು ಬಯಸುತ್ತವೆ ಎಂದರು. ಶ್ರೀ ಶ್ರೀ ಹರಿ ಚಂದ್ ಠಾಕೂರ್ ಜೀ ಅವರು ನಮಗೆ ಇದೇ ಮೌಲ್ಯಗಳನ್ನು ನಮಗೆ ನೀಡಿದರು ಎಂದರು.
ಇಂದು, ಭಾರತ ಎಲ್ಲರೊಂದಿಗೆ 'ಎಲ್ಲರ ವಿಕಾಸ ಮತ್ತು ಎಲ್ಲರ ವಿಶ್ವಾಸ' ಎಂಬ ಮಂತ್ರದೊಂದಿಗೆ ಮುನ್ನಡೆಯುತ್ತಿದ್ದರೆ, ಬಾಂಗ್ಲಾದೇಶ 'ಶೊಹೋಜತ್ರಿ'ಯೊಂದಿಗೆ ಸಾಗಿದೆ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು. ಅದೇ ವೇಳೆ, ಬಾಂಗ್ಲಾದೇಶವು ಪ್ರಪಂಚದ ಮುಂದೆ ಅಭಿವೃದ್ಧಿ ಮತ್ತು ಬದಲಾವಣೆಯ ಪ್ರಬಲ ಉದಾಹರಣೆಯನ್ನು ಪ್ರಸ್ತುತಪಡಿಸುತ್ತಿದೆ ಮತ್ತು ಈ ಪ್ರಯತ್ನಗಳಲ್ಲಿ ಭಾರತವು ಬಾಂಗ್ಲಾದೇಶದ 'ಶೋಹೋಜತ್ರಿ' ಆಗಿದೆ ಎಂದರು.
ಓರಾಕಾಂಡಿಯಲ್ಲಿರುವ ಬಾಲಕಿಯರ ಮಾಧ್ಯಮಿಕ ಶಾಲೆಯ ನವೀಕರಣ ಮತ್ತು ಪ್ರಾಥಮಿಕ ಶಾಲೆ ಸ್ಥಾಪಿಸುವುದೂ ಸೇರಿದಂತೆ ಹಲವಾರು ಘೋಷಣೆಗಳನ್ನು ಪ್ರಧಾನಮಂತ್ರಿ ಮಾಡಿದರು. ಶ್ರೀ ಶ್ರೀ ಹರಿ ಚಂದ್ ಠಾಕೂರ್ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಪ್ರತಿವರ್ಷ ನಡೆಯುವ ‘ಬರೌನಿ ಸ್ನಾನ’ ದಲ್ಲಿ ಪಾಲ್ಗೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾರತದಿಂದ ಓರಾಕಾಂಡಿಗೆ ಪ್ರಯಾಣಿಸುತ್ತಾರೆ ಮತ್ತು ಅವರ ಪ್ರಯಾಣವನ್ನು ಸುಗಮಗೊಳಿಸಲು ಹೆಚ್ಚಿನ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಪ್ರಧಾನಮಂತ್ರಿ ತಿಳಿಸಿದರು.
***
(Release ID: 1708240)
Visitor Counter : 232
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam